ಬೆಳ್ತಂಗಡಿ

ಕರಾಯ ಬ್ರಹ್ಮಕಲಶ ಇಂದಿನ‌ (ಏ.18) ಕಾರ್ಯಕ್ರಮಗಳು

ಬೆಳ್ತಂಗಡಿ : Tulu Times l ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಹಸ್ರ ಕಲಶ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಇವತ್ತು ನಡೆಯಲಿರುವ ವಿಶೇಷ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳ ವಿವರ ಇಲ್ಲಿವೆ.

ದಿನಾಂಕ: 18-04-2026ನೇ ಶನಿವಾರ, ಬೆಳಿಗ್ಗೆ ಗಂಟೆ 5.30ರಿಂದ ಉಷಃಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ತತ್ತ್ವಹೋಮ, ತತ್ತ್ವಕಲಶ ಪೂಜೆ, ತತ್ತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ. ಮಧ್ಯಾಹ್ನ ಗಂಟೆ 12 00ಕ್ಕೆ : ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.

ಸಂಜೆ ಗಂಟೆ 5-00ರಿಂದ ದೀಪಾರಾಧನೆ, ನೂತನ ವಾಹನ ಬಿಂಬ ಪರಿಗ್ರಹ, ನೇತ್ರೋನ್ನೀಲನ, ನೂತನ ವಾಹನಬಿಂಬ ಜಲಾಧಿವಾಸ, ತ್ರಿಕಾಲ ಪೂಜೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 7.00 ರಿಂದ 8.30 ರ ತನಕ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪ‌ ಸಮಿತಿಯ ಅಧ್ಯಕ್ಷರು ಅನಂತಕೃಷ್ಣ ಕುದ್ದಣ್ಣಾಯ ಹಾಗೂ ಧಾರ್ಮಿಕ ಉಪನ್ಯಾಸವನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಲಕ್ಷ್ಮೀಶ ಗಬ್ಲಡ್ಕ ಮಾಡಲಿದ್ದು, ವಿವಿಧ ಕ್ಷೇತ್ರದವರನ್ನು ಗುರುತಿಸಿ ಗೌರವಿಸಲಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ನಿಯಮಿತವಾಗಿ ಭಜನಾ ಕಾರ್ಯಕ್ರಮ ನಡೆಯಲಿವೆ. ಈ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ;

ಬೆಳಗ್ಗೆ 11-00 ರಿಂದ 12-00 ಗಂಟೆಯ ತನಕ ವಿದುಷಿ  ತೇಜಸ್ವಿನಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ,

ಸಂಜೆ 4-00 ರಿಂದ 6-30ರ ತನಕ ಪುತ್ತೂರು ತೆಂಕಿಲದ ತಾಳಮದ್ದಳೆ ಧೀಶಕ್ತಿ ಮಹಿಳಾ ಯಕ್ಷ ಬಳಗದವರಿಂದ ವಾಲಿ ಮೋಕ್ಷ ಹಾಗೂ ರಾತ್ರಿ 9.00 ಗಂಟೆಯಿಂದ ನೃತ್ಯ ಗಾನ ವೈಭವ ಕಾರ್ಯಕ್ರಮ ನಡೆಯಲಿಕ್ಕಿದೆ. ಈ ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರವನ್ನು ತುಳುಟೈಮ್ಸ್ ನಲ್ಲಿ ನೀಡಲಾಗುವುದು.

Karaya Brahmakalash Today’s (Apr. 18) Programs – ತುಳುಟೈಮ್ಸ್

ಇದನ್ನೂ ಓದಿ :ಬೇಸಿಗೆಯಲ್ಲಿ ಬೆವರುಕಜ್ಜಿಗೆ ಕಾರಣಗಳು, ಲಕ್ಷಣಗಳು ಮತ್ತು ಪರಿಣಾಮಕಾರಿ ಪರಿಹಾರಗಳು

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/YXeKUQsDFPY?si=LTjjtDHTcfqjvNd7

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page