ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಉಡುಪಿ: ಸಂಬಂಧಿಕರ ಸ್ಕೂಟಿ ಹಾನಿ ಮಾಡಿದ್ದಕ್ಕೆ ಮನೆಯವರು ಬಯ್ಯುತ್ತಾರೆ ಅಂತ ಆತ್ಮಹತ್ಯೆಗೆ ಶರಣು!

ಉಡುಪಿ: Tulu Times | ಉಡುಪಿಯ ಸಾಯ್ಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ  ವಿದ್ಯಾರ್ಥಿಯೊಬ್ಬ ಸಂಬಂಧಿಕರ ಸ್ಕೂಟಿಗೆ ಹಾನಿ ಮಾಡಿದಕ್ಕೆ ಮನೆಯವರು ಬೈಯುತ್ತಾರೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪಿಲಿಗೂಡು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 101 ಎಳನೀರು ಅಭಿಷೇಕ, ನವಕ ಕಲಶಾಭಿಷೇಕ, ಲಲಿತಾ ಸಹಸ್ರನಾಮ ಹೋಮ

ಯುವಕ ಆತ್ಮಹತ್ಯೆಗೆ ಶರಣಾಕೋಕೆ ಕಾರಣ ಏನು..?

ಉಡುಪಿ ಹತ್ತಿರದ ಮಂದಾರ್ತಿಯಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉದ್ಯೋಗಿ ಮಂಜುನಾಥ ಶೆಟ್ಟಿಗಾರ್ ಅವರ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ವಂಶಿಕ (17)   ಸಂಬಂಧಿಕರ ಸ್ಕೂಟಿಗೆ ಹಾನಿ ಮಾಡಿದಕ್ಕೆ ಮನೆಯವರು ಬೈಯುತ್ತಾರೆ ಅಂತ  ಆತ್ಮಹತ್ಯೆಗೆ ಶರಣಾಗಿದ್ದಾರೆ.  ಭಾನುವಾರ  ಕಾರ್ಕಳದಲ್ಲಿ ವಂಶಿಕಾ ಅವರ ತಂದೆಯ ಸಂಬಂಧಿಯೋರ್ವರ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ,  ಸಂಬಂಧಿಯೋರ್ವರು ಸಾಯಬ್ರಕಟ್ಟೆಯಲ್ಲಿರುವ ಈತನ ಮನೆಗೆ ಬಂದು ಸ್ಕೂಟಿ ನಿಲ್ಲಿಸಿ ಹೋಗಿದ್ದಾರೆ. ನಂತರ ಅಲ್ಲಿಂಗ ಕುಟುಂಬದವರೊಂದಿಗೆ ಕಾರ್ಕಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Food : ಚರ್ಮದ ಆರೋಗ್ಯ ಮತ್ತು ದೃಷ್ಟಿಗೆ ಉತ್ತಮ : ಚಳಿಗಾಲಕ್ಕೆ ಆರೋಗ್ಯಕರ ಫುಡ್

ಈ ಸಂದರ್ಭ ಸಂಬಂಧಿಕರು ತಂದಿಟ್ಟಿದ್ದ ಸ್ಕೂಟಿಯನ್ನು ಕಲಿಯುವ ಸಲುವಾಗಿ ವಂಶಿಕ ಸ್ಕೂಟಿ ಓಡಿಸಿಕೊಂಡು ಹೋಗಿದ್ದಾನೆ. ಈ ವೇಳೆ ಸ್ಕೂಟಿ ನಿಯಂತ್ರಣ ತಪ್ಪಿ ಹಾನಿಯಾಗಿದೆ.  ಈ ವಿಚಾರಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ  ಮನೆ ಹತ್ತಿರ ಇದ್ದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಮನೆಯವರು ಕಾರ್ಯಕ್ರಮ ಮುಗಿಸಿ ಬಂದಾಗ ಮನೆಯಲ್ಲಿ ಯುವಕ ಇರಲಿಲ್ಲ. ಹೀಗಾಗಿ ಸ್ನೇಹಿತರು ಹಾಗೂ ಮನೆಯ ಪಕ್ಕದವರು ಸ್ಥಳೀಯ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಸ್ಕೂಟಿ ಹಾಗೂ ಮೊಬೈಲ್, ಹೆಲೈಟ್ ಪತ್ತೆಯಾಗಿದೆ. ನಂತರ ಅಲ್ಲೇ ಸ್ವಲ್ಪ ದೂರದಲ್ಲಿ  ಚಪ್ಪಲಿ ಹಾಗೂ ಶರ್ಟ್ ಪತ್ತೆಯಾಗಿದೆ. ಹೊಂಡವನ್ನು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Udupi: Youth commits suicide after family members scold him for damaging relative’s scooty- ತುಳುಟೈಮ್ಸ್

ಇದನ್ನೂ ಓದಿ: ಕರ್ನಾಟಕದ ಸರ್ಕಾರಿ ಶಾಲಾ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳ ಬದಲಿಗೆ ಮೆನ್ಸ್ಟ್ರುವಲ್ ಕಪ್‌ಗಳು?

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 160

You cannot copy content of this page