ಬ್ರೇಕಿಂಗ್ ನ್ಯೂಸ್
ರಾಜಕೀಯ

Bangalore:ದೆಹಲಿಗೆ ಹೊರಟ ಡಿಕೆ ಶಿವಕುಮಾರ್,ಸಿಎಂ ಆಗೋದು ಕನ್ಪರ್ಮ್?

Bangalore:ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ನಡೆಯುವ ಸೂಚನೆ ಸಿಗ್ತಿದೆ.ಸಚಿವ ಸಂಪುಟ ಪುನಾರಚಣೆಯ ಕುರಿತಂತೆ ಈಗಾಗ್ಲೇ ಕಾಂಗ್ರೆಸ್ ನಾಯಕರು ಸಚಿವರು ಮಾತಾನಾಡಿದ್ದಾರೆ.ದೀಪಾವಳಿ ಸಂದರ್ಭದಲ್ಲಿ ಸರ್ಕಾರದಲ್ಲಿ ಬದಲಾವಣೆ ಆಗುತ್ತೆ ಅನ್ನೋ ಮಾತುಗಳು ಕೇಳಿಬರ್ತಿತ್ತು.ಡಿಕೆಶಿವಕುಮಾರ್ ರನ್ನು ಮುಖ್ಯಮಂತ್ರಿ ಮಾಡೋದಿಕ್ಕೆ ಅಪ್ತರು ಸಾಕಷ್ಟು ಕಸರತ್ತು ನಡೆಸಿದ್ದರು.ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಐದುವರ್ಷದ ವರೆಗೆ ಸಿಎಂ ಆಗಿರುತ್ತೇನೆ ಎಂದು ಹೇಳಿರುವುದು ಡಿಕೆಶಿ ಅಪ್ತರ ಮುನಿಸಿಗೆ ಕಾರಣವಾಗಿತ್ತು.ಆದ್ರೆ ಡಿಕೆಶಿವಕುಮಾರ್ ಮಾತ್ರ ಸೈಲೆಂಟಾಗಿ ಪಾರ್ಕ್ ಗಳಲ್ಲಿ ಸುತ್ತಾಡುತ್ತ ದೇವರ ದರ್ಶನದಲ್ಲಿ ಬ್ಯುಸಿಯಾಗಿದ್ರು.ಆದ್ರೆ ಇದೀಗ ರಾಜ್ಯ ಸರ್ಕಾರದಲ್ಲಿ ಟ್ಟಿಸ್ಟ್ ಸಿಗುವ ಸಾಧ್ಯತೆ ಕಂಡುಬರುತ್ತಿದೆ.

ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಇಂದು ಮಾತಾಡುತ್ತಾ  ಹಳಬರು ಹೋಗಿ ಹೊಸಬರು ಸಚಿವಸಂಪುಟಕ್ಕೆ ಬರ್ತಾರೆ ಎಂಬ ಮಾತುಗಳನ್ನಾಡಿದ್ದಾರೆ.ಇನ್ನೊಂದೆಡೆ ಸಚಿವ ಕೃಷ್ಣ ಭೈರೇಗೌಡ ನಾವು ಕಾಂಗ್ರೆಸ್ಸಿನ ಕಟ್ಟಾಳುಗಳು,ಹೈಕಮಾಂಡ್ ಏನು ಹೇಳುತ್ತೆ ಅದನ್ನು ಮಾಡೋಕೆ ರೆಡಿ ಎಂದಿದ್ದಾರೆ.ಇವ್ರೆಲ್ಲರ ಹೇಳಿಕೆಗಳನ್ನು ಗಮನಿಸಿದ್ರೆ ಸಚಿವ ಸಂಪುಟ ಬದಲಾವಣೆ ಆಗುವುದು ಬಹುತೇಕ ನಿಶ್ವಿತವಾಗಿದೆ.
ಆದರೆ ಸಚಿವ ಸಂಪುಟ ಪುನಾರಚಣೆಯ ಜೊತೆಗಿರುವ ಅತೀ ದೊಡ್ಡ ಕುತೂಹಲ ಸಿಎಂ ಬದಲಾವಣೆಯ ವಿಚಾರ.ಡಿಕೆಶಿವಕುಮಾರ್ ಮುಖ್ಯಮಂತ್ರಿ ಆಗ್ತಾರಾ ಎರಡುವರೆ ವರ್ಷದ ಅವಧಿಗೆ ಸಿಎಂ ಬದಲಾವಣೆ ಆಗುತ್ತೆ ಎಂಬ ಚರ್ಚೆ ನಿಜವಾಗುತ್ತಾ ಎಂಬ ಪ್ರಶ್ನೆ ಹಲವರಲ್ಲಿದೆ.ಈ ಬಗ್ಗೆ ಡಿಕೆಶಿವಕುಮಾರ್,ಸಿದ್ದರಾಮಯ್ಯ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಇಂದು ಡಿಕೆಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.ಹೈಕಮಾಂಡ್ ಬುಲಾವಿನ ಮೇರೆಗೆ ಡಿಕೆಶಿ ದೆಹಲಿಗೆ ತೆರಳ್ತಿದ್ದಾರೆ ಅನ್ನೋ ಮಾಹಿತಿಯಿದೆ.ಈ ಹಿಂದೆ ಎರಡುವರೆ ವರ್ಷದ ಅವಧಿಗೆ ಡಿಕೆಶಿ ಮತ್ತು ಸಿದ್ದರಾಮಯ್ಯರ ಮಧ್ಯೆ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿದೆ ಅನ್ನೋ ಮಾತುಗಳು ಕೇಳಿಬರ್ತಿತ್ತು.ಆದ್ರೆ ಅದೆಷ್ಟೂ ಸತ್ಯ ಅನ್ನೋದು ಹೈಕಮಾಂಡ್ ಮತ್ತು ಡಿಕೆಶಿ ಸಿದ್ದರಾಮಯ್ಯರಿಗಷ್ಟೇ ಗೊತ್ತಿರೋದಿಕ್ಕೆ ಸಾಧ್ಯ.

ಇಂದು ಡಿಕೆಶಿವಕುಮಾರ್ ದೆಹಲಿಗೆ ತೆರಳ್ತಿರೋದು ರಾಜಕೀಯ ವಲಯದಲ್ಲಿ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.ಎಲ್ಲಾ ಕಾಂಗ್ರೆಸ್ ನಾಯಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂಬ ಮಾತುಗಳನ್ನು ಹೇಳುತ್ತಿರುವಾಗ,ಹೈಕಮಾಂಡ್ ನಿರ್ಧಾರ ಏನಿರಬಹುದು ಎಂಬ ಕುತೂಹಲ ಎಲ್ಲರದ್ದೂ,ರಾಜಕೀಯ ವಲಯದ ಹಲವಾರು ಪ್ರಶ್ನೆಗಳಿಗೆ ಇವತ್ತಿನ ಡಿಕೆಶಿ ದೆಹಲಿ ಭೇಟಿಯಿಂದ ಉತ್ತರ ಸಿಗಬಹುದು.

ಇದನ್ನೂ ಓದಿ:Rss ban:ಯಾರ್ರೀ…ಅದು ಕಲ್ಲಡ್ಕ ಪ್ರಭಾಕರ ಭಟ್,ಅವ್ರ ಅಪ್ಪನಾದ್ರೂ ಸರಿ?

…………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page