ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: ಅಜ್ಜಿಯ ತಿಥಿಗೆ ಆಮೆ ಹಿಡಿದವರ ಬಂಧನ !

ಬೆಳ್ತಂಗಡಿ: Tulu Times | ಅಜ್ಜಿಯ ತಿಥಿಗೆ ನದಿಯಲ್ಲಿ ಆಮೆ ಬೇಟೆಯಾಡಿದ ನಾಲ್ವರನ್ನು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಠಾಣೆ ಪೊಲೀಸರು  ಅರೆಸ್ಟ್  ಮಾಡಿದ್ದಾರೆ.

ಮಣಿಕಂಠ(42), ರಾಜೇಂದ್ರ(54), ವಿಘ್ನೇಶ್(32), ಪ್ರಶಾಂತ್(35) ಅರೆಸ್ಟ್‌ ಆಗಿದ್ದಾರೆ.  ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು,ಸೋಮಾವತಿ ನದಿಯಲ್ಲಿ ನಾಲ್ಕು ಆಮೆಗಳನ್ನು ಬೇಟೆಯಾಡಿ ನದಿ ದಟದಲ್ಲಿ ಮಾಂಸ ಸುಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರುವ ಬೆನ್ನಲ್ಲಿ ನದಿಯ ತಟಕ್ಕೆ ಭೇಟಿ ನೀಡಿ ಅರೆಸ್ಟ್‌ ಮಾಡಲಾಗಿದೆ.

ನಾಲ್ವರನ್ನು ವಶಕ್ಕೆ ಪಡೆದು ಆಮೆಗಳನ್ನು ಜಪ್ತಿ ಮಾಡಲಾಗಿದೆ.  ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಂಟಿನಿ ನಿವಾಸಿ ಸಂಬಂಧಿ ಅಜ್ಜಿಯ ತಿಥಿ ಕಾರ್ಯಕ್ಕೆ ಆಮೆ ಪದಾರ್ಥ ಮಾಡಲು ಆಮೆಯನ್ನು ಭೇಟೆಯಾಡಲು ಬಂದಿದ್ದರು ಎನ್ನಲಾಗಿದೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ನಾಲ್ವರನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ಬಿಡುಗಡೆ ಮಾಡಿದ್ದಾರೆ.

Belthangady: Arrest made for catching a turtle on grandmother’s birthday!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page