ಸುಬ್ರಹ್ಮಣ್ಯ: Tulu Times | ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೊಲ್ಲರಹಟ್ಟಿಮಹಾಲಿಂಗಪ್ಪ (60) ಅವರು ಸುಬ್ರಹ್ಮಣ್ಯ ಮಠದ ಗೋಶಾಲೆಯ ಕಾರ್ಮಿಕರಾಗಿದ್ದು, ಇವರು ಮಲಗಿದ್ದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಆಡಳಿತಾತ್ಮಕ ತನಿಖೆ ಕ್ರಿಮಿನಲ್ ಪ್ರಕರಣಕ್ಕೆ ಅಡ್ಡಿಯಲ್ಲ — ಸುಪ್ರೀಂ ಕೋರ್ಟ್
ಸುಮಾರು ಐದು ವರ್ಷಗಳಿಂದ ಗೋಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಗೋಶಾಲೆಯಲ್ಲೇ ವಸತಿ ವ್ಯವಸ್ಥೆಯನ್ನೂ ಹೊಂದಿದ್ದರು. ರಾತ್ರಿ ಮಲಗಿ ಬೆಳಗ್ಗೆ ಏಳದೇ ಇದ್ದದರಿಂದ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಅವರು ಮೃತಪಟ್ಟಿದ್ದಾರೆ ಎನ್ನುವುದು ತಿಳಿದುಬಂದಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯು ಸುಬ್ರಹ್ಮಣ್ಯ ಗ್ರಾಮದಲ್ಲಿ ಸುಸಜ್ಜಿತ ಗೋಶಾಲೆಯನ್ನು ನಿರ್ವಹಿಸುತ್ತಿದೆ. ಈ ಗೋಶಾಲೆಯಲ್ಲಿ ನೂರಾರು ದೇಸಿ ಹಸುಗಳನ್ನು ಅತ್ಯಂತ ಕಾಳಜಿಯಿಂದ ಸಾಕುತ್ಪಾಗುತ್ತಿದೆ, ಗೋಪೂಜೆ ಮತ್ತು ಗೋ-ಸೇವೆಗೆ ಇಲ್ಲಿ ಅವಕಾಶವಿದೆ. ಇದು ಪಶ್ಚಿಮ ಘಟ್ಟಗಳ ಪರಿಸರದಲ್ಲಿ ನೆಲೆಸಿದ್ದು, ಕುಮಾರಧಾರಾ ನದಿಯ ತೀರದಲ್ಲಿದೆ.
ಇದನ್ನೂ ಓದಿ: ಬೆಳ್ತಂಗಡಿ: ಆಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess
Subramanya cowshed worker dies- ತುಳುಟೈಮ್ಸ್










