ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಲಯಾಳಂನ ಅಗ್ರಗಣ್ಯ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀನಿವಾಸನ್ ನಿಧನ

ನಿಧನ : Tulu Time | ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69 ವರ್ಷ) ಶನಿವಾರ ನಿಧನರಾಗಿದ್ದಾರೆ. ನಟ, ನಿರ್ದೇಶಕ, ಕಥೆಗಾರ ಹಾಗೂ ಗೀತರಚನೆಗಾರ ಎಂಬ ಹಲವಾರು ಆಯಾಮಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅವರು ಮಲೆಯಾಳಂ ಸಿನಿರಂಗದ ಅಗ್ರಗಣ್ಯ ಕಲಾವಿದರಲ್ಲೊಬ್ಬರು.

ಶ್ರೀನಿವಾಸನ್ ಅವರು ಕೇರಳದಲ್ಲಿ ಜನಿಸಿ ಬೆಳೆದವರು. ಆರಂಭದಲ್ಲಿ ಬರವಣಿಗೆಯ ಮೇಲಿನ ಆಸಕ್ತಿ ಹೊಂದಿದ್ದ ಅವರು, ಚಿತ್ರಕಥೆ ಮತ್ತು ಸಂಭಾಷಣೆಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ಬರವಣಿಗೆಯಲ್ಲಿನ ಸಾಮಾಜಿಕ ವ್ಯಂಗ್ಯ ಹಾಗೂ ಸಾಮಾನ್ಯ ಮನುಷ್ಯನ ಬದುಕಿನ ನೋವು-ನಲಿವುಗಳು ಜನಮನ ಸೆಳೆದಿರುವಂತದ್ದು ಎಂಬುದಕ್ಕೆ ಸಂದೇಹವೇ ಇಲ್ಲ.

ಆರೋಗ್ಯದಲ್ಲಿ ದಿಢೀರ್ ಏರುಪೇರು ;

ಶ್ರೀನಿವಾಸನ್ ಅವರು ಮಲೆಯಾಳಂ ಚಿತ್ರರಂಗಕ್ಕೆ ಹಲವಾರು ಪ್ರತಿಭಾವಂತರನ್ನು ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ನಟ ದಿಲೀಪ್ ಅವರ ಸಿನಿಜೀವನಕ್ಕೆ ದಾರಿ ತೋರಿಸಿದ ವ್ಯಕ್ತಿಯಾಗಿ ಅವರು ಗುರುತಿಸಲ್ಪಟ್ಟಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದವರಾಗಿದ್ದಾರೆ. ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

1977ರಲ್ಲಿ ಪಿ.ಎ. ಬ್ಯಾಕ‌ರ್ ಅವರ ‘ಮಣಿಮುಳಕ್ಕಂ’ ಚಿತ್ರದ ಮೂಲಕ ಶ್ರೀನಿವಾಸನ್ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದರು. ಸುಮಾರು ಐದು ದಶಕಗಳ ಕಾಲ ಅವರು 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ. ನಟ, ನಿರ್ಮಾಪಕ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಶ್ರೀನಿವಾಸನ್ ಅವರ ಕೊಡುಗೆ ಆಧುನಿಕ ಮಲಯಾಳಂ ಸಿನಿಮಾವನ್ನು ರೂಪಿಸಲು ಸಹಾಯ ಮಾಡಿದೆ ಎಂದೇ ಹೇಳಬಹುದು.

Malayalam’s leading veteran actor, director, producer Srinivasan passes away – ತುಳು ಟೈಮ್ಸ್

ಇದನ್ನೂ ಓದಿ :ಡಿಸೆಂಬರ್ 20 ರ ದಿನ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿದೆ ?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=ZnMAz2_LgUHSxqn9

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page