ಬೆಂಗಳೂರು : Tulu Times l ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿ ಹಾಗೂ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಸಮಸ್ಯೆ ಗಂಭೀರವಾಗಿ ತಲೆದೋರಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಗಳವರೆಗೆ ಅನೇಕ ಕುಟುಂಬಗಳು ಗ್ಯಾಸ್ ಸಿಲಿಂಡರ್‌ಗಳ ಕೊರತೆ, ಬೆಲೆ ಏರಿಕೆ ಹಾಗೂ ಸರಿಯಾದ ಸರಬರಾಜಿನ ಅಭಾವದಿಂದ ಸಂಕಷ್ಟ ಅನುಭವಿಸುತ್ತಿವೆ. ಈ ಕಾರಣ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಕೆ.ಹೆಚ್ ಮುನಿಯಪ್ಪ ಮುಖ್ಯವಾದ ವಿಚಾರವನ್ನು ಹಂಚಿಕೊಂಡಿರುವುದು ವರದಿಯಾಗಿದೆ.
ಹೌದು…! ದಿನದಿಂದ ದಿನಕ್ಕೆ ಸಿಲಿಂಡರ್ ಸಮಸ್ಯೆ ಹೆಚ್ಚಾಗುತ್ತಿರುವಾಗ, ಕಮರ್ಷಿಯಲ್ ಸಿಲಿಂಡರ್ ಗಳ ಸಮಸ್ಯೆಗಳನ್ನು ಬಗೆಹರಿಯದಂತಾಗಿದ್ದು, ಹೋಟೆಲ್ ಮಾಲೀಕರು ಬೀಗ ಜಡಿದು ಅದೆಷ್ಟೋ ಕೆಲಸಗಾರರ ಜೀವನವೂ ಸಂಕಷ್ಟಕ್ಕೆ ತಲುಪುವಂತೆ ಮಾಡಿತ್ತು. ಅದಕ್ಕಾಗಿ ಸಚಿವ ಕೆ. ಎಚ್ ಮುನಿಯಪ್ಪ ಮೀಟಿಂಗ್ ನಡೆಸಿದ್ದು ಸಿಲಿಂಡರ್ ವಿತರಣಾ ಸಂಸ್ಥೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೇಂದ್ರ ನೀಡುತ್ತಿದ್ದ 9000 ಸಿಲಿಂಡರ್ ಸಂಖ್ಯೆಗಳಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.
ಪ್ರತೀ ನಿತ್ಯ ರಾಜ್ಯಕ್ಕೆ 10,000 ಸಿಲಿಂಡರ್ ನೀಡಲು ಕೇಂದ್ರ ನಿರ್ಧರಿಸಿದೆ. ಅದರಲ್ಲೂ ಕೆಲವೊಂದು ಸೂಚನೆಗಳನ್ನು ನೀಡಲಾಗಿದ್ದು, ಮೊದಲು ಕಮರ್ಷಿಯಲ್ ಸಿಲಿಂಡರ್ ಬಳಕೆದಾರರು ಗೇಲ್ ಕಂಪನಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಬ್ಲಾಕ್ ಮಾರ್ಕೆಟ್ ತಡೆಯಲು ಇದು ಸಹಕಾರಿ ಆಗಿದ್ದು, ಒಂದು ವಾರದೊಳಗೆ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ಹೇಳಿರುತ್ತಾರೆ.
ಮುಖ್ಯಮಂತ್ರಿಯವರು ಎರಡನೇ ಪತ್ರ ಬರೆದ ನಂತರ ಈ ಸ್ಪಂದನೆ ಸಿಕ್ಕಿದ್ದು, ಶೇಕಡಾ 20 ಹೆಚ್ಚುವರಿ ಸಿಲಿಂಡರ್ ಕೊಡೋಕೆ ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ಮುಂದಿನ ಸೋಮವಾರ ಕೂಡ ನಾವು ಸಭೆ ಸೇರುತ್ತೇವೆ ಎಂದು ಸಚಿವರು ಸಭೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. ಇಷ್ಟು ದಿನ ಹೋಟೆಲ್ ಗಳು ಅನುಭವಿಸುತ್ತಿದ್ದ ಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿದಂತಾಗಿದೆ.
Supply of 10,000 commercial cylinders to the state daily! – ತುಳುಟೈಮ್ಸ್
ಇದನ್ನೂ ಓದಿ : ಮಾರ್ಚ್ 23, 2026ರ ದಿನದ ರಾಶಿಫಲ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/p4-vd_M93Z8?si=vmn_iyeDyrPzq31G










