ರಾಜಕೀಯ

ಯೋಗೇಶ್ ಗೌಡ ಹತ್ಯೆ ಪ್ರಕರಣ – ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಕರ್ನಾಟಕ : Tulu Times l ವಿನಯ್ ಕುಲಕರ್ಣಿ ಅವರಿಗೆ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ತನಿಖೆಯ ಪ್ರಕಾರ, ಯೊಗೇಶ್ ಗೌಡ ಅವರು ಧಾರವಾಡದಲ್ಲಿ ಬೆಳೆಯುತ್ತಿರುವ ರಾಜಕೀಯ ನಾಯಕನಾಗಿದ್ದರಿಂದ, ಅವರನ್ನು ತಡೆಗಟ್ಟಲು ಕೊಲೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತ್ತು.

ಚಾರ್ಜ್‌ಶೀಟ್ ಪ್ರಕಾರ, ವಿನಯ್ ಕುಲಕರ್ಣಿ ಅವರು ಆರೋಪಿಯಾಗಿದ್ದ ಶಿವಾನಂದ ಶ್ರೀಶೈಲ ಬಿರಾದರ್ ಅವರನ್ನು ಸಂಪರ್ಕಿಸಿ, ನ್ಯಾಯಾಲಯದಲ್ಲಿ ತಮ್ಮ ಪರವಾಗಿ ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದರು. ಆದರೆ ನಂತರ ಬಿರಾದರ್ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿ  ನಡೆದುಕೊಂಡಿದ್ದರು.

ನ್ಯಾಯಾಲಯವು ಸಾಕ್ಷ್ಯ ನೀಡಿದ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಿದೆ. ಸೆಕ್ಷನ್ 340 ಅಡಿಯಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಇದರಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಮತ್ತು ಸ್ವತಂತ್ರ ಸಾಕ್ಷಿದಾರರೂ ಸೇರಿದ್ದಾರೆ.

2020ರಲ್ಲಿ ಸಿಬಿಐ ಮೂಲಕ ಬಂಧನ, 2021 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು, 2025 ಜೂನ್‌ನಲ್ಲಿ ಜಾಮೀನು ರದ್ದು, 2026 ಜನವರಿಯಲ್ಲಿ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕಾರ.

ಈ ಪ್ರಕರಣದಲ್ಲಿ ವಾಸುದೇವ ರಾಮ ನಿಲೇಕಣಿ ಮತ್ತು ಸೋಮಶೇಖರ್ ಬಸಪ್ಪ ಅವರಿಗೆ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂದ ಈ ತೀರ್ಪು, ಕಾನೂನು ವ್ಯವಸ್ಥೆಯ ಗಂಭೀರತೆಯನ್ನು ತೋರಿಸುವುದರ ಜೊತೆಗೆ ರಾಜಕೀಯ ವಲಯದಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ಪರಿಣಾಮಗಳು ಇನ್ನಷ್ಟು ಬೆಳಕಿಗೆ ಬರುವ ಸಾಧ್ಯತೆ ಇದೆ.

Yogesh Gowda murder case – MLA Vinay Kulkarni gets life imprisonment – ತುಳುಟೈಮ್ಸ್

ಇದನ್ನೂ ಓದಿ :‘ಜನ ನಾಯಗನ್’ ಸಿನಿಮಾ ಲೀಕ್ ಪ್ರಕರಣ: ಸಹಾಯಕ ಸಂಪಾದಕ ಸೇರಿ ಮೂವರು ಬಂಧನ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/y1g5rwJCyIk?si=Mj4_fHagAqyoYU70

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 16

You cannot copy content of this page