ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜೈಲಿನಲ್ಲಿರುವ ದರ್ಶನ್ ಸಲ್ಲಿಸಿದ್ದ ಮನವಿಗೆ ಅಸ್ತು ಹೇಳಿದ ನ್ಯಾಯಾಲಯ !

ಬೆಂಗಳೂರು: Tulu Times l ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ನಟ ದರ್ಶನ್ ಅವರಿಗೆ ಭಾಗಶಃ ಪರಿಹಾರ ನೀಡಿದ್ದು, ಸಹ ಆರೋಪಿಯಾಗಿರುವ ಎ3 ಪವನ್ ಗೆ ₹5,000 ದಂಡ ವಿಧಿಸಿದೆ.

ದರ್ಶನ್‌ಗೆ ಕುಟುಂಬ ಭೇಟಿ ಅನುಮತಿ ;

ಜೈಲಿನಲ್ಲಿ ಇರುವ ದರ್ಶನ್ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಅವರಿಗೆ ಕುಟುಂಬದವರು ಹಾಗೂ ಸ್ನೇಹಿತರನ್ನು ಭೇಟಿಯಾಗಲು ಅನುಮತಿ ನೀಡಿದೆ. ಆದರೆ ಈ ಭೇಟಿಗಳು ಜೈಲು ನಿಯಮಾವಳಿಗಳ ಪ್ರಕಾರ ಮಾತ್ರ ನಡೆಯಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ಈ ಆದೇಶದಿಂದ ಬಂಧನಾವಧಿಯಲ್ಲಿ ದರ್ಶನ್‌ಗೆ ಕೆಲವು ಮಟ್ಟಿನ ನೆಮ್ಮದಿ ದೊರೆತಂತಾಗಿದೆ.

ಇದೇ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಪವನ್ (A3) ತನಿಖಾ ಅಧಿಕಾರಿಯನ್ನೇ ಆರೋಪಿಯನ್ನಾಗಿ ಸೇರಿಸಲು ಮನವಿ ಸಲ್ಲಿಸಿದ್ದನು. ಪೊಲೀಸ್ ಅಧಿಕಾರಿಗಳು ಸಾಕ್ಷ್ಯಗಳನ್ನು ಕೃತಕವಾಗಿ ಸೃಷ್ಟಿಸಿದ್ದಾರೆ ಎಂದು ಅವನು ಆರೋಪಿಸಿದ್ದ.

ಮೊಬೈಲ್ ವಶಪಡಿಸಿಕೊಂಡಾಗ ತೆಗೆದ ಫೋಟೋಗಳಲ್ಲಿ ಕಾಣಿಸಿದ ಟೈಲ್ಸ್ ಆಧರಿಸಿ ಸುಳ್ಳು ಸಾಕ್ಷ್ಯ ಸೃಷ್ಟಿಸಲಾಗಿದೆ ಎಂದು ಪವನ್ ವಾದಿಸಿದ್ದ. ಆದರೆ, ಈ ವಾದಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿಯನ್ನು ಆಧಾರರಹಿತ ಎಂದು ತಿರಸ್ಕರಿಸಿದೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ಅವನಿಗೆ ₹5,000 ದಂಡ ವಿಧಿಸಲಾಗಿದೆ.

ಈ ದಂಡದ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಈ ಎರಡು ತೀರ್ಪುಗಳು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಬಹುದಾಗಿದೆ.

The court rejected the plea filed by Darshan, who is in jail – ತುಳುಟೈಮ್ಸ್

ಇದನ್ನೂ ಓದಿ : ಕರ್ನಾಟಕದಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/B1QF8L9fyqM?si=WFThq7Q1kpUPJcXe

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page