ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ಕೋಡಿಬೇಂಗ್ರೆಯಲ್ಲಿ ದೋಣಿ ದುರಂತ: ರೀಲ್ಸ್ ಮಾಡ್ತಿದ್ದ ಹುಡುಗಿ ಸಾವು

ಉಡುಪಿ: Tulu Times | ಕೋಡಿಬೇಂಗ್ರೆಯಲ್ಲಿ ದೋಣಿ ದುರಂತ ಪ್ರಕರಣದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುತ್ತಿದ್ದ ಮೈಸೂರಿನ ಹುಡುಗಿ ದೋಣಿ ಮುಳುಗಿ  ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಸೋಮವಾರ ಚಾಮರಾಜನಗರದ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (27) ಹಾಗೂ ಚಾಮರಾಜನಗರದ ಜಿಲ್ಲೆಯ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು(25) ಮೃತಪಟ್ಟಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮರಾಜ(26) ಇದೀಗ ಚಿಕಿತ್ಸೆ ಸ್ಪಂದಿಸುತ್ತಿದ್ದಾರಿ ತಿಳಿದುಬಂದಿದೆ.

ಸೋಮವಾರ ಕೋಡಿಬೇಂದ್ರೆ ಅಳಿವೆಬಾಗಿಲು ಎಂಬಲ್ಲಿ ಪ್ರವಾಸಿ ದೋಣಿ ನೀರಿನಲ್ಲಿ ಮುಳುಗಿತ್ತು. ಈ ವೇಳೆ,  ತೀವ ವಾಗಿ ಅಸ್ವಸ್ಥಗೊಂಡಿದ್ದ ಮತ್ತೋರ್ವ ಯುವತಿ ಮಂಗಳವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ದುರಂತದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ. ಮೃತ  ಹುಡುಗಿಯನ್ನು ಮೈಸೂರಿನ ಉದಯಗಿರಿ ಸಮೀಪದ ಜಲಪುರಿ ನಿವಾಸಿ ಶಿವಣ್ಣ ಎಂಬವರ ಮಗಳು ದೀಶಾ(23) ಎನ್ನಲಾಗಿದೆ. ಇನ್ನು ದುರಂತದಲ್ಲಿ ಸಾವನ್ನಪ್ಪಿದ ಎಲ್ಲರೂ ಮೈಸೂರು ಗೋಲ್ ಕ್ರಿಸ್ಟ ಇಂಡಿಯಾ ಪ್ರೈವೇಟ್ ಲಿ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ ಎಂಬ ಮಾಹಿತಿಯಿದೆ.

ಬೆಳ್ತಂಗಡಿ: ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಸ್ಥಳದಲ್ಲಿಯೇ ಸಾವು

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಗುರಿಪಳ್ಳ ಸಮೀಪದ ಕಡ್ಡಾರು ನಿವಾಸಿ ಶಿವಪ್ರಸಾದ್ ಅಡಪ(48) ಅವರಿಗೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜ.25 ರಂದು ಬೆಳಿಗ್ಗೆ ಮನೆ ಸಮೀಪ ಪಂಪ್ ಸ್ವಿಚ್ ಹಾಕುವ ಸಂದರ್ಭ ವಿದ್ಯುತ್ ತಗುಲಿದೆ. ನಂತರ ಇವರು ಶಾಕ್ ಗೆ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಅವರನ್ನು ಉಚಿರೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿದ್ಯುತ್ ಶಾಕ್ ಆದ್ರೆ ಏನು ಮಾಡಬೇಕು..?

ವಿದ್ಯುತ್ ಆಘಾತ ಅಪಾಯಕಾರಿಯಾಗಿದ್ದು, ತಕ್ಷಣದ ಜಾಗೃತಿ ಅಗತ್ಯ ಶಾಕ್ ತಗುಲಿದ ತಕ್ಷಣ ಮುಖ್ಯ ಸ್ವಿಚ್ ಆಫ್ ಮಾಡಿ, ವ್ಯಕ್ತಿಯನ್ನು ಒಣ ಮರ ಅಥವಾ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ. ಉಸಿರಾಟವಿಲ್ಲದಿದ್ದರೆ ತಕ್ಷಣ CPR ನೀಡಿ ಆಸ್ಪತ್ರೆಗೆ ದಾಖಲಿಸಿ. ನೀರು, ಒದ್ದೆಯಾದ ಕೈಗಳ ಬಳಕೆ ಬೇಡ; ಸುರಕ್ಷಿತ ತಂತಿಗಳು ಹಾಗೂ ಅರ್ಥಿಂಗ್ ಬಳಸುವುದು ಒಳ್ಳೆಯದು.

Boat accident in Kodibengre: Girl who was making reels dies- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 173

You cannot copy content of this page