ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮುಸಲ್ಮಾನರ ರಂಜಾನ್‌ ಹಬ್ಬದ ಮಹತ್ತ್ವ ಏನು ಗೊತ್ತಾ..?

ಕರ್ನಾಟಕ: Tulu Times | ಫೆ. 19ರಿಂದ ಪವಿತ್ರ ರಂಜಾನ್ ಮಾಸ ಪ್ರಾರಂಭವಾಗುತ್ತದೆ. ಹೀಗಾಗಿ ಮುಸಲ್ಮಾನ ಬಾಂಧವರು ರಂಜಾನ್‌ ತಿಂಗಳಿನಲ್ಲಿ ಅತ್ಯಂತ ಪೂಜನೀಯ ಭಾವನೆಯಿಂದ ದೇವರನ್ನು ಪೂಜಿಸುತ್ತಾರೆ.

ಉಪವಾಸ, ಪ್ರಾರ್ಥನೆ ಮಾಡೋದು ಯಾಕೆ..?
ಸೂರ್ಯೋದಯಕ್ಕೂ ಮುನ್ನ ಸೆಹ್ರಿ ಸೇವಿಸಿ, ಸೂರ್ಯಾಸ್ತದ ನಂತರ ಇಫ್ತಾರ್ ಮೂಲಕ ಉಪವಾಸ ಮುರಿಯಲಾಗುತ್ತದೆ. ಉಪವಾಸ ಕೇವಲ ಆಹಾರ ತ್ಯಾಗವಲ್ಲ, ಮನಸ್ಸಿನ ಶುದ್ಧೀಕರಣ, ಮಾತು ಹಾಗೂ ನಡವಳಿಕೆಯ ಶಿಸ್ತು ಈ ಹಬ್ಬದ ಉದ್ದೇಶವಾಗಿದೆ. ಇಸ್ಲಾಂ ಧರ್ಮದಲ್ಲಿ ಇದು ಅತ್ಯಂತ ಮಹತ್ವದ ಮಾಸ.

ಫೆಬ್ರವರಿ 17 ರಂದು ಪವಿತ್ರ ರಂಜಾನ್ ತಿಂಗಳ ಚಂದ್ರ ಕಾಣಿಸಿಕೊಂಡಿದ್ದು, ಫೆಬ್ರವರಿ 18ರಿಂದ ಉಪವಾಸಗಳು ಆರಂಭವಾಗಿವೆ. ಮೆಕ್ಕಾ, ಮದೀನಾ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಂ ಧರ್ಮದವರು ತಮ್ಮ ಸ್ಥಳೀಯ ಮಸೀದಿಗಳಲ್ಲಿ ತರಾವೀಹ್ ಪ್ರಾರ್ಥನೆಗಳಿಂದ ಈ ಮಾಸವನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ: ಧ್ಯಾನ ಮಾಡಿದರೆ ನಿಮ್ಮಲ್ಲಿ ಏನಾದರು ಬದಲಾವಣೆ ಕಾಣುತ್ತಿದೆಯೇ ?

ಮುಸ್ಲಿಮರು ಸೂರ್ಯೋದಯಕ್ಕೆ ಮುಂಚಿತವಾಗಿ ತಮ್ಮ ಉಪವಾಸ ನಿರ್ಧರಿಸುತ್ತಾರೆ ಮತ್ತು ಸೂರ್ಯಾಸ್ತದವರೆಗೆ ಆಹಾರ, ನೀರು, ಪಾನೀಯ ತ್ಯಜಿಸುತ್ತಾರೆ. ಉಪವಾಸ ಮುಗಿಯುವ ಕ್ಷಣದಲ್ಲಿ ಸೂರ್ಯಾಸ್ತದ ನಂತರ ಕುಟುಂಬ ಮತ್ತು ಸಮೂಹದೊಂದಿಗೆ ಇಫ್ತಾರ್ ಮಾಡಲಾಗುತ್ತದೆ.
ರಂಜಾನ್ ಉಪವಾಸ ಇಸ್ಲಾಂ ಧರ್ಮದಲ್ಲಿ ಅತ್ಯಂತ ಶ್ರದ್ಧಾ ಆರಾಧನಾ ಮಾದರಿ. ಇದನ್ನು ರೋಜಾ ಎಂದು ಕರೆಯುತ್ತಾರೆ.  ಉಪವಾಸದ ಜೊತೆಗೆ ಪ್ರಾರ್ಥನೆ, ದಾನಧರ್ಮ — ಜಕಾತ್ ಮತ್ತು ಸದಾಗಾ ಮೂಲಕ ಮಾನವೀಯತೆ, ಸಹೋದರತ್ವ ಮತ್ತು ಸಹಾಯಭಾವವನ್ನು ಉತ್ತೇಜಿಸುವುದೇ ರಂಜಾನ್ ಹಬ್ಬದ ಅತ್ಯಂತ ಮಹತ್ವದ ಸಂದೇಶವಾಗಿದೆ. ರಂಜಾನ್ ಭಗವಂತ ಅಲ್ಲಾನಿಗೆ ಸಮರ್ಪಿತ ಸಮಯವೆಂದು ಪರಿಗಣಿಸಲಾಗಿದೆ.

Do you know the significance of the Muslim festival of Ramadan?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page