ಬೆಳ್ತಂಗಡಿ

ಕರಾಯ ಬ್ರಹ್ಮರಥ ಪುರಪ್ರವೇಶ : ಐತಿಹಾಸಿಕ ಶೋಭಾಯಾತ್ರೆಗೆ ಸಾಕ್ಷಿಯಾದ ಭಕ್ತರು

ಬೆಳ್ತಂಗಡಿ : Tulu Times l ಸಂಜೆ 4-00 ಗಂಟೆಗೆ ಸರಿಯಾಗಿ ಶ್ರೀ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯಕ್ಕೆ ವೈಧಿಕ ವಿಧಿವಿಧಾನದೊಂದಿಗೆ ಹೊರಟ ಬ್ರಹ್ಮರಥದ ಶೋಭಾಯಾತ್ರೆ ಬಹಳ ಅದ್ಧೂರಿಯಿಂದ ನಡೆಯಿತು.

ಈ ಶೋಭಾಯಾತ್ರೆಗೆ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರುಗಳಾದ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಹಾಗೂ ನಾಗಾರ್ಜುನ್ ರಾವ್ ಇವರುಗಳು ಚಾಲನೆ ನೀಡಿದರು. ಇದು ಐತಿಹಾಸಿಕ ಕಾರ್ಯಕ್ರಮವಾಗಿರುವುದರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ವೀರಗಾಸೆ, ಕೇರಳ ತೈಯಮ್, ಡೊಳ್ಳು ಕುಣಿತ, ವಾಯಲಿನ್, ಚೆಂಡೆ, ಮತ್ತು ಒಂದು ಸಾವಿರ ಭಜಕರನ್ನೊಳಗೊಂಡ 50 ಭಜನಾ ತಂಡ, ಕೀಲು ಕುದುರೆ ವೈವಿಧ್ಯಮಯ ಸಿಡಿಮದ್ದು ಪ್ರದರ್ಶನದೊಂದಿಗೆ, ವಿವಿಧ ಕಲಾ ಪ್ರಕಾರಗಳ ಅದ್ಧೂರಿ ಶೋಭಾಯಾತ್ರೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು.

ಇಲ್ಲಿಯ ವಿಶೇಷವೆಂಬಂತೆ ಭಕ್ತಾದಿಗಳೆಲ್ಲರಿಗೂ‌ ಕುಳಿತುಕೊಂಡು ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಸ್ವತಃ ಶಾಸಕರೇ ಅನ್ನಪ್ರಸಾದ ಬಡಿಸಿದ್ದರು. ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾಧಿಗಳಿಗೆ ಇದೊಂದು ಐತಿಹಾಸಿಕ ಕ್ಷಣವಾಗಿರುವ ಶೋಭಾಯಾತ್ರೆಯಾಗಿತ್ತು. ಜೊತೆಗೆ, ವಿವಿಧ ಕಲಾಪ್ರಕಾರಗಳೊಂದಿಗೆ ನಡೆಯುವ ಶೋಭಾಯಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಪ್ರತಿರೂಪವಾಗಿವೆ. ಇವುಗಳನ್ನು ಸಂರಕ್ಷಿಸಿ ಮುಂದುವರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Devotees witness the historic procession of Karaya Brahmaratha entering the city – ತುಳುಟೈಮ್ಸ್

ಇದನ್ನೂ ಓದಿ :ಬೆಂಗಳೂರಿನಲ್ಲಿ ಬೆಕ್ಕಿನ ಮರಿ ವಿವಾದ: ನೆರೆಹೊರೆಯವರ ನಡುವೆ ಜಗಳ, ಪೊಲೀಸರ ಮಧ್ಯಸ್ಥಿಕೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/sFhnDt1F1kE?si=buq9SsmhqVK-1I57

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 13

You cannot copy content of this page