ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಡುಪಿಯಲ್ಲಿ ಗಾಂಜಾ ಮಾರುತ್ತಿದ್ದ ಗ್ಯಾಂಗ್ ಅರೆಸ್ಟ್‌ !

ಉಡುಪಿ: Tulu Times | ಉಡುಪಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು  ಮಣಿಪಾಲ ಪೊಲೀಸರು  ಬಂಧಿಸಿರುವ ಘಟನೆ ನಡೆದಿದೆ.

ಕೇರಳದ ಮೊಹಮ್ಮದ್ ಅಜ್ಜಲ್ (26) ಬಂಧಿತ ಆರೋಪಿಯಾಗಿದ್ದು, ಸಿಂಡಿಕೇಟ್ ಸರ್ಕಲ್ ಮಣಿಪಾಲ ಪೊಲೀಸರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗೆ ಬಲೆ ಬೀಸಿದ್ದಾರೆ. ಇನ್ನು ಈತನು ಗಾಂಜಾ ಸರಬರಾಜು ಮಾಡಿದ 5 ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಂದ 1 ಲಕ್ಷ ಮೌಲ್ಯದ 2084 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಐವರೂ ಗಾಂಜಾ ಸೇವಿಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಹಿತಿ ದೃಢಪಟ್ಟಿದೆ.

ಇದನ್ನೂ ಓದಿ: ದೊಡ್ಡ ತಲೆ ಗಾತ್ರದ ಬೈಕ್ ಸವಾರನ ವಿಡಿಯೋ ವೈರಲ್: ಹೆಲ್ಮೆಟ್ ತಯಾರಕರಿಗೆ ಟ್ರಾಫಿಕ್ ಪೊಲೀಸರ ಮನವಿ

ಕಳೆದ ವರ್ಷ ಆಗಸ್ಟ್ ನಲ್ಲಿ ಈಶ್ವರನಗರದ ಬಳಿಯ ಅಪಾರ್ಟ್‌ ಮೆಂಟ್‌ವೊಂದಕ್ಕೆ ದಾಳಿ ನಡೆಸಲಾಗಿತ್ತು.ಈ ಸಂದರ್ಭದಲ್ಲಿ, ಆಪ್ಟಿನ್ ಮತ್ತು ಶಿವನಿಧಿ ಆಚಾರ್ಯ ಮಾದಕ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ವಿಚಾರ ಗೊತ್ತಾಗಿತ್ತು.  ಇವರಿಂದ 50 ಸಾವಿರ ರೂ.ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಕಾಸರಗೋಡಿನ ಮನೀಶ್ ನನ್ನು ಬಂಧಿಸಲಾಗಿತ್ತು. ಇದೀಗ ಈತ ನೀಡಿದ ಮಾಹಿತಿಯ ಮೇರೆಗೆ ಮೊಹಮ್ಮದ್ ಅಜ್ಜಲ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪುತ್ತೂರು: ಅಜಿತ್ ರೈ ಹೊಸಮನೆ ಅವರಿಗೆ ಕೋರ್ಟ್ ನೋಟಿಸ್‌ !

ಕಾರ್ಕಳ: ರಬ್ಬರ್ ಟ್ಯಾಪಿಂಗ್ ಗೆ ಹೋದವರು ಓಮ್ಮಿ ಕಾರಿನೊಂದಿದೆ ಎಸ್ಕೇಪ್

ಕಾರ್ಕಳ: ಪ್ರತ್ಯೇಕ ಪ್ರಕರಣದಲ್ಲಿ, ರಬ್ಬರ್ ಟ್ಯಾಪಿಂಗ್ ಗೆಂದು ಹೋದ ಕೇರಳದ ಕಾರ್ಮಿಕರಿಬ್ಬರು ಓಮ್ಮಿ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಕಡ್ತಲ ಎಂಬಲ್ಲಿ ಕೇರಳ ಮೂಲದ ಸಾಬು ಕೆ.ಎಸ್(44) ಹಾಗೂ ಮೊಹಮ್ಮದ್ ಅರಾಫತ್(41) ಓಮ್ಮಿ ಕಾರಿನ ಜೊತೆಗೆ ಮನೆಯಿಂದ ಎಸ್ಕೆಪ್ ಆದ ಘಟನೆ ನಡೆದಿದೆ.

ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುವ ಸಲುವಾಗಿ ರಬ್ಬರ್ ತೋಟ ಹೊಂದಿದ್ದ ರಮೇಶ್ ಕುಮಾರ್ ಎಂಬವರು ವರಂಗದಲ್ಲಿರುವ ತೋಟದಲ್ಲಿ ಬೆಳಗ್ಗೆ 4 ಗಂಟೆಗೆ ಓಮ್ಮಿ ಕಾರಿನಲ್ಲಿ ಕಳುಹಿಸಿದ್ದರು. ಕಾರ್ಮಿಕರಲ್ಲಿ ಇಬ್ಬರು ಟ್ಯಾಪಿಂಗ್ ಮಾಡದೇ ಕಾರಿನ ಜೊತೆ ಪರಾರಿಯಾಗಿದ್ದಾರೆ. ಈ ಕುರಿತು ರಮೇಶ್ ಕುಮಾರ್ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Gang selling ganja arrested in Udupi!- ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page