ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಕಂಬಳ ಎಂಬುದು ತುಳುನಾಡಿನ ಅಸ್ಮಿತೆ: ಬಿ.ವೈ.ವಿಜಯೇಂದ್ರ

ಕರ್ನಾಟಕ: Tulu Times | ಕಂಬಳ ಎಂಬುದು ಒಂದು ಗ್ರಾಮೀಣ ಕ್ರೀಡೆಯಲ್ಲ; ಕಂಬಳ ಎಂಬುದು ತುಳುನಾಡಿನ ಅಸ್ಮಿತೆ. ಜಾನಪದ ಕ್ರೀಡೆ ಎನಿಸಿದ ಕಂಬಳವು ರಾಜ್ಯದ ಯಾವುದೇ ಭಾಗದಲ್ಲಿ ನಡೆದರೂ ಅದಕ್ಕೆ ಧನಸಹಾಯವನ್ನು ಸರಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:‌ ಈ ಪ್ರತಿಷ್ಠಿತ‌ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮಾಡಬೇಕಾ? ಹಾಗಾದ್ರೆ ಇಂದೇ ಅರ್ಜಿ ಸಲ್ಲಿಸಿ

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿಯಲ್ಲಿ ಎಲ್ಲೇ ಕಂಬಳ ನಡೆದರೂ 5 ಲಕ್ಷ ಸಹಾಯಧನ ಕೊಡುವ ಪುಣ್ಯದ ಕೆಲಸ ಮಾಡಿದ್ದರು. ಕರಾವಳಿ ಬಗ್ಗೆ ಅವರಿಗೆ ವಿಶೇಷ ಮಮತೆ ಇತ್ತು ಎಂದು ತಿಳಿಸಿದರು. ಇವತ್ತಿನ ರಾಜಕೀಯ ವ್ಯವಸ್ಥೆಯಡಿ ಕಂಬಳಕ್ಕೆ ಕೂಡ ರಾಜಕೀಯವನ್ನು ಥಳಕು ಹಾಕುತ್ತಿರುವುದು ದುರ್ದೈವ ಎಂದು ಹೇಳಿದರು.

ಇದನ್ನೂ ಓದಿ: ಆಧ್ಯಾತ್ಮಿಕ ಶಾಂತಿ ಹಾಗೂ ಭಕ್ತಿಗೆ ಹೆಸರಾದ ಮಂತ್ರಾಲಯದಲ್ಲಿ ಭಾಷಾ ವಿವಾದ !

ಕಾಪುವಿನಲ್ಲೂ ಮಾಜಿ ಪ್ರಧಾನಿ, ದೇಶ ಕಂಡ ಹೆಮ್ಮೆಯ ನಾಯಕ, ಅಪ್ಪಟ ದೇಶಪ್ರೇಮಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿಗೆ ತೆರಳುವ ಕುರಿತು ತಿಳಿಸಿದ ಅವರು, ಕಂಬಳಕ್ಕೆ ಪ್ರೀತಿಯಿಂದ ಕರೆದು ಪ್ರಕಾಶ್ ಶೆಟ್ಟಿ, ಬ್ರಿಜೇಶ್ ಚೌಟ ಅವರು, ಶಾಸಕ ಮಿತ್ರರು ನನಗೂ ನಾಲ್ಕು ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಂಬಳದ ಪ್ರಾಯೋಜಕರಿಗೆ ಧನ್ಯವಾದಗಳು ಮತ್ತು ಅಭಿನಂದನೆ ತಿಳಿಸುವುದಾಗಿ ಹೇಳಿದರು.

ಇದನ್ನೂ ಓದಿ: ಕಡಿಮೆ ಹೆರಿಗೆ ಆಗುವ ಆಸ್ಪತ್ರೆಗಳಿಂದ ವೈದ್ಯರ ಶಿಫ್ಟ್ : ಆರೋಗ್ಯ ಇಲಾಖೆಯಿಂದ ಆದೇಶ

ಕರಾವಳಿ ಭಾಗದ ಎಲ್ಲ ತಂದೆ, ತಾಯಂದಿರು, ಯುವ ಮಿತ್ರರಿಗೆ ಶುಭಾಶಯ ಕೋರಿದರು. ಕಂಬಳವನ್ನು ತಾವೆಲ್ಲರೂ ಸಂತೋಷದಿಂದ ನೋಡಿ ಆನಂದಿಸಿ ಎಂದು ತಿಳಿಸಿದರು. ಸಾಧಕರನ್ನು ಕರೆಸಿ ಅವರಿಗೆ ಸನ್ಮಾನ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿದರು. ಜನ್ಮ ನೀಡಿದ ತುಳುನಾಡಿಗೆ ವಾಪಸ್ ಅವರು ಕೊಡುಗೆ ನೀಡಬೇಕೆಂಬ ಸದುದ್ದೇಶ ಇದರ ಹಿಂದಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸರ್ಕಾರ ಜನರ ಜೀವ ರಕ್ಷಿಸುವಲ್ಲಿ ಸಂಪೂರ್ಣ ವಿಫಲ : ಅರುಣ್ ಕುಮಾರ್ ಪುತ್ತಿಲ

Kambala is the identity of Tulunad: B.Y.Vijayendra- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 193

You cannot copy content of this page