ಪುತ್ತೂರು :Tulu Times l ರಾತ್ರಿ ವೇಳೆ ಪುತ್ತೂರು ಪಟ್ಟಣದ ಹೃದಯಭಾಗಕ್ಕೆ ನುಗ್ಗಿದ ಮುಳ್ಳುಹಂದಿ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ ಘಟನೆ ನಡೆದಿದೆ.
ಪಟ್ಟಣವನ್ನು ಸುತ್ತುವರೆದಿರುವ ಗುಡ್ಡ ಪ್ರದೇಶಗಳಿಂದ ಕೆಳಗೆ ಇಳಿದು ಬಂದ ಈ ಮುಳ್ಳುಹಂದಿ ಸೋಮವಾರ ರಾತ್ರಿ ಪಟ್ಟಣಕ್ಕೆ ಪ್ರವೇಶಿಸಿದೆ ಎಂದು ತಿಳಿದುಬಂದಿದೆ. ರೋಟರಿ ಜಿ.ಎಲ್. ಕಟ್ಟಡದ ಸಮೀಪ ಇದು ಕೆಲವು ಕಾಲ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ.
ಮುಳ್ಳುಹಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ, ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ;
ಪ್ರಾಣಿಯನ್ನು ನೋಡುವುದಕ್ಕಾಗಿ ಸ್ಥಳೀಯರು ಜಮಾಯಿಸುತ್ತಿದ್ದಂತೆ, ಮುಳ್ಳುಹಂದಿ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ವಕೀಲ ಪುರಂದರ ಭಟ್ ಅವರ ಮನೆಯ ಹಿಂಭಾಗದ ಪೊದೆಗಳತ್ತ ಸರಿದಿದೆ.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮುಳ್ಳುಹಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ, ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿದೆ.
Puttur: A porcupine entered the town at night – safely rescued by forest department personnel – ತುಳುಟೈಮ್ಸ್
ಇದನ್ನೂ ಓದಿ : ಉಡುಪಿಯಲ್ಲಿ ಗಾಂಜಾ ಮಾರುತ್ತಿದ್ದ ಗ್ಯಾಂಗ್ ಅರೆಸ್ಟ್ !
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/RAMITjaI1nw?si=2M-WAhGbfpSUiiS7











