ಬೆಂಗಳೂರು : Tulu Times | ಕರ್ನಾಟಕದ ಜೈಲುಗಳಲ್ಲಿ ಕೈದಿಗಳಿಗೆ ಹೊರಗಿನಿಂದ ತರಿಸುವ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳ ಮೇಲೆ ಸರ್ಕಾರ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಕಾರಾಗೃಹಗಳ ಡಿಜಿಪಿ ಅಲೋಕ್ ಕುಮಾರ್ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಜೈಲು ನಿಯಮಾವಳಿಗಳ ಪ್ರಕಾರವೇ ಆಹಾರ, ಬಟ್ಟೆ ಹಾಗೂ ಹಾಸಿಗೆಗಳನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ : ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇವೆ: ಡಿಕೆ ಶಿವಕುಮಾರ್
ನಟ ದರ್ಶನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿನ ಕೈದಿಗಳಿಗೂ ಈ ನಿಯಮಗಳು ಅನ್ವಯ ;
ಭೇಟಿ ಸಮಯದಲ್ಲಿ ಕುಟುಂಬಸ್ಥರು ಪ್ಯಾಕ್ ಮಾಡಿದ ಆಹಾರವನ್ನು ನೀಡಲು ಅವಕಾಶ ಇದ್ದರೂ, ಹಣ್ಣುಗಳಿಗೆ 2 ಕೆಜಿ ಮತ್ತು ಡ್ರೈಫ್ರೂಟ್ಸ್ ಹಾಗೂ ಬೇಕರಿ ಪದಾರ್ಥಗಳಿಗೆ 500 ಗ್ರಾಂ ಮಿತಿ ನಿಗದಿಪಡಿಸಲಾಗಿದೆ. ವಿಚಾರಣಾಧೀನ ಕೈದಿಗಳಿಗೆ ಎರಡು ಸೆಟ್ ಬಟ್ಟೆ ಮತ್ತು ಎರಡು ಒಳಬಟ್ಟೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ವಸ್ತುಗಳನ್ನು ಜೈಲಿಗೆ ತರಿಸುವ ಮೊದಲು ಎರಡು ಹಂತದ ಪರಿಶೀಲನೆ ನಡೆಸಬೇಕು ಎಂದು ಆದೇಶಿಸಲಾಗಿದೆ. ಈ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಕೆಲವು ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಸಲುವಾಗಿ ಗಮನ ಸೆಳೆದಿದ್ದು, ಅದರ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ನಟ ದರ್ಶನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿನ ಕೈದಿಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Strict orders on food and clothing coming from outside for prisoners in jail – ತುಳು ಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yx1fqcpWfnc?si=rBHvro9wAxjJgbRE











