ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರುರಾಜಕೀಯ

ಮಂಗಳೂರು: ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಆಯ್ಕೆ

ದಕ್ಷಿಣಕನ್ನಡ: Tulu Times | ದಕ್ಷಿಣ ಕನ್ನಡ 2026ನೇ  ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ ಮಾಡಿದ್ದಾರೆ. ಈ ಬಾರಿ ಪದಾಧಿಕಾರಿಗಳ ಸಂಖ್ಯೆಯನ್ನು 20ರಿಂದ 23ಕ್ಕೆ ಏರಿಸಲಾಗಿದೆ. ಹೀಗಾಗಿ ಸಂಘಟನೆಯಲ್ಲಿಯೂ ಅನೇಕ ಬದಲಾವಣೆ ಕೂಡ ತರಲಾಗಿದೆ.

ಪ್ರಧಾನ ಕಾರ್ಯದರ್ಶಿಗಳ ವಿಭಾಗದಲ್ಲಿ  ಪ್ರೇಮಾನಂದ ಶೆಟ್ಟಿ. ಯತೀಶ್ ಅರ್ವಾರ್ ಮತ್ತು ಎಂಎಲ್ಲಿ ಕಿಶೋರ್ ಕುಮಾರ್ ಪಿ. ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಿಶೋರ್ ಕುಮಾರ್ ಅವರು ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಹೊಸ ಆಯ್ಕೆ ನಡೆಯಬಹುದೆಂಬ ಲೆಕ್ಕಚಾರ ರಾಜಕೀಯ ವಲಯದಲ್ಲಿ ನಡೆಯುತಿತ್ತು. ಪಕ್ಷದ ಪ್ರಮುಖ ಜವಾಬ್ದಾರಿಯಾದ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಬದಲಾವಣೆ ಮಾಡಲಾಗಿಲ್ಲ.

ಇದನ್ನೂ ಓದಿ: ಹೊಸ ಅಲೆಯ ಸಿನಿಮಾಗಳಿಗೆ ಮುದ್ರೆ ಹಾಕಿದವರು… ಮತ್ತೆ ಬರ್ತಿದ್ದಾರೆ!

ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳು ಯಾರು..?

ಪ್ರಸನ್ನ ಮಾರ್ತಾ, ಕವಿತಾ ಸನಿಲ್ ಜತೆ ಜಯಂತ್ ಕೋಟ್ಯಾನ್ ಸುನೀಲ್ ಆಳ್ವ, ಜಿ. ಪೂಜಾ ಪ್ರಶಾಂತ್ ಪೈ. ರವೀಂದ್ರ ಶೆಟ್ಟಿ ಉಳಿದೊಟ್ಟು, ಶಾಂತಿಪ್ರಸಾದ್ ಹೆಗ್ಡೆ. ರಾಕೇಶ್ ರೈ ಕೆಡಂಜಿ ಹಾಗೂ ತಿಲಕರಾಜ್ ಕೃಷ್ಣಾಪುರ  ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇನ್ನು 9 ಮಂದಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.  ಧನಲಕ್ಷ್ಮಿಗಟ್ಟಿ. ಪುಷ್ಪ ಮೇದಪ್ಪ, ಸುಜಿತ್ ಪ್ರತಾಪ್ ಮತ್ತು ಶೋಭೇಂದ್ರ ಸಸಿಹಿತ್ತು ಆಯ್ಕೆಯಾಗಿದ್ದಾರೆ.  ದೇವಪ್ಪ ಪೂಜಾರಿ, ದಿನೇಶ್ ಅಮ್ಮೂರು, ಪೂರ್ಣಿಮಾ ಎಂ.. ವಸಂತಿ ಮಚ್ಚಿನ ಮತ್ತು ವಿದ್ಯಾ ಗೌರಿ ಅವರು ಕಾರ್ಯದರ್ಶಿಗಳಾಗಿ ಮುಂದುವರಿದಿದ್ದಾರೆ. ಮಹಿಳಾ ಪದಾಧಿಕಾರಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಮುಂದಿನ ಚುನಾವಣೆಗಳ ದೃಷ್ಟಿಯಿಂದ ಮಹಿಳಾ ಸಂಘಟನೆಯನ್ನು ಬಲಪಡಿಸುವ ಸೂಚನೆಯಾಗಿದೆ. ಸಂಜಯ್ ಪ್ರಭು ಅವರು ಜಿಲ್ಲಾ ಕೋಶಾಧಿಕಾರಿಯಾಗಿ ಮುಂದುವರಿದಿದ್ದಾರೆ. ಕಾರ್ಯಾಲಯ ಕಾರ್ಯದರ್ಶಿ ಜವಾಬ್ದಾರಿಯನ್ನು ಅರವಿಂದ ಶೇಣೈ  ಬದಲಿಗೆ ಗುರುಚರಣ್ ಅವರಿಗೆ ವಹಿಸಲಾಗಿದೆ.ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಪ್ರಭಾವಿ ನಾಯಕರಿಗೂ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ: ಇಡೀ ರಾಜ್ಯದ ಮಹಿಳೆಯರು ಮುಂದೇನು ಎಂದು ಚಿಂತೆ ಮಾಡುವ ದುಸ್ಥಿತಿ- ಬಿ.ಎಸ್.ಯಡಿಯೂರಪ್ಪ

Mangaluru: Election of new district BJP office bearers- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 185

You cannot copy content of this page