ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಮಿತ್ತಬಾಗಿಲು: ದೈವನರ್ತಕ ಅಣ್ಣು ನಲಿಕೆ ನಿಧನ

ಮಿತ್ತಬಾಗಿಲು: Tulu Times | ಹಿರಿಯ ದೈವನರ್ತಕ ಅಣ್ಣು ನಲಿಕೆ ವಯೋಸಹಜ ಕಾಯಿಲೆಯಿಂದ ಅಸೌಖ್ಯದಿಂದ ನಿಧನರಾಗಿದ್ದಾರೆ. ಇವರು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಿಲಯದವರು, ಹಿರಿಯ ದೈವನರ್ತಕರಾಗಿದ್ದರು. ಮೃತರಿಗೆ  ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಹೊಂದಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

ದೈವನರ್ತಕರು ಕರಾವಳಿ ಕರ್ನಾಟಕದ ತುಳುನಾಡು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ದೈವರಾಧನೆಯಲ್ಲಿ ದೈವದ ವೇಷ ಧರಿಸಿ ನರ್ತಿಸುವವರು. ಇವರು ಅತೀಂದ್ರಿಯ ಶಕ್ತಿ, ದೈವದ ಆವೇಶ ಮತ್ತು ಸಾಂಪ್ರದಾಯಿಕ ಪಾಡ್ದನಗಳ ಮೂಲಕ ದೈವದ ಸಂದೇಶವನ್ನು ಭಕ್ತರಿಗೆ ತಲುಪಿಸುತ್ತಾರೆ. ಇವರು ಸಮುದಾಯದ ನಂಬಿಕೆ, ಸಂಪ್ರದಾಯ ಮತ್ತು ಶ್ರದ್ಧಾ ಭಕ್ತಿಯನ್ನು ಪ್ರತಿನಿಧಿಸುತ್ತಾರೆ.

ದೈವನರ್ತಕರು ವೇಷ ಧರಿಸಿದಾಗ ಆ ದೈವವು ಅವರಲ್ಲಿ ಆವೇಶಗೊಂಡು ನರ್ತಿಸುತ್ತದೆ ಎಂಬುದು ನಂಬಿಕೆಯಿದೆ. ಶಿಷ್ಟವಾದ ಮುಖವರ್ಣಿಕೆ, ಉಡುಪು ಮತ್ತು ಆಭರಣಗಳನ್ನು ಧರಿಸುತ್ತಾರೆ.ದೈವದ ಇತಿಹಾಸವನ್ನು ಹಾಡುವ ಸಾಂಪ್ರದಾಯಿಕ ಹಾಡುಗಳಿಗೆ (ಪಾಡ್ದನ) ನರ್ತಿಸುತ್ತಾರೆ. ದೈವನರ್ತಕರು ಕೇವಲ ನರ್ತಕರಲ್ಲ, ಬದಲಾಗಿ ಅವರು ದೈವದ ಪ್ರತಿನಿಧಿಗಳಾಗಿ ಭಕ್ತರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು (ನುಡಿ) ನೀಡುತ್ತಾರೆ.

ಬೆಳ್ತಂಗಡಿ: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಹಲ್ಲೆ ಪ್ರಕರಣದಲ್ಲಿ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನುಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ಪಾರೆಂಕಿ ಗ್ರಾಮದ ಆಲ್ವಿನ್ ರೊಡ್ರಿಗಸ್ (53) ಬಂಧಿತನಾಗಿದ್ದಾನೆ. ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಈತ 2013 ರಲ್ಲಿ ಚಿತ್ರಶೇಖರ ಮಡಂತ್ಯಾರ್ ಎಂಬರಿಗೆ, ಹಲ್ಲೆ ಮಾಡಿದ್ದ ಈತ ಅಕ್ರ 65/2013 ಕಲಂ 324,504 IPC ಪ್ರಕರಣದಲ್ಲಿ ನ್ಯಾಯಲಯಕ್ಕೆ ಹಾಜರಾಗದೆ ಇದ್ದ ಎನ್ನಲಾಗಿದೆ. ಈತನನ್ನು ಫೆ.13 ರಂದು ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.

Mithabagilu: Divine Dancer Annu Nalike passes away- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page