ಬೆಳ್ತಂಗಡಿ : Tulu Times l ಬೆಳ್ತಂಗಡಿ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಕರಾಯದಲ್ಲಿ ನಡೆಯುತ್ತಿರುವ ಸಹಸ್ರ ಕಲಶ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಈ ದಿನದಿಂದ ಅಂದರೆ 15-04-2026 ಬುಧವಾರ ದಿಂದ 25-04-2025 ಶನಿವಾರದವರೆಗೆ ವಿವಿಧ ರೀತಿಯ ವಿಭಿನ್ನ ಕಾರ್ಯಕ್ರಮಗಳು ಮೂಡಿಬರಲಿವೆ.
ಕರಾಯ ಬ್ರಹ್ಮಕಲಶೋತ್ಸವದಲ್ಲಿ ಇಂದಿನ (ಏ. 15) ಕಾರ್ಯಕ್ರಮಗಳು ಹೀಗಿವೆ ; ಬೆಳಗ್ಗೆ 9.30ಕ್ಕೆ ಕರಾಯ ರಾಮಚಂದ್ರ ನಾಯಕ್, ಉಪ್ಪಿನಂಗಡಿ ಹಾಗೂ ಅಚ್ಯುತ ಪ್ರಭು, ಕರಾಯ ಇವರು ದೀಪ ಪ್ರಜ್ವಲನೆ ಮಾಡಲಿದ್ದು, 11.30 ಕ್ಕೆ ಊರ ಹಾಗೂ ಪರವೂರ ಭಕ್ತಾಭಿಮಾನಿಗಳಿಂದ ಚಂಡೆ, ವಾದ್ಯ ಘೋಷಗಳ ವೈಭವಯುತ ಮೆರವಣಿಗೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.
ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಗಂಟೆ 5-30ಕ್ಕೆ ಕ್ಷೇತ್ರದ ತಂತ್ರಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಮಾಡಲಾಗುತ್ತದೆ. ರಾತ್ರಿ ಗಂಟೆ 7-00ಕ್ಕೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಅಚಾರ್ಯಾದಿ ಋತ್ವಿಗ್ವರಣ, ಪ್ರಾಸಾದಶುದ್ಧಿ, ಅಂಕುರಾರೋಪಣ ಇತ್ಯಾದಿ ಪೂಜೆಗಳೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.

ಇದೇ ದಿನ (ಏ.15) ರಾತ್ರಿ ಸಮಯ 7.00 ರಿಂದ 8.30 ರ ತನಕ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿಕ್ಕಿದೆ. ಈ ಮಧ್ಯೆ ಬೆಳಗ್ಗೆ ಮತ್ತು ಸಂಜೆ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭ ವಿವಿಧ ಕ್ಷೇತ್ರದವರನ್ನು ಗುರುತಿಸಿ ಗೌರವಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ;
ರಾತ್ರಿ 6.00 ಗಂಟೆಯಿಂದ 7.00 ಗಂಟೆಯ ತನಕ ಉಪ್ಪಿನಂಗಡಿ ಸುರೇಶ್ ಗಜಾನನ ಸ್ಟೋರ್ಸ್ ಪ್ರಾಯೋಜಕತ್ವದಲ್ಲಿ ಪುತ್ತೂರು ಕಲಾ ಶಿಕ್ಷಣ ಸಂಸ್ಥೆ ಕಲ್ಲಾರೆ ಇವರಿಂದ “ಗಾನಯಾನ” ಕಾರ್ಯಕ್ರಮ ಹಾಗೂ ರಾತ್ರಿ 7.00 ರಿಂದ 8.30 ರ ತನಕ ಸೂರ್ಯ ವಂದನ ಭಜನೋತ್ಸವ ಕಾರ್ಯಕ್ರಮ ಮೂಡಿಬರಲಿದೆ. ಜೊತೆಗೆ, ತುಳುಟೈಮ್ಸ್ ನಲ್ಲಿ ಈ ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರ ಇರಲಿದೆ.
Karaya Brahmakalash Today’s (Apr. 15) Programs – ತುಳುಟೈಮ್ಸ್
ಇದನ್ನೂ ಓದಿ :‘ಸ್ಕಿಜೋಫ್ರೇನಿಯಾ’ ನಮ್ಮ ದೇಹದ ಯಾವ ಅಂಗಕ್ಕೆ ಸೇರಿದ ಕಾಯಿಲೆ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/sFhnDt1F1kE?si=tzOntZrstNtp1pmL










