ಬಂದಾರು : Tulu Times l ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಇದರ ಏಪ್ರಿಲ್ 02 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊಂದಿಗೆ ಬಹಳ ಸುಸೂತ್ರವಾಗಿ ನಡೆದಿರುತ್ತದೆ.

ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಗಳ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಎಪ್ರಿಲ್ 09 ರಂದು ಬೆಳಗ್ಗೆ ಗಣಹವನ, ಕವಟೋದ್ಘಾಟನೆ, ಕಟೀಲು ಮೇಳದ ದೇವರ ಮಹಾಪೂಜೆ, ಶ್ರೀ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಪಿಲಿಚಾಮುಂಡಿ ದೈವದ ನೇಮೋತ್ಸವ, ಶ್ರೀ ದೇವರ ಆರಾಟೋತ್ಸವ, ಅವಭ್ರತ ಸ್ನಾನ, ಧ್ವಜಾ ಅವರೋಹಣ, ಭಜನೆ, ಚೌಕಿ ಪೂಜೆ, ರಾತ್ರಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಕುರಾಯ ಬಂದಾರು ಇದರ ವತಿಯಿಂದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣನವರ ಆಶೀರ್ವಾದಗಳೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿರುತ್ತದೆ.

ಈ ಸಂದರ್ಭದಲ್ಲಿ ಗಣ್ಯರು, ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ , ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು, ಅರ್ಚಕರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
Complete Sri Devi Mahatme Yakshagana performance on the occasion of the annual festival of Kuraya Sri Sadashiva Devara – ತುಳುಟೈಮ್ಸ್
ಇದನ್ನೂ ಓದಿ :ಸರ್ಕಾರಿ ಶಾಲಾ ಶಿಕ್ಷಕರಿಗೆ ಭರ್ಜರಿ ಸಿಹಿ ಸುದ್ದಿ: ಮುಖ್ಯಶಿಕ್ಷಕರ ಹುದ್ದೆಗೆ ಪದೋನ್ನತಿ, ವೇತನ ಹೆಚ್ಚಳ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/fyRbYgSgCAw?si=-3XXXisP8CMsQ0Gk











