ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಾಂಬ್ ಬೆದರಿಕೆ: ಆರು ಜಿಲ್ಲೆಗಳ ನ್ಯಾಯಾಲಯಗಳು ಹಾಗೂ ಧಾರವಾಡ ಕೋರ್ಟ್ ಕಟ್ಟೆಚ್ಚರ

ಬೆಂಗಳೂರು: Tulu Times l ರಾಜ್ಯದ ಆರು ಜಿಲ್ಲೆಗಳ ನ್ಯಾಯಾಲಯಗಳು ಮತ್ತು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠಕ್ಕೆ ಸೋಮವಾರ ಬಾಂಬ್ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಭಾರೀ ಆತಂಕ ಉಂಟಾಗಿ ಕಟ್ಟೆಚ್ಚರ ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ, ರಾಮನಗರ, ಕೊಡಗು, ಮಂಗಳೂರು, ಉತ್ತರ ಕನ್ನಡ (ಕಾರವಾರ) ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಯಾಲಯಗಳಿಗೆ ಬೆದರಿಕೆ ಬಂದಿದ್ದು, ಧಾರವಾಡ ಪೀಠವೂ ಇದರ ವ್ಯಾಪ್ತಿಗೆ ಬಂದಿದೆ.

ಬೆಂಗಳೂರಿನಲ್ಲಿ ಯಾವುದೇ ಬೆದರಿಕೆ ಇಲ್ಲ.  ಹೌದು…
ಬೆಂಗಳೂರಿನ ಯಾವುದೇ ನ್ಯಾಯಾಲಯಗಳಿಗೆ ಬೆದರಿಕೆ ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ತಕ್ಷಣ ಭದ್ರತಾ ಕ್ರಮ‌ ಕೈಗೊಳ್ಳಿ ;

ಬೆದರಿಕೆಯಲ್ಲಿ ನ್ಯಾಯಾಲಯಗಳಲ್ಲಿ RDX ಸೇರಿದಂತೆ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆ ಎಂದು ಹೇಳಲಾಗಿತ್ತು. ಇದರಿಂದ ಪೊಲೀಸರು ತಕ್ಷಣ ಎಚ್ಚರಗೊಂಡು,

ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಶ್ವಾ,ನ ದಳ, ಆಂಟಿ-ಸಾಬೋಟೇಜ್ ತಂಡ,ಇವರನ್ನು ಸ್ಥಳಕ್ಕೆ ಕಳುಹಿಸಲಾಯಿತು.

ನ್ಯಾಯಾಲಯಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ನ್ಯಾಯಾಧೀಶರು, ವಕೀಲರು ಹಾಗೂ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು.

ಪೊಲೀಸ್ ಮೂಲಗಳ ಪ್ರಕಾರ, ಇದು ಆತಂಕ ಸೃಷ್ಟಿಸಲು ಮಾಡಿದ ಸುಳ್ಳು ಕರೆಗಳಾಗಿರುವ ಸಾಧ್ಯತೆ ಹೆಚ್ಚು. ಎಲ್ಲಾ ನ್ಯಾಯಾಲಯಗಳಲ್ಲಿ ತಪಾಸಣೆ ಕಾರ್ಯ ಮುಂದುವರಿದಿದೆ. ಸಾರ್ವಜನಿಕರು ಆತಂಕಪಡದೆ, ಪೊಲೀಸ್ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

Bomb threat: Courts in six districts and Kodagu court on high alert – ತುಳುಟೈಮ್ಸ್

ಇದನ್ನೂ ಓದಿ : ಬೆಳ್ತಂಗಡಿ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ !

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=3GlMI7bQUWfVI4mo

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page