ಕರ್ನಾಟಕ: Tulu Times | ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್ ಮಸ್ ಹಬ್ಬ ಬರಲಿದೆ. ಅದರ ಜೊತೆ ಜೊತೆಗೆ ಹೊಸ ವರ್ಷ ಕೂಡ ಸಮೀಪಿಸಲಿದೆ. ಇದೀಗ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.
2025 ಕಳೆದು 2026ರ ಆಗಮನಕ್ಕೆ ಇನ್ನೇನು 10 ದಿನ ಮಾತ್ರ ಬಾಕಿದೆ. ಹಬ್ಬ ಬರುತ್ತಿದ್ದಂತೆ ಇಕಾಮರ್ಸ್ ಕಂಪನಿಗಳು ಹೊಸ ಹೊಸ ಆಫರ್ಸ್ ನೀಡಲು ರೆಡಿಯಾಗಿವೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ 1000 ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ನೀಡುತ್ತಿದೆ. ಡಿಸೆಂಬರ್ 19, 20 ಮತ್ತು 24 ರಂದು ಬೆಂಗಳೂರಿನಿಂದ ವಿವಿಧ ನಗರಗಳಿಗೆ ತೆರಳುವ ಹಾಗೂ ಡಿಸೆಂಬರ್ 26 ಮತ್ತು 28 ರಂದು ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳು ಸೇವೆಗಳಿವೆ ಎನ್ನಲಾಗಿದೆ.
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರೋಡ್‌ನ ಬಸ್ ನಿಲ್ದಾಣಗಳಿಂದ ಬಸ್‌ಗಳು ಸಂಚರಿಸಲಿದೆ ಎಂದು ಹೇಳಲಾಗಿದ್ದು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಶಿವಮೊಗ್ಗ, ಕುಂದಾಪುರ, ಮಂಗಳೂರು, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕರ್ಣ, ವಿಜಯಪುರ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೀದರ್, ಯಾದಗಿರಿ, ಪಿರಿಯಾಪಟ್ಟಣ, ಹುಣಸೂರು, ಮೈಸೂರು ಕುಶಾಲನಗರ, ತಿರುಪತಿ, ಹೈದರಾಬಾದ್, ವಿರಾಜಪೇಟೆ, ಮಡಿಕೇರಿ, ವಿಜಯವಾಡ ಸಹಿತ ವಿವಿಧೆಡೆ ಹೋಗುವ ಪ್ರಯಾಣಿಕರಿಗಾಗಿ ವಿಶೇಷ ಬಸ್‌ಗಳು ಸಂಚಾರ ಮಾಡಲಿದೆ.
ಇದನ್ನೂ ಓದಿ: ಡಿಸೆಂಬರ್ 20 ರ ದಿನ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿದೆ ?
ಕೆಎಸ್‌ಆರ್‌ಟಿಸಿ ವಿಶೇಷ ಆಫರ್ ಕೂಡ ನೀಡಲಾಗಿದ್ದು, 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಪ್ರಿ ಟಿಕೆಟ್ ಬುಕ್ ಮಾಡಿದರೆ, ಶೇ.5% ರಷ್ಟು ರಿಯಾಯಿತಿ ಸಿಗಲಿದೆ. ರಿಟರ್ನ್ ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ, ರಿಟರ್ನ್ ಟಿಕೆಟ್‌ನಲ್ಲಿ ಶೇ.10% ರಷ್ಟು ರಿಯಾಯಿತಿ ಸಿಗಲಿದೆ. ಪ್ರಿಬುಕ್ ಮಾಡಿ ಸೀಟುಗಳನ್ನು ಕಾಯ್ದಿರಿಸುವ ಅವಕಾಶ ನೀಡಲಾಗಿದೆ. ಅದಕ್ಕಾಗಿ www.ksrtc.karnataka.gov.in ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಹೊಸ ವರ್ಷ, ಕ್ರಿಸ್‌ಮಸ್ ಹಬ್ಬದ ಸಂದರ್ಭಗಳಲ್ಲಿ ಬಹುತೇಕರು ದೂರದ ಊರಿಂದ ತಮ್ಮ ತಮ್ಮ ಊರುಗಳಿಗೆ ಅಥವಾ ಟ್ರಿಪ್ ಪ್ಲಾನ್ ಮಾಡುತ್ತಾರೆ. ಆ ಮೂಲಕ ಕಡಿಮೆ ದರದಲ್ಲಿ, ಕೆಎಸ್‌ಆರ್‌ಟಿಸಿ ಮೂಲಕ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.
Big offer for KSRTC passengers for Christmas!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











