ಸಂಪಾಜೆ : Tulu Times | ಚೆಂಬು ಗ್ರಾಮದ ನಿಡಿಂಜಿಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಶುದ್ಧೀಕೃತ ಕುಡಿಯುವ ನೀರಿನ ಫ್ಯಾಕ್ಟರಿ ಅಕ್ವಾನಿಶ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ನ್ನು , ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ದೀಪ ಬೆಳಗಿಸಿ, ಉದ್ಘಾಟಿಸಿದರು.
ಶುದ್ಧ ಕುಡಿಯುವ ನೀರು ಹಾಗೂ ತಂಪು ಪಾನೀಯಗಳ ಉತ್ಪಾದನೆ ;
ದೇಶದ ಮಹಾನಗರದಲ್ಲಿ ಸ್ಥಾಪನೆಯಾಗಬೇಕಾದ ಬೃಹತ್ ಉದ್ಯಮವು ಇದೀಗ ಸುಳ್ಯ ಮತ್ತು ಕೊಡಗು ಗಡಿ ಪ್ರದೇಶವಾಗಿರುವ ಚೆಂಬು ಗ್ರಾಮದಲ್ಲಿರುವುದು ಹೆಮ್ಮೆಯ ವಿಚಾರ. ಮುಖ್ಯವಾಗಿ ಜಯರಾಮ ಚೌಟಾಜೆ, ಸುಬ್ರಮಣ್ಯ ಕದಿಕಡ್ಕ, ವಿಜಯ್ ನಿಡಿಂಜಿಯವರ ಪಾಲುದಾರಿಕೆಯಲ್ಲಿ ಈ ಉದ್ಯಮವನ್ನು ನಿರ್ಮಿಸಲಾಗಿದ್ದು, ಇದು ಆಸು ಪಾಸಿನ ಜನಗಳಿಗೆ ಹಾಗೂ ಸಮಸ್ತ ಕರ್ನಾಟಕ ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ತಂಪು ಪಾನೀಯಗಳನ್ನು ಉತ್ಪಾದನೆ ಮಾಡುವ ಕೆಲಸ ಮಾಡಲು ಮುಂದಾಗಿರುವುದು ವರದಿಯಾಗಿದೆ.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಗಿರೀಶ್ ಭಾರದ್ವಾಜ್, ಸುದ್ದಿ ಸಮೂಹ ಸಂಸ್ಥೆಯ ಮಾಲಕರಾದ ಡಾ.ಯು.ಪಿ.ಶಿವಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಚೆಂಬು ಗ್ರಾ.ಪಂ.ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಸಂಪಾಜೆಯ ಪಯಸ್ವಿನಿ ಸಹಕಾರ ಸೊಸೈಟಿಯ ಅಧ್ಯಕ್ಷ ಎನ್.ಸಿ.ಅನಂತ, ಸಾಮಾಜಿಕ ಧುರೀಣ ಸೂರಜ್ ಹೊಸೂರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮುಖ್ಯ ಸಂಸ್ಥೆಯ ನಿರ್ದೇಶಕರಾದ ವಿಜಯ ನಿಡಿಂಜಿ ಸ್ವಾಗತಿಸಿ, ನಿರ್ದೇಶಕ ಸುಬ್ರಹ್ಮಣ್ಯ ಕದಿಕಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಜಯರಾಮ ಚೌಟಾಜೆ ವಂದಿಸಿದರು. ಆಕಾಶ್ ನಿಡಿಂಜಿ ಮತ್ತು ಸಾತ್ವಿಕ್ ನಿಡಿಂಜಿ ಪ್ರಾರ್ಥನೆಗೈದರು. ವೀಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
Aquanish Beverages Private Limited inaugurated in Chembu village, bordering Kodagu – ತುಳು ಟೈಮ್ಸ್
ಇದನ್ನೂ ಓದಿ :ಫ್ಯಾನ್ಸ್ ವಾರ್ ಮತ್ತೆ ಶುರು..? ದಚ್ಚು.. ಕಿಚ್ಚ ಫ್ಯಾನ್ಸ್ ಗಲಾಟೆಗೆ ಕಾರಣ ಏನು..?
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=eZucR1e2LtnrhKW3











