ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: ಶಾಲಾ ಮಕ್ಕಳನ್ನು ಪಿಕಪ್ & ಟಿಪ್ಪರ್ ನಲ್ಲಿ ಕರೆದೊಯ್ದ ಬಗ್ಗೆ ಜನ ಆಕ್ರೋಶ!

ಬೆಳ್ತಂಗಡಿ: Tulu Times | ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಪಿಕಪ್ & ಟಿಪ್ಪರ್ ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯೋಪಾಧ್ಯಾಯರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೋವಾ ಕ್ಯಾಬಿನೆಟ್‌ ಸಹಕಾರ ನೀತಿ 2026ಕ್ಕೆ ಅನುಮೋದನೆ; ಮಹಿಳಾ ಸಿಬ್ಬಂದಿ ಮತ್ತು ಶಾಲಾ ಸಹಾಯಕರಿಗೆ ಹೆಚ್ಚುವರಿ ಸೌಲಭ್ಯ

ಶಾಲಾ  ಮುಖ್ಯೋಪಾಧ್ಯಾಯರೊಬ್ಬರು  ಜೇನು ಕೃಷಿ ಅಧ್ಯಯನ ಮಾಡಲು ತೆರದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಘಟನೆ ನಡೆದಿದೆ.  ಇದು  ಕಾನೂನು ಬಾಹಿರವಾಗಿದ್ದು, ರಸ್ತೆ ಸುರಕ್ಷತಾ ಕ್ರಮಗಳನ್ನು ಮರೆತು  ಶಾಲಾ ಮಕ್ಕಳನ್ನು ಸರಕುಗಳಂತೆ ಈ ರೀತಿಯಾಗಿ ಕರೆದುಕೊಂಡು ಹೋಗಿರುವ ಬಗ್ಗೆ ಜನರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸುರಕ್ಷಿತ ಲಸಿಕೆಗಳ ಅಭಿವೃದ್ಧಿ ಸಂಶೋಧನೆಯ ಮಹತ್ವದ ಸಾಧನೆ : ಡೆಂಗ್ಯೂ

ಹಿರಿಯ ಪ್ರಾಥಮಿಕ ಶಾಲೆ ಬಳೆಂಜದ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರು ಶಾಲಾ ಮಕ್ಕಳನ್ನು KA-21-A-8776 ನಂಬರಿನ ಪಿಕಪ್ ಮತ್ತು KA-70-2596 ನಂಬರಿನ ಟಿಪ್ಪರ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಜೇನು ಕೃಷಿ ಅಧ್ಯಯನದ ಮಾಡಬೇಕು ಎಂದು ಮಕ್ಕಳನ್ನುಅನಿಲ್ ಫಾರ್ಮ್ ಗೂ ಕರೆದುಕೊಂಡು ಹೋಗಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ  ಹಿರಿಯ ಪ್ರಾಥಮಿಕ ಶಾಲೆ ಬಳೆಂಜದಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆದಿದೆ. ಈ ಹಿನ್ನೆಲೆ ಮಕ್ಕಳನ್ನು ಅಧ್ಯಯನಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿ ಕಾರ್ಮಿಕರನ್ನೂ ಮೋಟಾರು ಕಾಯ್ದೆ ಅಡಿಯಲ್ಲಿ ಅವಕಾಶವಿಲ್ಲದಿರುವಾಗ  ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿರುವುದು ಏಕೆ ಎಂದು ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.ಏನಾದರೂ ಅನಾಹುತ ನಡೆದ ಯಾರು ಹೊಣೆ ಎಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಶಾಲಾ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.  ಇನ್ನು  ಪಿಕಪ್ ಮತ್ತು ಟಿಪ್ಪರ್ ನಲ್ಲಿ ಮಕ್ಕಳಲ್ಲಿ ಕರೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ವಿಕ್ಟೋರಿಸ್‌ನಲ್ಲಿ ಮಾತ್ರ ಲಭ್ಯವಿರುವ 5 ವಿಶೇಷ ವೈಶಿಷ್ಟ್ಯಗಳು ಇಲ್ಲಿವೆ

Belthangady: Public outrage over school children being taken away in pickup & tipper!- ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page