ಬ್ರೇಕಿಂಗ್ ನ್ಯೂಸ್
ಕರ್ನಾಟಕಸುಳ್ಯ

ಸುಳ್ಯದಲ್ಲಿ ರೈತ ದಿನಾಚರಣೆ: ಬೆಳೆ ವಿಮೆ ಬಗ್ಗೆ ಕ್ಯಾ. ಬ್ರಿಜೇಶ್ ಚೌಟ ಹೇಳೋದೇನು?

ಸುಳ್ಯ: Tulu Times | ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ 2025-26 ನೇ ಸಾಲಿನ ಆತ್ಮ ಯೋಜನೆ ಕಿಸಾನ್ ಗೋಷ್ಠಿ ಹಾಗೂ ಪ್ರಗತಿಪರ ರೈತರೊಂದಿಗೆ ಸಂವಾದ ಕಾರ್ಯಕ್ರಮ  ನಡೆಯಿತು.

ಇದನ್ನೂ ಓದಿ: ರೈತ ಉಳಿದರೆ ದೇಶ ಉಳಿಯುತ್ತದೆ : ಡಿಸೆಂಬರ್ 23 ‘ರಾಷ್ಟ್ರೀಯ ರೈತ ದಿನ’

ಈ ವೇಳೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬೆಳೆ ವಿಮೆ ಈ ಬಾರಿ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬಂದಿಲ್ಲ.ಲೋಪದೋಷಗಳನ್ನು ಸರಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಜತೆ ಮಾತನಾಡಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಅಡಿಕೆ ಹಳದಿ ಎಲೆ ರೋಗದ ಸಮಸ್ಯೆ ಕುರಿತು ನಾನು ಸಚಿವರ ಗಮನಕ್ಕೆ ತಂದಿದ್ದೇನೆ. ಮುಂದುವರಿದ ಭಾಗವಾಗಿ ಆ ಪ್ರದೇಶದಲ್ಲಿ ಎಷ್ಟು ಕೃಷಿ ನಷ್ಟ ಆಗಿದೆ ಅದರ ಸರ್ವೆ ನಡೆಯುತ್ತಿದೆ. ಮುಂದಿನ ದಿನದಲ್ಲಿ ಕೇಂದ್ರ ಕೃಷಿ ಸಚಿವರು ಸುಳ್ಯಕ್ಕೆ ಬಂದು ಇಲ್ಲಿ ಕೃಷಿಕರೊಂದಿಗೆ ಈ ಕುರಿತು ಸಂವಾದ ನಡೆಸಲಿದ್ದಾರೆ ಹೇಳಿದರು.

ಇದನ್ನೂ ಓದಿ: ‘ಯುದ್ಧಕ್ಕೆ ಸಿದ್ಧ…’ ಮಾತಿಗೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದ್ದೇನು..?

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಬೆಳೆ ವಿಮೆ ಬಂದುದರಲ್ಲಿ ಇಲ್ಲಿಯ ರೈತರಿಗೆ ಅನ್ಯಾಯ ಆಗಿದೆ. ಅವರು ಕಟ್ಟಿದ ಹಣದಷ್ಟು ಆದರೂ ಸಿಗುತಿದ್ದರೆ ಸಮಾಧಾನ ಆಗುತಿತ್ತು. 10 ಸಾವಿರ ಪಾವತಿಸಿದವನಿಗೆ 2 ಸಾವಿರ ಬಂದಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಮತ್ತೊಮ್ಮೆ ಸರ್ವೆ ನಡೆಸಿ ರೈತನಿಗೆ ಸರಿಯಾದ ರೀತಿಯಲ್ಲಿ ವಿಮೆ ಸಿಗುವಂತೆ ಮಾಡಬೇಕು ಎಂದರು.

ಈ ವೇಳೆ  ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರಾ ಕೋಲ್ಟಾರ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ ಅಡ್ವಂಗಾಯ, ಸುಳ್ಯ ತಹಶೀಲ್ದಾರ್ ಮಂಜುಳಾ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ, ಸುಳ್ಯ ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಸುದರ್ಶನ ಸೂರ್ತಿಲ ಮುಂತಾದವರು ಉಪಸ್ಥಿತರಿದ್ದರು. ಅತ್ಯುತ್ತಮ ಕೃಷಿ ಮಾಡುತಿದ್ದಾರೆಂಬ ಕಾರಣಕ್ಕಾಗಿ 6 ಮಂದಿ ರೈತರನ್ನು ಸನ್ಮಾನಿಸಲಾಯಿತು. ಕೃಷಿ ಕೆಲಸ ಮಾಡುವಾಗ ಆಕಸ್ಮಿಕ ಮರಣ ಸಂಬಂವಿಸಿದ ನಾಲ್ವರ ಕುಟುಂಬಕ್ಕೆ 2 ಲಕ್ಷದಂತೆ ಕೃಷಿ ಇಲಾಖೆಯಿಂದ ಪರಿಹಾರ ಮೊತ್ತ ವಿತರಿಸಲಾಯಿತು.

Farmers’ Day celebration in Sullia: What does Cllr. Brijesh Chowta have to say about crop insurance? – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page