ಮಂಗಳೂರು: Tulu Times | ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮುಹಮ್ಮದ್ ಮಹಾಝ್ ಬಮ್ಮಪ್ಪಾಡಿ (24) ಎಂಬ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೀರಿ ಸಮೀಪ ತಲಪಾಡಿ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮುಹಮ್ಮದ್ ಮಹಾಝ್ ಬಮ್ಮಪ್ಪಾಡಿ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನುಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ನಡೆದದ್ದು ಹೇಗೆ..?
ಜನವರಿ 5ರಂದು ರಾತ್ರಿ ಕ್ಯಾಟರಿಂಗ್ ಕೆಲಸ ಮುಗಿಸಿ ತಮ್ಮ ಸ್ಕೂಟರ್‌ನಲ್ಲಿ ಊರಿಗೆ ಮರಳುತ್ತಿದ್ದ ಮುಹಮ್ಮದ್ ಮಹಾಝ್, ಕಾರು ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ತಕ್ಷಣ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಅಂಗಡಿಗೆ ಹಸು ಹಣ್ಣು ತಿನ್ನಲು ಬಂತು ಎಂದು ಚೂರಿ ತಾಗಿಸಿದ ಮಾಲಿಕ!
ಮಂಗಳೂರು: ಅಂಗಡಿಗೆ ತರಕಾರಿ ತಿನ್ನಲು ಬಂದ ಹಸುವನ್ನು ಓಡಿಸುವ ಸಲುವಾಗಿ ಚೂರಿ ತಾಗಿಸಿದ ಘಟನೆ ಬಸ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ನಡೆದಿದೆ.
ಈ ವೇಳೆ ಹಸುವಿಗೆ ಚೂರಿ ತಾಗಿ ಗಾಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ದನದ ಮಾಲೀಕ ಹಾಗೂ ಅಂಗಡಿ ಮಾಲೀಕನ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ.
ಅಯ್ಯಪ್ಪ ಮಾಲಾಧಾರಿಗಳು ಸಾಮಗ್ರಿ ಖರೀದಿಸಲು ಬಂದ ವೇಳೆ, ಅಂಗಡಿಗೆ ದನವೂ ಬಂದಿತ್ತು. ಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತಿತ್ತು. ತಕ್ಷಣ ಅಂಗಡಿ ಮಾಲಕ ತನ್ನ ಕೈಯಲ್ಲಿದ್ದ ತರಕಾರಿ ಕತ್ತರಿಸಲು ಬಳಸುವ ಚಾಕು ತೋರಿಸಿ ದನವನ್ನು ಓಡಿಸಲು ಯತ್ನಿಸಿದ. ಈ ವೇಳೆ ದನದ ಮುಖಕ್ಕೆ ಇರಿಯಲ್ಪಟ್ಟು ಗಾಯವಾಗಿದೆ. ಈ ಘಟನೆ ಎಡಪದವು ಬಳಿ ಬೀದಿ ಬದಿಯ ಅಂಗಡಿಯೊಂದರಲ್ಲಿ ನಡೆದಿದೆ.
ಈ ಘಟನೆಯನ್ನು ಮನಗಂಡ ಪೊಲೀಸ್ ಆಯುಕ್ತರು, ಸುಮೋಟೋ ಕೇಸ್ ದಾಖಲಿಸಿದ್ದಾರೆ. ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಿ ಕೊಳ್ಳುವುದು ಅದರ ಮಾಲೀಕರ ಕರ್ತವ್ಯವಾಗಿದೆ. ಜಾನುವಾರುಗಳ ಮೇಲೆ ಕ್ರೌರ್ಯವನ್ನು ಎಸಗುವುದು ದಂಡನಾರ್ಹ ಅಪರಾಧ. ಹಾಗಾಗಿ ದನಕ್ಕೆ ಆಹಾರ ನೀಡದೆ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡಲು ಬಿಟ್ಟಿದ್ದದನದ ಮಾಲಕ ಮತ್ತು ದನಕ್ಕೆ ಇರಿದ ಆರೋಪದ ಮೇಲೆ ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಬೀದಿಬದಿ ಅಂಗಡಿಯ ಮಾಲೀಕನ ವಿರುದ್ಧ ಬಗ್ಗೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
Mangaluru: Scooter rider injured in accident dies- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











