ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಎಲ್ಲರ ಎದುರೇ ಸುಳ್ಳು ಹೇಳಿದ ಜಾನ್ವಿಗೆ ಬುದ್ಧಿ ಕಲಿಸಿದ ಸುದೀಪ್‌

ಅಶ್ವಿನಿ ಜಾನ್ವಿ ಅವರುಗಳು ಬಿಗ್​​ಬಾಸ್ ಮನೆಯಲ್ಲಿ ತಾವು ಆಡಿದ್ದೇ ಆಟ ಅಂತ ಅಂದ್ಕೊಂಡಿದ್ದಾರೆ. ಮನೆಯಲ್ಲಿ ಇತರೆ ಸ್ಪರ್ಧಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಸಹ ಬೀರಿದ್ದಾರೆ. ಜಾನ್ವಿ ಅಶ್ವಿನಿ ಅವರು ಗೆಳೆಯರಾಗಿದ್ದು ಮನೆಯಲ್ಲಿ ತಮ್ಮನ್ನು ತಾವು ಬಹಳ ಮೆಚ್ಯೂರ್ಡ್ ಮತ್ತು ಟಫ್ ಸ್ಪರ್ಧಿಗಳೆಂದು ಬಿಂಬಿಸಿಕೊಂಡಿದ್ದಾರೆ.

ಈ ವಾರದ ಮಧ್ಯದ ಹೊಸ್ತಿಲಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಝಲ್‌ ಝಲ್‌ ಗೆಜ್ಜೆ ಸದ್ದು ನಿದ್ದೆಗೆಡಿಸಿದೆ. ರಕ್ಷಿತಾ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದ ಜಾನ್ವಿ ಅಶ್ವಿನಿ ಅವರ ನಡವಳಿಕೆ ತೀರ ಅಸಹ್ಯವಾಗುವಂತೆ ಮಾಡಿತ್ತು. ಅಶ್ವಿನಿ ಹಾಗೂ ಜಾನ್ವಿಗೆ ಕಿಚ್ಚ ಸುದೀಪ ಕ್ಲಾಸ್‌ ತೆಗೆದುಕೊಳ್ಳಬೇಕೆಂದು ಪ್ರೇಕ್ಷಕರು ಆಗ್ರಹಿಸಿದ್ದರು.

ಸುಖಾಸುಮ್ಮನೆ ಮನೆಯವರ ಮುಂದೆ ರಕ್ಷಿತಾಳನ್ನ ಕೆಟ್ಟದಾಗಿ ಬಿಂಬಿಸಿ, ಅವರ ಮೇಲೆಯೇ ಕೋಪಗೊಂಡು ಬೈದಿದ್ದರು. ಆಗಾಗ ರಕ್ಷಿತಾ ಅವರನ್ನು ಅಶ್ವಿನಿ ಹೀಯಾಸಿದ್ರು. ಆದ್ರೆ ಗಟ್ಟಿಗಿತ್ತಿ ರಕ್ಷಿತಾ ಅವರೆಲ್ಲಾ ಮಾತಿಗಳಿಗೂ ಸಖತ್‌ ಟಕ್ಕರ್‌ ಕೊಟ್ಟರು.

ನಿನ್ನೆ ನಡೆದ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಈ ಇಬ್ಬರ ನಕಲಿ ಮುಖವಾಡವನ್ನು ಕಳಚಿ ಕಿತ್ತೆಸೆದ್ರು. ಬಿಗ್​​ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು ಕೇಳಿ ಬಂದಿದ್ದು ಗಿಲ್ಲಿ, ಚಂದ್ರಪ್ರಭಾ, ಮಲ್ಲಮ್ಮ, ಕಾವ್ಯಾ ಸೇರಿದಂತೆ ಇನ್ನೂ ಕೆಲವರು ಬಹಳ ಭಯ ಬಿದ್ದಿದ್ದರು. ಆದರೆ ಈ ಗೆಜ್ಜೆ ಸದ್ದಿಗೆ ರಕ್ಷಿತಾ ಕಾರಣ ಎಂದು ಅಶ್ವಿನಿ ಇಡೀ ಮನೆಯನ್ನು ನಂಬಿಸಿದ್ದರು.

ನಿನ್ನೆ ಸುದೀಪ್ ಅವರು ಪಂಚಾಯಿತಿ ನಡೆಸುವಾಗ ಗೆಜ್ಜೆ ಸದ್ದಿಗೆ ಸಂಬಂಧಿಸಿದಂತೆ ವಿಡಿಯೋ ತೋರಿಸಿದ್ರು. ಮೊದಲಿನ ವಿಡಿಯೋನಲ್ಲಿ ರಕ್ಷಿತಾ ಅವರು ಬಾತ್​​ರೂಂನಲ್ಲಿ ಮಾಡಿದ್ದ ಡ್ಯಾನ್ಸ್ ಇನ್ನಿತರೆ ದೃಶ್ಯಗಳನ್ನು ತೋರಿಸಿದ್ರು. ವಿಡಿಯೋ ಮುಗಿಯುತ್ತಲೇ ಜಾನ್ವಿ, ‘ಕೆಲವರಿಗೆಲ್ಲ ಆ ಗೆಜ್ಜೆ ಸದ್ದನ್ನು ನಾನು ಮಾಡಿದ್ದು ಅನಿಸಿತ್ತು, ಈಗ ಎಲ್ಲರಿಗೂ ಸತ್ಯ ಗೊತ್ತಾಯ್ತು’ ಎಂದು ಆ ಸದ್ದು ಮಾಡಿದ್ದು, ದೆವ್ವ ಬಂದಂತೆ ಆಡಿದ್ದು ರಕ್ಷಿತಾ ಎಂದು ಪರೋಕ್ಷವಾಗಿ ಹೇಳಿದ್ರು.

ಆ ಬಳಿಕ ಸುದೀಪ್ ಅಸಲಿ ವಿಡಿಯೋ ತೋರಿಸಿದ್ರು. ಆ ವಿಡಿಯೋನಲ್ಲಿ ಜಾನ್ವಿ ಗೆಜ್ಜೆ ಭಾರಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಮಾತ್ರವಲ್ಲದೆ ಜಾನ್ವಿ ಮತ್ತು ಅಶ್ವಿನಿ ಇಬ್ಬರೂ ಮಾತನಾಡಿಕೊಂಡು ಸಂಚು ಮಾಡಿ ರಕ್ಷಿತಾರನ್ನು ಈ ಝಲ್‌ ಝಲ್‌ ಪ್ರಕರಣದಲ್ಲಿ ಸಿಲುಕಿಸಿದ್ದನ್ನು ಸುದೀಪ್ ತೋರಿಸಿದ್ರು.

ಜಾನ್ವಿ ಅಶ್ವಿನಿ ಬೇಕೆಂದೇ ರಕ್ಷಿತಾರನ್ನು ಟಾರ್ಗೆಟ್ ಮೇಲೆ ದಾಳಿ ಮಾಡಿದ್ದರು. ಜಾನ್ವಿ-ಅಶ್ವಿನಿ ವರ್ತನೆಯ ಬಗ್ಗೆ ಅಸಮಾಧಾನದಿಂದಲೇ ಮಾತನಾಡಿದ ಸುದೀಪ್, ‘ನೀವು ಮಾಡಿದ್ದು ಅಧಿಕ ಪ್ರಸಂಗ, ಈ ರೀತಿಯ ವರ್ತನೆಗೆ ಒಂದು ಲಿಮಿಟ್ ಇರುತ್ತದೆ. ಇನ್ನೊಬ್ಬರಿಗೆ ಹರ್ಟ್ ಆಗುತ್ತಿದೆ ಎಂದಾಗ ಅದನ್ನು ನಿಲ್ಲಿಸಬೇಕು. ನೀವು ಮಾಡುತ್ತಿರುವ ಕೆಲಸದಿಂದ, ಮಾತಿನಿಂದ ಎದುರಿನವರಿಗೆ ನಗು ಬಂದರೆ ಅದು ಜೋಕು, ಎದುರಿಗಿರುವವರು ಅಳುತ್ತಿದ್ದಾರೆ ಎಂದರೆ ಅದು ಜೋಕ್ ಹೇಗಾಗುತ್ತೆ? ಎಂದು ಬಾದ್‌ಶಾ ಪ್ರಶ್ನಿಸಿದ್ರು.

ಒಬ್ಬರ ವ್ಯಕ್ತಿತ್ವ, ಗೌರವವನ್ನು ಆಟದ ಸಾಮಾನು ಮಾಡಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಅಬ್ಬರಿಸಿದರು ಸುದೀಪ್. ಜಾನ್ವಿಗಂತೂ ತುಸು ಖಾರವಾಗಿಯೇ ಚಾಟಿ ಬೀಸಿದರು. ಸುದೀಪ್ ಅಷ್ಟೆಲ್ಲ ಹೇಳಿದ ಬಳಿಕವೂ ಸಹ ಜಾನ್ವಿ, ರಕ್ಷಿತಾ ಬಳಿ ಕ್ಷಮೆ ಕೇಳಿಲ್ಲ. ಮಾತ್ರವಲ್ಲದೆ ಪಶ್ಚಾತಾಪವನ್ನೂ ಸಹ ಪಡಲಿಲ್ಲ. ಅದಕ್ಕೂ ಸಹ ಸುದೀಪ್ ಅವರು ಜಾನ್ವಿಗೆ ಕ್ಲಾಸ್ ತೆಗೆದುಕೊಂಡರು.

ಇಡೀ ಮನೆ ರಕ್ಷಿತಾ ಪರವಾಗಿ ನಿಲ್ಲಲಿಲ್ಲ ಎಂಬುವುದನ್ನು ಸುದೀಪ್‌ ಬಿಡಿಸಿ ಹೇಳಿದ್ರು. ಸುದೀಪ್‌ ಅವರು ತೆಗೆದುಕೊಂಡ ಕ್ಲಾಸ್‌ ವೇಳೆ ಅಶ್ವಿನಿ ಆಗಾಗ ಕ್ಲಾರಿಟಿ ಕೊಡೋ ವಿಷಯ ಮಾಡಿದ್ರು. ಆದ್ರೆ ಜಾನ್ವಿ ಸುಮ್ಮನಿದ್ರು. ಈ ವಾರದ ಕಿಚ್ಚನ ಚಪ್ಪಾಳೆ ರಕ್ಷಿತಾ ಅವರ ಜೊತೆಗೆ ನಿಂತ ಗಿಲ್ಲಿ ನಟ ಅವರಿಗೆ ಸಿಕ್ಕಿತ್ತು.

ಇದನ್ನೂ ಓದಿ: Puttur ಮೂಲದ ಯುವಕ ಸಾವು! ಪ್ರೇಮಪಾಶವೋ? ಆಹಾರದಲ್ಲಿ ವಿಷವೋ?

=====================

 

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page