Biggboss Kannada: ಕನ್ನಡ ಬಿಗ್ಬಾಸ್ ಮನೆ ಸಾಕಷ್ಟು ವಿವಾದ ಕೇಂದ್ರವಾಗಿದೆ. ಶುರುವಾದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ವಿವಾದ ಉಂಟಾಗಿತ್ತು. ಮನೆಯ ಒಳಗೆ ಮಾತ್ರವಲ್ಲದೆ, ಬಿಗ್ ಬಾಸ್ ಸೆಟ್ ಮೇಲೆಯೂ ಮಾಲಿನ್ಯ ನಿಯಂತ್ರಣ ಮಂಡಳಿ ಬಿಸಿ ಮುಟ್ಟಿಸಿತ್ತು. ಈಗ ಬಿಗ್ಬಾಸ್ ಸ್ಪರ್ಧಿ ಮೇಲೆ ದೂರು ದಾಖಲಾಗಿದೆ.
ಕಳೆದ ವಾರ ದೊಡ್ಮನೆಯಲ್ಲಿ ಗೆಜ್ಜೆ ವಾದ ಉಂಟಾಗಿತ್ತು. ಅಶ್ವಿನಿ ಮತ್ತು ಜಾಹ್ನವಿ ಮಾಡಿದ ಎಡವಟ್ಟಿಗೆ ಪ್ರೇಕ್ಷಕರು ಕೋಪಗೊಂಡಿದ್ದರು. ವಾರಾಂತ್ಯದಲ್ಲಿ ಕಿಚ್ಚ ಇವರಿಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಅಶ್ವಿನಿ ಗೌಡ ಹಾಗೂ ಜಾಹ್ನವಿ ಮಾತನಾಡುವ ಸಂದರ್ಭದಲ್ಲಿ ಕಂಟೆಸ್ಟೆಂಟ್ ರಕ್ಷಿತಾ ಎಸ್ ಕ್ಯಾಟಗರಿ ಸೇರಿರೋದು ಎಂದು ಪದಬಳಕೆ ಮಾಡಿದ್ದರು.
ಈ ಹೇಳಿಕೆಗೆ ಸಿಡಿದೆದ್ದ ಹಿರಿಯ ವಕೀಲ ಪ್ರಶಾಂತ್ ಮೆಹ್ತಾಲ್, ಅಶ್ವಿನಿ ಗೌಡ ವಿರುದ್ಧ ಜಾತಿ ನಿಂದನೆ, ವ್ಯಕ್ತಿ ನಿಂದನೆ ಆರೋಪದಡಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಕೆಲದಿನಗಳ ಹಿಂದಷ್ಟೇ ಬಿಗ್ ಬಾಸ್ ಮನೆಗೆ ಮಾಲಿನ್ಯ ನಿಯಂತ್ರಣ ಮಂಡಲಿಯಿಂದ ಬಿಸಿ ಮುಟ್ಟಿತ್ತು. ಇದ್ರಿಂದ ಬಿಗ್ಬಾಸ್ ಮನೆಗೆ ಬೀಗ ಹಾಕಲಾಗಿತ್ತು. ಇದೀಗ ಅಶ್ವಿನಿ ಗೌಡ ಪದಬಳಕೆಯಿಂದ ಬಿಗ್ಬಾಸ್ ಮನೆ ಮತ್ತೊಂದು ವಿವಾದಕ್ಕೆ ಸಿಲುಕಿದಂತೆ ಆಗಿದೆ.
ರಕ್ಷಿತಾಳಿಗೆ ‘ಎಸ್’ ಕ್ಯಾಟಗರಿ ಅನ್ನೊ ಪದ ಬಳಕೆ ಸಾಕಷ್ಟು ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ ಕ್ಯಾಟಗರಿ ಅಂತ ಪದ ಬಳಕೆ, ಜಾತಿ ನಿಂದನೆ ಮತ್ತು ವ್ಯಕ್ತಿ ನಿಂದನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ, ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಿರಿಯ ವಕೀಲ ಪ್ರಶಾಂತ್ ಮೆಹ್ತಾಲ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Mangaluru: ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಸಂದೇಶ – ಎರಡು ಖಾತೆಗಳ ವಿರುದ್ಧ ಎಫ್ಐಆರ್
===========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











