ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಧರ್ಮಸ್ಥಳ: ಬಸ್ ಹಾಗೂ ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಧರ್ಮಸ್ಥಳ: Tulu Times | ಪಾಂಗಳ ತಿರುವಿನಲ್ಲಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ  ಗಾಯಗೊಂಡಿದ್ದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ನಾಟಿವೈಧ್ಯರಾಗಿರುವ ಕರಿಯಪ್ಪ ಗೌಡ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಊಟದ ಬಳಿಕ ವೀಳ್ಯದೆಲೆ ತಿನ್ನೋದು ಯಾಕೆ ಗೊತ್ತಾ..?

ಪಾಂಗಳ ತಿರುವಿನಲ್ಲಿ ಬೈಕ್ ಸವಾರ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದರು.   ಬೈಕ್  ರಸ್ತೆಯ ಬಲಬದಿಗೆ ತೆಗೆದುಕೊಳ್ಳುವ ವೇಳೆ ವೇಗವಾಗಿ ಬಂದ ಬಸ್ ಬೈಕಿಗೆ ಡಿಕ್ಕಿಹೊಡೆದಿದೆ.  ಅದನ್ನು ಎಳೆಯುತ್ತಾ ರಸ್ತೆಯ ಬಲಬದಿಗೆ ಮುಂದೆ ಬಂದಿದೆ. ಇದರಿಂದ ಧರ್ಮಸ್ಥಳ ದಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಕಾರು ಹಾಗೂ ಬಸ್ ನಡುವೆ ಸಿಲುಕಿದ ಬೈಕ್ ನುಜ್ಜು ಗುಜ್ಜಾಗಿದೆ. ಬೈಕ್ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡು, ಕರಿಯಪ್ಪ ಗೌಡ  ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ  ಬೆಳಗ್ಗೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ವೀರ ಕಂಬಳ ಟ್ರೈಲರ್ ರಿಲೀಸ್..ಮತ್ತೊಮ್ಮೆ ತುಳುನಾಡಿನ ವೈಭವ!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

Dharmasthala: Man injured in bus and bike accident dies- ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page