ಮಂಗಳೂರು: Tulu Times | ಸುಲಿಗೆ ಮಾಡಿ, ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿತ ವ್ಯಕ್ತಿಯನ್ನು ತೊಕ್ಕೊಟ್ಟು ಚಂಬುಗುಡ್ಡೆ ನಿವಾಸಿ ನವೀನ್ ಸಿಕ್ವೇರಾ (52) ಎಂದು ಗುರುತಿಸಲಾಗಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2011 ಮತ್ತು 2012ರಲ್ಲಿ ಐಪಿಎಸ್ ಸೆಕ್ಷನ್ 392 (ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ!
ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಅರ್ಜಿ ಪರಿಶೀಲಿಸಿದ ಹೈಕೋರ್ಟ್, ಶಿಕ್ಷೆಯನ್ನು ಒಂದು ವರ್ಷದ ಕಾರಾವಾಸಕ್ಕೆ ಇಳಿಸಿ, 15,000 ರೂ. ದಂಡ ವಿಧಿಸಿತ್ತು. ಅಲ್ಲದೆ, 2022ರ ಒಳಗೆ ಒಂದು ವೇಳೆ ಈ ಅವಧಿಯಲ್ಲಿ ಶರಣಾಗದಿದ್ದರೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಹಳೆಯ ಶಿಕ್ಷೆಯೇ (3 ವರ್ಷ) ಜಾರಿಯಾಗಲಿದೆ ಎಂದು ಹೇಳಿತ್ತು. ನಂತರ, ಪರಾರಿಯಾಗಿದ್ದ ಆರೋಪಿ ವಿರುದ್ಧ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದೆ. ಮಂಗಳೂರು ಪೂರ್ವ ಠಾಣೆಯ ಎಎಸ್‌ಐ ಮಚ್ಚೇಂದ್ರನಾಥ್ ಜೋಗಿ ಹಾಗೂ ಸಿಬ್ಬಂದಿಗಳಾದ ಅಭಿಷೇಕ್ ಮತ್ತು ನಾರಪ್ಪ ಕೆ.ಬಿ. ಅವರ ತಂಡವು ಜನವರಿ 14, ರಂದು ಸುರತ್ಕಲ್‌ನ ಹೊನ್ನಕಟ್ಟೆಯ ಬಾರ್ ಒಂದರಲ್ಲಿ ಆರೋಪಿಯನ್ನು ಬಂಧಿಸಿದೆ. ಹೈಕೋರ್ಟ್ ವಿಧಿಸಿದ್ದ ಗಡುವು ಮೀರಿದ ಕಾರಣ, ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ.
ಪುತ್ತೂರು: ಗ್ಯಾಸ್ ಬಲೂನ್ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್..ಹೊತ್ತಿ ಉರಿದ ಕಾರು!
ಪುತ್ತೂರು: ಪ್ರತ್ಯೇಕ ಪ್ರಕರಣದಲ್ಲಿ ಪಡುಮಲೆ ಜಾತ್ರೆ ನಡೆಯುವ ವೇಳೆ ಗ್ಯಾಸ್ ಬಲೂನ್ ವಿದ್ಯುತ್ ತಂತಿಗೆ ಸಿಲುಕಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ನಿಲ್ಲಿಸಿದ್ದ ಕಾರು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಾರು ಸುಟ್ಟು ಭಸ್ಮವಾಗಿದ್ದು, ಈ ಘಟನೆಯು ಶ್ರೀ ಪೂಮಾನಿ-ಕಿನ್ನಿಮಾನಿ ಪ್ರದೇಶದ ಬಳಿಯ ಪಡುಮಲೆಯಲ್ಲಿ ಮತ್ತು ಬಡಗನ್ನೂರು ಗ್ರಾಮ ಪಂಚಾಯತ್‌ನ ಪಡುಮಲೆ ಪ್ರದೇಶದ ಮೈಂದಿನಡ್ಕದಲ್ಲಿರುವ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿ ನಡೆದಿದೆ. ಕಾರೊಂದನ್ನು ದೇವಾಲಯದ ಆವರಣದೊಳಗಿನ ವಿದ್ಯುತ್ ಕಂಬದ ಬಳಿ ನಿಲ್ಲಿಸಲಾಗಿತ್ತು. ವಾರ್ಷಿಕ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಗ್ನಿದುರಂತ ಸಂಭವಿಸಿದೆ. ಜಾತ್ರೆಯಿಂದ ಬಂದ ಗ್ಯಾಸ್ ಬಲೂನ್ ಜೋರಾದ ಗಾಳಿಯಿಂದ ಹಾರಿಹೋಗಿ ಮೇಲಿನ ವಿದ್ಯುತ್ ತಂತಿಗೆ ತಗುಲಿ ಬೆಂಕಿಯ ಕಿಡಿ ಕಾರಿಗೆ ಸ್ಪರ್ಶಿಸಿದೆ.
ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಅದರ ಕಿಡಿಗಳು ಅಲ್ಲಿಯೇ ನಿಲ್ಲಿಸಿದ್ದ ಕಾರನ್ನು ತಲುಪಿ, ನಿಂತಿದ್ದ ಕಾರಿಗೆ ಬೆಂಕಿ ತಗುಲಿ ಆಹುತಿಯಾಗಿದೆ. ಆಹುತಿಯಾಗಿವೆ. ಇದರಿಂದಾಗಿ ಬೆಂಕಿಯ ಜ್ವಾಲೆ ಹೊತ್ತಿಕೊಂಡಿದೆ. ಅದೃಷ್ಟವಶಾತ್, ಯಾವುದೇ ಸಾವುನೋವು ಸಂಭವಿಸಿಲ್ಲ. ಸ್ಥಳೀಯ ಬೆಂಕಿಗೆ ಕಾರು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ, ಕಿಡಿಗಳು ವಾಹನಕ್ಕೆ ತಗುಲಿ ನಿವಾಸಿಗಳು ತಕ್ಷಣವೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಕಾರು ಭಾಗಶಃ ಹಾನಿಗೊಳಗಾಗಿದೆ.
Mangaluru: Thief absconding in extortion case arrested!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











