ಸುಳ್ಯ : Tulu Times | ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ, ರಂಗ ಮಯೂರಿ ಕಲಾಶಾಲೆ (ರಿ.) ಸುಳ್ಯ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕ ಪ್ರಸ್ತುತ ಪಡಿಸುವ, ನಿರ್ದಿಗಂತ ಮೈಸೂರು ಕಲಾವಿದರಿಂದ, ‘ಕೊಡೊಲ್ಲ ಅಂದ್ರೆ ಕೊಡೊಲ್ಲ’ ನಾಟಕ ಪ್ರದರ್ಶನ ಇದೇ ಸೋಮವಾರ (ಜನವರಿ 19, 2026) ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಸಂಜೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ.
ಈ ನಾಟಕವು ದಾರಿಯೋ ಫೋ ರವರ ‘ಕಾಂಟ್ ಪೇ ವೊಂಟ್ ಪೇ’ ನಾಟಕದ ರೂಪಾಂತರವಾಗಿದ್ದು, ಕನ್ನಡದಲ್ಲಿ ನಿರ್ದೇಶನ, ಪರಿಕಲ್ಪನೆ ಹಾಗೂ ವಿನ್ಯಾಸ ಮಾಡಿದವರು ಶಕೀಲ್ ಅಹ್ಮದ್.
ನಿರ್ದಿಗಂತದ ಕುರಿತು ;
ಬಹುಮುಖ ಕಲಾವಿದ ಪ್ರಕಾಶ್ ರಾಜ್ ಅವರು ಸಮಾನ ಮನಸ್ಕರೊಡನೆ ಸೇರಿ ಆರಂಭಿಸಿರುವ ಈ ಸಂಘಟನೆಯು ಕುವೆಂಪು ಅವರ ಕಾವ್ಯದ ಸಾಲುಗಳಲ್ಲಿ ರೂಪಕವಾಗಿ ಬರುವ ನಿರ್ದಿಗಂತ ಎಂಬ ಕಲ್ಪನೆಯನ್ನು ತನ್ನ ಕಾರ್ಯ ವಿಧಾನವಾಗಿಸಿಕೊಂಡಿದೆ.
ರಂಗಭೂಮಿಯ ಕಲಾವಿದರಿಗೆ ಕಾವುಗೂಡಾಗಿ ಮೈದಳೆಯುತ್ತ ಹಲವು ಪ್ರಯೋಗಗಳನ್ನು ನಡೆಸುತ್ತ ಸಮಾಜದೊಳಗೆ ಸೂಕ್ತ ಮಧ್ಯಪ್ರವೇಶಿಕೆ ಪಡೆಯುತ್ತ ನಿರ್ದಿಗಂತವು ಸಾಗುತ್ತಿದೆ. ಸಾರ್ವಜನಿಕರಿಗಾಗಿ ರಂಗ ಪ್ರದರ್ಶನಗಳು, ಯುವ ಸಮುದಾಯವನ್ನ ತಲುಪುವ ಉದ್ದೇಶದ ಕಾಲೇಜುರಂಗ, ಶಿಕ್ಷಣ ಮತ್ತು ರಂಗಭೂಮಿಯ ಸಮಾಸ ಸೃಷ್ಟಿಸುವತ್ತ ನಡೆಸುತ್ತಿರುವ ಪ್ರಯೋಗವಾಗಿ ಶಾಲಾರಂಗ ಹಾಗೂ ಮಕ್ಕಳೊಡನೆ ರಂಗಪ್ರಯೋಗ ನಡೆಸಲು ರಂಗಶಿಕ್ಷಕರನ್ನು ತೊಡಗಿಸಿರುವ ಶಾಲಾ ರಂಗವಿಕಾಸ ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ರಂಗವಿಕಾಸ ಯೋಜನೆ, ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದೆ.
ಈ ಕಾರ್ಯಕ್ರಮವನ್ನು ಸುಳ್ಯದಲ್ಲಿ ನಡೆಸಲು ಸುಳ್ಯದ ರಂಗಮಯೂರಿ ಕಲಾಶಾಲೆ ನಿರ್ದೇಶಕರು ಲೋಕೇಶ್ ಊರುಬೈಲ್ ಹಾಗೂ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರು ಯಶ್ವಿತ್ ಕಾಳಮ್ಮನೆ ಮುಖ್ಯ ರುವಾರಿಗಳಾಗಿದ್ದು, ಎಲ್ಲಾ ಕಲಾಸಕ್ತರಿಗೆ ಆತ್ಮೀಯ ಸ್ವಾಗತವನ್ನು ಈ ಮೂಲಕ ಕೇಳಿಕೊಂಡಿರುತ್ತಾರೆ.
The much-awaited play ‘Nirdingata’ will be performed at Ranga Mayuri in Sullia. – ತುಳು ಟೈಮ್ಸ್
ಇದನ್ನೂ ಓದಿ :ಪಿಎಫ್ ಖಾತೆದಾರರೇ ಗಮನಿಸಿ : ಇನ್ಮುಂದೆ ಸುಲಭವಾಗಿ ನಿಮ್ಮ ಹಣ ನಿಮ್ಮ ಖಾತೆ ಸೇರಲಿದೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=lCY7AV2us-sH_sNs











