Panolibail: ಐತಿಹಾಸಿಕ ಕಾರ್ಣಿಕ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಅ.17ರ ಶುಕ್ರವಾರದಂದು ಹೊಸ ಅಕ್ಕಿ ಅಗೇಲು ಸೇವೆ ನಡೆಯಿತು. ವರ್ಷಂಪ್ರತಿ ಕಾವೇರಿ (ತುಲಾ) ಸಂಕ್ರಮಣದಂದು ಕ್ಷೇತ್ರದಲ್ಲಿ ಹೊಸ ಅಕ್ಕಿಯ ಅಗೆಲು ಸೇವೆ ನಡೆಯುತ್ತದೆ.
ಊರ ಪರವೂರ ಭಕ್ತಾದಿಗಳು ಪುದ್ದಾರ್ ಅಗೇಲು ಸೇವೆಗೆ ಬಗೆಬಗೆಯ ತರಕಾರಿಗಳನ್ನು ನೀಡುತ್ತಾರೆ. ಈ ದಿನ ಅಗೆಲು ಸೇವೆಯಲ್ಲಿ ತರಕಾರಿಗಳನ್ನು ಬಿಡಿಸುವುದು ವಿಶೇಷವಾಗಿದೆ.
ಈ ಅಗೇಲು ಸೇವೆಯಲ್ಲಿ ಏನು ವಿಶೇಷ?
ಕ್ಷೇತ್ರದಲ್ಲಿ ಇತರೆ ದಿನಗಳಲ್ಲಿ ನಡೆಯುವ ಅಗೇಲು ಸೇವೆಯಂತೆಯೇ ಈ ಕಾವೇರಿ ಸಂಕ್ರಮಣದಂದು ನಡೆಯುತ್ತದೆ. ಆದರೆ ಬಳಸುವ ಅಕ್ಕಿ ಹೊಸ ಅಕ್ಕಿ ಆಗಿರುತ್ತದೆ. ಇದರ ಜೊತೆ ಭಕ್ತಾದಿಗಳು ನೀಡಿದ ತರಕಾರಿಗಳನ್ನು ಅಗೇಲು ಜೊತೆ ಸೇರಿಸಿ ಸಮರ್ಪಿಸಲಾಗುತ್ತದೆ.
ತುಲಾ ಸಂಕ್ರಮಣ ಸೋಮವಾರ ಅಥವಾ ಶನಿವಾರ ಬಂದಲ್ಲಿ ದೈವಕ್ಕೆ ಅಗೇಲು ಸೇವೆ ಇರುವುದಿಲ್ಲ. ಇದರ ಬದಲಾಗಿ ಮರುದಿನ ಹೊಸ ಅಕ್ಕಿ ಅಗೇಲು ಬಡಿಸಲಾಗುತ್ತದೆ. ಪಣೋಲಿಬೈಲು ಕ್ಷೇತ್ರದಲ್ಲಿ ಆದಿತ್ಯವಾರ, ಮಂಗಳವಾರ ಮತ್ತು ಶುಕ್ರವಾರ ಅಗೆಲು ನಡೆಯುತ್ತದೆ. ಕಾವೇರಿ ಸಂಕ್ರಮಣ ವಾರದ ಮಧ್ಯೆ ಅಂದರೆ ಅಗೇಲು ನಡೆಯುವ ದಿನಗಳಲ್ಲದ ದಿನದಲ್ಲಿ ಬಂದಾಗ ವಿಶೇಷವಾಗಿರುತ್ತದೆ.
ಇದನ್ನೂ ಓದಿ: Manthra Mangalya: ಹಿಂದೂ ಯುವಕನನ್ನು ವರಿಸಿದ ಗಾಯಕಿ ಸುಹಾನಾ ಸೈಯದ್!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











