ಬೆಳ್ತಂಗಡಿ : Tulu Times l ಬೆಳ್ತಂಗಡಿ ತಾಲೂಕಿನ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ದಿನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹೀಗಿದೆ ; ದಿನಾಂಕ 22, ಬುಧವಾರ ಬೆಳಿಗ್ಗೆ ಗಂಟೆ 6-30ರಿಂದ ಉಷಃಪೂಜೆ, ಬೆಳಿಗ್ಗೆ ಗಂಟೆ 8-30ರಿಂದ ದೇವರ ಬಲಿ ಹೊರಟು ಉತ್ಸವ, ಬೆಳಿಗ್ಗೆ ಗಂಟೆ 10.30ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಗಂಟೆ 12.00ಕ್ಕೆ : ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 7-00ಕ್ಕೆ ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ನಡುದೀಪ ಮಹೋತ್ಸವ, ವಸಂತ ಕಟ್ಟೆ ಪೂಜೆ, ನೃತ್ಯಬಲಿ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 7-00 ರಿಂದ 8-30ರ ತನಕ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಕರಾಯ ಘಟಕ ಇದರ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿ, ಬ್ರಹ್ಮಕಲಶೋತ್ಸವ
ಅಧ್ಯಕ್ಷರು ಅತುಲ್ ಕುಮಾರ್ ಕೆ. ಎನ್. ಹಲೇಜಿ ಹಾಗೂ ಬೆಂಗಳೂರಿನ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಭಾಗವಹಿಸಲಿದ್ದಾರೆ. ಅಲ್ಲದೇ, ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ;
ಬೆಳಗ್ಗೆ 10 ಗಂಟೆಗೆ ಯಕ್ಷಗಾನ ತಾಳಮದ್ದಳೆ, ಸಂಜೆ 6.00-7.00 ರಾಮಾಯಣ ನೃತ್ಯರೂಪಕ, ರಾತ್ರಿ 9.00 ರಿಂದ ತುಳು ಹಾಸ್ಯಮಯ ನಾಟಕ ‘ನಾಗರತ್ನ’. ಈ ಎಲ್ಲಾ ಕಾರ್ಯಕ್ರಮಗಳು ತುಳುಟೈಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗುತ್ತದೆ.
Karaya Brahmakalash Today’s (Apr. 21) Programs – ತುಳುಟೈಮ್ಸ್
ಇದನ್ನೂ ಓದಿ :ಕರಾಯ ಬ್ರಹ್ಮಕಲಶ ಇಂದಿನ (ಏ.21) ಕಾರ್ಯಕ್ರಮಗಳು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EBtUA3b-XsA?si=J6y5QPRycdfogvC1









