ಕರ್ನಾಟಕ: Tulu Times | ಕೆ.ಎಸ್.ಆರ್.ಟಿ.ಸಿ ಚಾಲಕರಿಗೆ ಗುಡ್ ನ್ಯೂಸ್ ರಾಜ್ಯ ಸರ್ಕಾರ ಕೊಟ್ಟಿದ್ದು, ಬಹುದಿನಗಳಿಂದ ಇದ್ದ ಪ್ರೋತ್ಸಾಹ ಧನ ಹೆಚ್ಚಳ ಬೇಡಿಕೆಗೆ ಸರ್ಕಾರ ಇದೀಗ ಗ್ರೀನ್ ಸಿಗ್ನಲ್ ಕೊಟ್ಟಿರುವುದು ವಾಹನ ಚಾಲಕರಿಗೆ ಖುಷಿ ತಂದಿದೆ.
ಇದನ್ನೂ ಓದಿ: ನಿರ್ದೇಶಕ ಸಿಂಪಲ್ ಸುನಿ ಮುಂದಿನ ಸಿನಿಮಾ ಯಾವುದು ಗೊತ್ತಾ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಸಿಹಿಸುದ್ದಿ ನೀಡಿದ್ದು ನಾಡಿನ ಕೆ.ಎಸ್.ಆರ್.ಟಿ.ಸಿ ಚಾಲಕರಿಗೆ ನೆಮ್ಮದಿ ತಂದಿದೆ. ಈ ಕುರಿತಾಗಿ ಕೆ.ಎಸ್.ಆರ್.ಟಿ.ಸಿ ಎಂಡಿ ಅಕ್ರಂ ಪಾಷಾ ಮಹತ್ವದ ಆದೇಶ ಹೊರಡಿಸಿದ್ದಾರೆ. ಚಿನ್ನದ ಪದಕ ಪಡೆದ ಚಾಲಕರಿಗೆ ಮಾಸಿಕ ಭತ್ಯೆ 500ರೂ-ನಿಂದ1000 ರೂಗೆ ಏರಿಕೆ ಮಾಡಲಾಗಿದೆ. ಈ ಮುಂಚೆ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ 5000 ರೂ. ನಗದು ಪುರಸ್ಕಾರ ನೀಡಲಾಗುತ್ತಿತ್ತು. ಇದೀಗ 10,000 ರೂ. ಗೆ ಹೆಚ್ಚಳ ಮಾಡಲಾಗಿದೆ. ಮಾಸಿಕ ಭತ್ಯೆ 250ರಿಂದ 500 ರೂಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ನಗದು ಪುರಸ್ಕಾರ 2026ರ ಜನವರಿ ೧ರಿಂದ ಜಾರಿಗಲಿದೆ. ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡಲಾಗುತ್ತಿದ್ದ 2500 ರೂ ನಗದು ಪುರಸ್ಕಾರ 5000 ರೂ.ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಕಾರಿಂಜ ಶ್ರೀ ವನಶಾಸ್ತಾರ ದೇವಸ್ಥಾನ-ಗೌರವ ಸಲಹೆಗಾರ ಶ್ರೀ ರಕ್ಷಿತ್ ಶಿವರಾಂ ಭೇಟಿ.
ಮೊಫ್ಯೂಸಿಲ್ ವಿಭಾಗಗಳಲ್ಲಿ 15 ವರ್ಷ ಹಾಗೂ ನಗರ ಸೇವೆಗಳಲ್ಲಿ 7 ವರ್ಷಗಳ ಕಾಲ ಅಪಘಾತ ರಹಿತ ಸೇವೆ ಸಲ್ಲಿಸಿದವರಿಗೆ ಚಿನ್ನದ ಪದಕ ನೀಡಲಾಗುತ್ತದೆ. ಬೆಳ್ಳಿ ಪದಕಕ್ಕಾಗಿ ಮೊಫ್ಯೂಸಿಲ್‌ನಲ್ಲಿ 5 ವರ್ಷ ಹಾಗೂ ನಗರ ಸೇವೆಗಳಲ್ಲಿ 3 ವರ್ಷಗಳ ಅಪಘಾತ ರಹಿತ ಸೇವೆ ಅಗತ್ಯ. ಹೆಚ್ಚುವರಿ ಮಾಸಿಕ ಭತ್ಯೆಯನ್ನು ಈಗಾಗಲೇ ಭತ್ಯೆ ಪಡೆಯುತ್ತಿರುವವರಿಗೂ ಜನವರಿ 2026 ರಿಂದ ನೀಡಲಾಗುತ್ತದೆ. ನಗರ ಸೇವೆಗಳಲ್ಲಿ ಸಂಗ್ರಹವಾದ ಆದಾಯದ 3% ಮತ್ತು ಮೊಫ್ಯೂಸಿಲ್ ಸೇವೆಗಳಲ್ಲಿ 2% ರಷ್ಟು ಮೊತ್ತವನ್ನು ಚಾಲಕ ಮತ್ತು ನಿರ್ವಾಹಕರಿಗೆ ನೀಡುವ ಯೋಜನೆ ಮುಂದುವರಿದಿದೆ.ಹೆಚ್ಚಿನ ವಿವರಗಳಿಗಾಗಿ ನೀವು KSRTC ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!? ಬ್ಯಾನ್ ಆಗುತ್ತಾ?
What is the good news for KSRTC bus drivers?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











