ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಅಪ್ಪು ಅಜರಾಮರ! ನಾಲ್ಕು ವರ್ಷಗಳ ಹಿಂದೆ ನಡೆದಿದ್ದೇನು?

Puneeth Rajkumar ಅವರು ನಿಧನ ಹೊಂದಿ ನಾಲ್ಕು ವರ್ಷಗಳೇ ಸಂದಿವೆ. ಚಂದನವನದಲ್ಲಿ ಅಪ್ಪು ಸೂಪರ್​ಸ್ಟಾರ್ ಆಗಿ ಮೆರೆಯುವಾಗಲೇ ಅಕಾಲಿಕ ಮರಣ ಹೊಂದಿದರು. ಸದಾ ಉತ್ಸಾಹದಿಂದಿದ್ದ ಪುನೀತ್‌ ಅವರು ಅಗಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ವಿಧಿ ಆಟಕ್ಕೆ ನಟಸಾರ್ವಭೌಮ ಮರೆಯಾದರು. ಕರುನಾಡ ಯುವರತ್ನ ಇಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಈಗಲೂ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.

ಅಕ್ಟೋಬರ್ 28ರಂದು ಸಂಗೀತ ಸಂಯೋಜಕ ಗುರುಕಿರಣ್ ಬರ್ತ್​ಡೇ. ಪವರ್‌ ಸ್ಟಾರ್‌ ಪುನೀತ್ ಆಪ್ತ ಹಾಗೂ ಗುರುಕಿರಣ್‌ ಇಬ್ಬರೂ ಆತ್ಮೀಯರು. ಈ ಕಾರಣಕ್ಕೆ ಪುನೀತ್ ಅವರನ್ನು ಪಾರ್ಟಿಗೆ ಆಹ್ವಾನ ಮಾಡಿದ್ದರು. ಪುನೀತ್ ಅವರು ಈ ಪಾರ್ಟಿಗೆ ಬಂದಿದ್ದ ಆಪ್ತರ ಜೊತೆ ಮಾತನಾಡಿ ಅಲ್ಲಿಂದ ಮನೆಗೆ ಬಂದಿದ್ದರು.

2021ರ ಅಕ್ಟೋಬರ್ 29ರಂದು ಶಿವ ರಾಜ್​ಕುಮಾರ್ ನಟನೆಯ, ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಪುನೀತ್ ಅವರು ಟ್ವಿಟರ್ ಮೂಲಕ ಶುಭಾಶಯ ಕೋರಿದ್ದರು.

ಮನೆಯಲ್ಲಿಯೇ ಇರುವಾಗ 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಉಂಟಾಯಿತು ಎನ್ನಲಾಗಿದೆ. ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಆರೋಗ್ಯದ ವಿಷಯದಲ್ಲಿ ಸದಾ ಕಾಳಜಿ ವಹಿಸುತ್ತಿದ್ದ, ಫಿಟ್‌ನೆಸ್‌ ಮಾಡುತ್ತಿದ್ದ ಆಗಿದ್ದ ಅಪ್ಪು ಈ ರೀತಿ ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 12 ಗಂಟೆ ವೇಳೆಗೆ ಅವರು ನಿಧನ ಹೊಂದಿದ್ದು ಖಚಿತವಾಗಿತ್ತು. ಆದರೆ, ಸರ್ಕಾರದವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕವೇ ಈ ಸುದ್ದಿಯನ್ನು ಪ್ರಕಟಿಸಿದರು. ಇವರ ಅಕಾಲಿಕ ಮರಣದಿಂದ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು.

ಇದನ್ನೂ ಓದಿ: Belthangady: ಗೋಮಾಂಸ ಅಡ್ಡೆಗೆ ಪೊಲೀಸ್ ದಾಳಿ; ಇಬ್ಬರ ಬಂಧನ

======================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page