ವಿದೇಶ: Tulu Times | ಬಾಂಗ್ಲಾದೇಶದಲ್ಲಿ 29 ವರ್ಷದ ಹಿಂದೂ ವ್ಯಕ್ತಿಯನ್ನು ಹೊಡೆದು ಕೊಂದ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದಿದೆ.
ಮತ್ತೊಬ್ಬ ಹಿಂದೂ ಯುವಕನ ಬರ್ಬರ ಹತ್ಯೆಯಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಘಟನೆಯೂ ರಾಜ್ ಬರಿ ಜಿಲ್ಲೆಯ ಪಂಗ್ಶಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ದೇಶದಲ್ಲಿ ಗುಂಪು ದಾಳಿಗಳ ಬಗ್ಗೆ ಆತಂಕ ಹೆಚ್ಚಿಸಿದೆ.
ಅಮೃತ್ ಮಂಡಲ್ ಎಂದು ಮೃತನನ್ನು ಗುರುತಿಸಲಾಗಿದ್ದು, ಸ್ಥಳೀಯರು ಸುಲಿಗೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ತಡರಾತ್ರಿ 11 ಗಂಟೆ ಸುಮಾರಿಗೆ ಪಂಗ್ಶಾ ಉಪಜಿಲ್ಲಾದ ಹೊಸೈನ್‌ಡಂಗಾ ಹಳೆಯ ಮಾರುಕಟ್ಟೆಯಲ್ಲಿ ಮಂಡಲ್ ಅಲಿಯಾಸ್ ಸಾಮ್ರಾಟ್ ಮೇಲೆ ಹಲ್ಲೆ ನಡೆಸಲಾಗಿದೆ. ದಾಳಿಯ ನಂತರ ಮಂಡಲ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಮಂಡಲ್ ಸುಲಿಗೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ, ಇದು ಗುಂಪು ಹಿಂಸಾಚಾರಕ್ಕೆ ಕಾರಣವಾಯಿತು. ಪೊಲೀಸ್ ದಾಖಲೆಗಳು ಅವರನ್ನು ಸಾಮ್ರಾಟ್ ಬಹಿನಿ ಎಂದು ಕರೆಯಲ್ಪಡುವ ಸಣ್ಣ ಸ್ಥಳೀಯ ಗುಂಪಿನ ನಾಯಕ ಎಂದು ವಿವರಿಸುತ್ತವೆ. ಅಮೃತ್ ಮಂಡಲ್ ಅವರನ್ನು ಈ ಪ್ರದೇಶದಲ್ಲಿ ಹಿಂದೂ ಸಮುದಾಯದ ನಾಯಕ ಎಂದು ಪರಿಗಣಿಸಲಾಗುತ್ತಿತ್ತು.
ಬಸ್ ಅಪಘಾತ: ಇಂದು ಬಸ್ ನ ಚಾಲಕ ಮೃತ್ಯು
ಪ್ರತ್ಯೇಕ ಪ್ರಕರಣದಲ್ಲಿ,ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಟೀಪರ್ ಬಸ್ ಹೊತ್ತಿದ ಪರಿಣಾಮ 7 ಮಂದಿ ಮೃತರಾಗಿರುವ ಘಟನೆ ನಡೆದಿದ್ದು, ಇಂದು ಬಸ್ ನ ಚಾಲಕ ಮೃತಪಟ್ಟಿದ್ದಾರೆ.
ಗೊರ್ಲತ್ತು ಕ್ರಾಸ್ ಬಳಿ ಎದುರುಗಡೆಯಿಂದ ಯಮನಂತೆ ಬಂದ ಲಾರಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಮಹಮ್ಮದ್ ರಫೀಕ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು (ಡಿ.26) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ ರಫೀಕ್ ಅಪಘಾತದ ಬಗ್ಗೆ ಮಾತನಾಡಿ, ಏಕಾಏಕಿ ಲಾರಿ ಬಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಅದನ್ನು ತಪ್ಪಿಸಲು ಹೋದಾಗ ಪಕ್ಕದಲ್ಲೇ ಬಸ್ ಇತ್ತು. ಸೀದಾ ಲಾರಿ ಡಿಸೇಲ್ ಟ್ಯಾಂಕ್‌ಗೆ ಗುದ್ದಿದೆ. ಆ ಕ್ಷಣದಲ್ಲಿ ಏನ್ ಆಯ್ತು ಅನ್ನೋದು ಗೊತ್ತಾಗಲಿಲ್ಲ ಎಂದು ಹೇಳಿದ್ದರು. ಆದರೂ ಅವರ ನೋವು ಗೊತ್ತಾಗುತ್ತಿತ್ತು. ಈ ದುರಂತದಲ್ಲಿ ಬೆಂಗಳೂರಿನ ಬಿಂದು, ಅವರ ಪುತ್ರಿ ಗ್ರೇಯಾ, ಚನ್ನರಾಯಪಟ್ಟಣದ ಮಾನಸಾ, ನವ್ಯ, ಕಾರವಾರದ ರಶ್ಮಿ ಲಾರಿ ಚಾಲಕ ಕುಲದೀಪ್ ಸಜೀವ ದಹನಗೊಂಡಿದ್ದಾರೆ. ಬಸ್‌ಗೆ ಬೆಂಕಿ ತಗುಲುತ್ತಿದ್ದಂತೆ ಬಸ್ ಚಾಲಕ, ನಿರ್ವಾಹಕ, ಕೆಲವರು ಬಸ್‌ನಿಂದ ಹೊರಜಿಗಿದು ಬಚಾವ್ ಆಗಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತದೇಹಗಳ ಡಿಎನ್ಎ ಪರೀಕ್ಷೆಗಾಗಿ ಮೃತರ ಸಂಬಂಧಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಹಾಗೂ ಮೃತರ ಮೂಳೆಗಳ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಇವುಗಳನ್ನು ಹುಬ್ಬಳ್ಳಿಯ ಲ್ಯಾಬ್‌ಗೆ ಕಳುಹಿಸಿ, ವರದಿ ಬಂದ ಬಳಿಕ ಖಚಿತವಾಗಿ ಮೃತರ ಗುರುತು ಪತ್ತೆಯಾಗಲಿದೆ.
ಬೆಂಗಳೂರಿಗೆ ಕನಸು ಹೊತ್ತುಕೊಂಡು ಬಂದು ಜೀವನಗಳು ಸಜೀವ ದಹನ!
ಅದೆಷ್ಟೋ ಜನ ಯುವಕ ಯುವತಿಯರು ಬೆಂಗಳೂರಿಗೆ ಕನಸು ಹೊತ್ತುಕೊಂಡು ಬಂದು ಜೀವನ ನಡೆಸುತ್ತಾರೆ. ಅದ್ರಲ್ಲಿ ನಿನ್ನೆ ಬಸ್ ಅಪಘಾತದಲ್ಲಿ ಸುಟ್ಟುಕರಕಲಾದ ಯುವತಿ ರಶ್ಮಿಯ ಕಥೆ, ಉಜ್ವಲ ಭವಿಷ್ಯ ಕಟ್ಟಿಕೊಂಡು ಬಂದ ಈ ಹುಡುಗಿ ಗುರು ಸುಧೀಂದ್ರ ಕಾಲೇಜಿನ ಹುಡುಗಿ. ಅಪಘಾತದಲ್ಲಿ ಸುಟ್ಟು ಕರಕಲಾಗಿ ಹೋಗಿದ್ದಾಳೆ.
ರಶ್ಮಿ ಮಹಾಲೆ, ಭಟ್ಕಳದಂಥ ಪುಟ್ಟ ಪಟ್ಟಣದಲ್ಲಿ ಬೆಳೆದು, ವಿದ್ಯಾಭ್ಯಾಸವನ್ನು ಭಟ್ಕಳದಲ್ಲಿಯೇ ಮಾಡಿದ್ದ ಚಿತ್ರದುರ್ಗದ ಹಿರಿಯೂರು ಸಮೀವ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ತನ್ನ ಇಬ್ಬರು ಗೆಳತಿಯರಾದ ಗಗನಾ ಹಾಗೂ ರಕ್ಷಿತಾ ಜೊತೆ ಗೋಕರ್ಣಕ್ಕೆ ಹೋಗುತ್ತಿದ್ದ ರಶ್ಮಿ ಮಹಾಲೆ ಸುಟ್ಟು ಕರಕಲಾಗಿದ್ದಾರೆ.
29-year-old Hindu man murdered in Bangladesh- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











