ಬ್ರೇಕಿಂಗ್ ನ್ಯೂಸ್
ರಾಜಕೀಯ

ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಮಧ್ಯೇ ಏನೂ ಇಲ್ಲ,ಒಂದೇ ಹೆಲಿಕಾಪ್ಟರ್ ನಲ್ಲಿ ಪ್ರಯಾಣ!?

ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ತಮ್ಮ ಮಧ್ಯೇ ಏನೇನೂ ಇಲ್ಲ ಎಂಬ ಸಂದೇಶವನ್ನು ನೀಡೋದಿಕ್ಕೆ ಮುಂದಾಗಿದ್ದಾರೆ.ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿಯ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ.ದಿನೇ ದಿನೇ ಸಿಎಂ ಪಟ್ಟಕ್ಕೆ ಡಿಕೆಶಿ ಬರುತ್ತಾರಾ ಅನ್ನೋ ಬಗ್ಗೆ ಬಿಸಿಬಿಸಿ ಮಾತುಗಳು ಜೋರಾಗುತ್ತಿದೆ.ಡಿಕೆ ಬೆಂಬಲಿಗರು ನೆಚ್ಚಿನ ನಾಯಕನ ಪಟ್ಟಾಭಿಷೇಕಕ್ಕೆ ಕಾಯುತ್ತಿದ್ದಾರೆ.

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ,ತಾನೇ ಸಿಎಂ ಎಂಬ ಸ್ಟೈಲ್ ನಲ್ಲೇ ಓಡಾಡುತ್ತಿದ್ದಾರೆ.ಈ ಬಗ್ಗೆ ನಿರ್ಧರಿಸಬೇಕಾದ ಹೈಕಮಾಂಡ್ ನಿಂದ ಯಾವುದೇ ಸೂಚನೆಗಳು ಇದುವರೆಗೆ ಸಿಕ್ಕಿಲ್ಲ.ಹೀಗಾಗಿ ಸಿಎಂ ಪಟ್ಟದ ಚರ್ಚೆ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಮಧ್ಯೆ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಜೊತೆಯಾಗಿ ಇಂದು ಪ್ರಯಾಣಿಸಲಿದ್ದಾರೆ.ಶಾಮನೂರು ನುಡಿನಮನ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಪಾಲ್ಗೊಳ್ಳಲಿದ್ದಾರೆ.ದಾವಣಗೆರೆ ಪ್ರವಾಸ ಕೈಗೊಂಡಿರುವ ನಾಯಕರು ಜೊತೆಯಾಗಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲಿದ್ದಾರೆ.ಸಿಎಂ ಫೈಟ್ ನಲ್ಲಿರೋ ನಾಯಕರಿಬ್ಬರೂ ಜೊತೆಯಾಗಿ ಸಾಗುತ್ತಿರುವುದು ರಾಜಕೀಯ ವಲಯದ ಸದ್ಯದ ಸನ್ಸೇಶನಲ್ ಸುದ್ದಿ.

ಶಾಮನೂರು ನುಡಿನಮನದಲ್ಲಿ ಭಾಗವವಹಿಸಿದ ನಂತರ ಇಬ್ಬರೂ ನಾಯಕರು ದಾವಣಗೆರೆಯ ಅಭಿವೃದ್ದಿ ಕುರಿತಂತೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ದಾವಣಗೆರೆ ಪ್ರವಾಸಕ್ಕೆ ಜೊತೆಯಾಗಿ ತೆರಳ್ತಿರೋ ಇಬ್ಬರೂ ನಾಯಕರು ಬರುವಾಗ ಜೊತೆಯಾಗಿ ವಾಪಸ್ಸಾಗ್ತಾರಾ ಅನ್ನೋದು ಇದೀಗ ಮತ್ತೊಂದು ಚರ್ಚೆಯ ವಿಷಯ.ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿರುವ ಸಿಎಂ ಪಟ್ಟ ವಿಷಯದ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್ ಸೈಲೆಂಟಾಗಿರೋದು ಕೂಡ ನಾಯಕರಲ್ಲಿ ಹಲವಾರು ಪ್ರಶ್ನೆಗಳು ಮೂಡೋದಿಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಕೆಂಪೇಗೌಡ ಪ್ರತಿಷ್ಠಾನದಿಂದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ 101ನೇ ಜನ್ಮದಿನ ಆಚರಣೆ
.
……………………………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 16

You cannot copy content of this page