ಬ್ರೇಕಿಂಗ್ ನ್ಯೂಸ್
ದೇಶ

Karuru Stampede: ಮೃತರ ಕುಟುಂಬಸ್ಥರಿಗೆ ಜಮೆ ಆದ ಹಣವೆಷ್ಟು?

Tamilnadu: ಕರೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ 41 ಜನರು ಪ್ರಾಣ ಕಳೆದುಕೊಂಡಿದ್ದರು. ತಮಿಳು ಸ್ಟಾರ್ ನಟ ವಿಜಯ್ ದಳಪತಿ ಅವರ ಪಕ್ಷದ ಕಾರ್ಯಕ್ರಮದಲ್ಲಿ ಈ ಕಾಲ್ತುಳಿತ ನಡೆದಿದ್ದು ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ.

ಕರೂರು ದುರಂತದ ಸಲುವಾಗಿ ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲಾ ಕಾರ್ಯದರ್ಶಿಗಳಿಗೆ ತಮಿಳಿಗ ವೆಟ್ರಿಗ ಕಳಗಂನ ಪ್ರಮುಖ ಕಚೇರಿಯಿಂದ ದೀಪಾವಳಿ ಆಚರಿಸದಂತೆ ಸೂಚನೆ ನೀಡಲಾಗಿದೆ. ಜೊತೆಗೆ ಮೃತರ ಕುಟುಂಬಸ್ಥರಿಗೆ 20ಲಕ್ಷ ಪರಿಹಾರ ಹಣ ಜಮೆ ಮಾಡಲಾಗಿದೆ.

ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ರ‍್ಯಾಲಿ ನಡೆದಿತ್ತು. ತಮ್ಮ ನೆಚ್ಚಿನ ನಟನನ್ನು ನೋಡಲು ಬರೋಬ್ಬರಿ 30,000ಕ್ಕೂ ಹೆಚ್ಚು ಬೆಂಬಲಿಗರು ಸೇರಿದ್ದರು. ನಿಗದಿತಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ ಕಾಲ್ತುಳಿತ ಉಂಟಾಗಿ 41 ಜನರು ಅಸುನೀಗಿದ್ದರು.

ಈ ಪ್ರಕರಣ ಸಾಕಷ್ಟು ರಾಜಕೀಯ ಹಗ್ಗ ಜಗ್ಗಾಟಕ್ಕೆ ಕಾರಣವಾಗಿತ್ತು. ಈ ದುರಂತದಲ್ಲಿ ಮಹಿಳೆಯರು, ಮಕ್ಕಳೂ ಸೇರಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ಚೆನ್ನೈನ ಪಣಯೂರ್‌ನಲ್ಲಿರುವ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ಕಚೇರಿ ದೀಪಾವಳಿ ಆಚರಿಸಬಾರದು ಎಂದು ಹೇಳಿ ಆದೇಶಿಸಿದೆ.

ವಿಜಯ್ ಅವರ ಸಲಹೆಯಂತೆ, ಮೃತರ ಆತ್ಮಕ್ಕೆ ಶಾಂತಿ ಕೋರಿ, ದೀಪಾವಳಿ ಆಚರಣೆಯನ್ನು ತಪ್ಪಿಸಬೇಕು. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿವಿಕೆ ಪಕ್ಷದ ಪ್ರಚಾರ ಜಂಟಿ ಕಾರ್ಯದರ್ಶಿ ಲೊಯೊಲಾ ಮಣಿ ಅವರು ಎಕ್ಸ್ ನಲ್ಲಿ ಈ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಎಲ್ಲರ ಎದುರೇ ಸುಳ್ಳು ಹೇಳಿದ ಜಾನ್ವಿಗೆ ಬುದ್ಧಿ ಕಲಿಸಿದ ಸುದೀಪ್‌

============

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess  

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page