ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹನಿಟ್ರ್ಯಾಪ್ ಪ್ರಕರಣ: ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ ! ಏನಾಯ್ತು ನೋಡಿ

ಮಡಿಕೇರಿ: Tulu Times | ಮಡಿಕೇರಿಯಲ್ಲಿ ‘ಹನಿಟ್ರ್ಯಾಪ್’ ಗೆ ಬಲಿಯಾಗಿ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ನಡೆದಿದ್ದು, ಇದೀಗ  ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಘಟನೆಯ ಹಿನ್ನೆಲೆ ಏನು..?

ಮಹೇಶ್ ಎನ್ನುವ ಯುವಕ ಫೇಸ್ಬುಕ್ ಗೆಳತಿಗಾಗಿ ಮಡಿಕೇರಿಗೆ ಬಂದು ಹೋಂ ಸ್ಟೇನಲ್ಲಿ ಹನಿ ಟ್ರ್ಯಾಪ್ ಮಾಡಿರುವ ಯುವಕ ಉಳಿದುಕೊಂಡಿದ್ದ, ಹನಿ ಟ್ರ್ಯ್ಯಾಪಿಗೆ ಒಳಗಾಗಿ ಮಹೇಶ್ ಬೆತ್ತಲಾಗಿ ಹೋಂ ಸ್ಟೇ ನಿಂದ ಬೆತ್ತಲಾಗಿ ಹೊರಗಡೆ ಓಡಿ ಬಂದಿದ್ದನ್ನು ಕಂಡು ಜನ ಶಾಕ್ ಆಗಿದ್ದಾರೆ. ತಕ್ಷಣ ಈತನನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಡಿಕೇರಿ ಮೂಲದ ಮಹಿಳೆಯ ಜೊತೆಗೆ ಮಹೇಶ್ ಸ್ನೇಹ ಬೆಳೆಸಿದ್ದಾಳೆ, ಮಹೇಶ್‌ಗೆ  ಹಾಗೂ ಮಹಿಳೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದರು. ಮಹಿಳೆ ಈತನನ್ನು ಮಡಿಕೇರಿಗೆ ಕರೆದಿದ್ದಳು, ಹಾಗಾಗಿ ಈತ ಬಂದಿದ್ದ.  ಮಂಗಳದೇವಿ ನಗರದಲ್ಲಿ ಇರುವ ಹೋಂ ಸ್ಟೇಗೆ ಮಹೇಶ್ ಬಂದಿದ್ದಾನೆ. ಹೋಂಸ್ಟೇನಲ್ಲಿ ಮಹೇಶ್ಗೆ ಹನಿ ಟ್ರ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಸಹ ಕಿತ್ತುಕೊಂಡಿದ್ದಾರೆ. ಕೊನೆಗೆ ನಾನು ಅಲ್ಲಿಂದ ಓಡಿ ಬಂದಿದ್ದೇನೆ ಎಂದು ಮಹೇಶ್ ಹೇಳಿಕೊಂಡಿದ್ದಾನೆ.

ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿಯ ರಕ್ಷಣೆಗೆಂದು ಹೊರಟ ವ್ಯಕ್ತಿಯು ಶವವಾದ!

ಪ್ರತ್ಯೇಕ ಪ್ರಕರಣದಲ್ಲಿ, ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿಯ ರಕ್ಷಣೆಗೆಂದು ಹೊರಟ ವ್ಯಕ್ತಿಯು ಶವವಾಗಿದ್ದಾನೆ. ಗಿಳಿಯಂದ್ರೆ ಆತನಿಗೆ ಅಚ್ಚುಮೆಚ್ಚು ಅದೇ ಪಕ್ಷಿ ಮನೆಯಿಂದ ಹಾರಿ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಆ ಗಿಳಿಯನ್ನು ರಕ್ಷಿಸಲು ಹೋಗಿ ಯುವಕ ಪ್ರಾಣವನ್ನೇ ಬಿಟ್ಟಿದ್ದಾನೆ.

ಇದನ್ನೂ ಓದಿ: ರಿಷಬ್‌ ಶೆಟ್ಟಿ ಹರಕೆ ನೇಮೋತ್ಸವದ ಬಗ್ಗೆ ಆಡಳಿತ ಸಮಿತಿ ಹೇಳೋದೇನು?

ಗಿಳಿಗೆ ಎಲ್ಲಿ ಅಪಾಯ ಆಗದೋ ಅನ್ನೋ ಹೆದರಿಕೆ!

ಮಂಡ್ಯದ ನಾಗಂಮಗಲ ಮೂಲದ ಅರುಣ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಬೆಂಗಳೂರಿನ ಗಿರಿಧರ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ. ಆದರೆ ಈತ ತನ್ನ ನೆಚ್ಚಿನ ಗಿಳಿಯನ್ನು ರಕ್ಷಿಸಲು ಹೋಗಿ ಉಸಿರು ಚೆಲ್ಲಿದ್ದಾನೆ. ಆ ಗಿಳಿಯನ್ನು ಆಟ ಆಡಿಸಲೆಂದು ಹೊರಗೆ ಕರೆದುಕೊಂಡು ಹೋದಾಗ ಗಿಳಿಯು ಕರೆಂಟ್ ವಯರ್ ಮೇಲೆ ಹೋಗಿ ಕುಳಿತುಕೊಂಡಿತ್ತು. ಅದನ್ನು ಕೆಳಗೆ ಹಿಡಿದು ತರಬೇಕೆಂಬ ಆಸೆಯಲ್ಲಿ ಅರುಣ್ ಮೇಲೆ ಹೋಗಿದ್ದು ಆ ಸಂದರ್ಭ ಕರೆಂಟ್ ಶಾಕ್ ಹೊಡೆದಿದ್ದೆನ್ನಲಾಗಿದೆ. ಜೊತೆಗಿದ್ದ ವಾಚ್ ಮೆನ್ ಗಳೂ ಸೇರಿ ಮೇಲೆ ಹತ್ತೋದು ಬೇಡ ಅಂತ ಎಷ್ಟೇ ಹೇಳಿದ್ರು ಅರುಣ್ ಕೇಳಿರಲಿಲ್ಲ. ಗಿಳಿಗೆ ಎಲ್ಲಿ ಅಪಾಯ ಆಗ್ತದೋ ಅನ್ನೋ ಹೆದರಿಕೆಯಲ್ಲಿ ಕಾಂಪೌಂಡ್ ಮೇಲೆ ಹತ್ತಿದ್ದ

ಗಿಳಿಕೆ ವಿದ್ಯುತ್ ಶಾಕು ಹೊಡೆಯುತ್ತೆ ಅಂತ ಅರುಣ್ ಸ್ಟೀಲ್ ಪೈಪಿಗೆ ಕಡ್ಡಿಯನ್ನು ಹಾಕಿ ಗಿಳಿ ಓಡಿಸಲು ಕಾಂಪೌಂಡ್ ಮೇಲೆ ನಿಂತಿದ್ದು ಆ ಗಿಳಿಯನ್ನು ಓಡಿಸಲು ಪ್ರಯತ್ನ ಪಟ್ಟಿರುವಾಗ ಆ ಅಪಾರ್ಟೆಂಟ್ ಒಳಗೆ ಹೋಗಿದ್ದ 66 ಕೆವಿ ವಿದ್ಯುತ್ ವಯರ್ ತಗುಲಿ ಕೆಳಗೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯೋವಷ್ಟರಲ್ಲಿ ಮೃತಪಟ್ಟಿದ್ದಾನೆ. ಸಾವಿನ ಸುದ್ದಿ ಕುಟುಂಬದವರಿಗೆ ಆಘಾತವನ್ನು ತಂದಿದ್ದು, ಅಪಾರ್ಟೆಂಟ್ನಲ್ಲಿ ಕುಟುಂಬದವರ ರೋಧನೆ ಹೇಳತ್ತೀರದಾಗಿತ್ತು. ಇತ್ತ ನೆಚ್ಚಿನ ತನ್ನ ಮಾಲೀಕ ತನಗೋಸ್ಕರ ಪ್ರಾಣವನ್ನ ಬಿಟ್ಟು ಗಿಳಿಯು ಆ ವಯರ್ ಮೇಲೆ ಅದಷ್ಟೋ ಹೊತ್ತು ಇನ್ನೊಂದೆಡೆ ಕೆಇಬಿ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇಷ್ಟೊಂದು ಸಾಮರ್ಥ್ಯದ ವಿದ್ಯುತ್ ವಯರ್ ಅಪಾರ್ಟೆಂಟ್ ಒಳಗೆ ಹೋಗಿರುವುದು ಹಾಗೂ ಅದು ಹೇಗೆ ಹೋಯಿತು ಎಂಬ ಬಗ್ಗೆ ಪ್ರಶ್ನೆಯನ್ನು ಮಾಡಲಾಗುತ್ತಿದ್ದು ಯಾವುದಕ್ಕೂ ಸಹ ಈಗ ಉತ್ತರ ಇಲ್ಲ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದ್ದು ತನಿಖೆ ಮುಂದುವರಿದೆ.

Honeytrap case: Young man found walking naked in the middle of the road!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page