ಬೆಂಗಳೂರು – ತುಳು ಟೈಮ್ಸ್: ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ಮುಕ್ತಾಯ ಕಂಡಿದೆ. ಸದನದಲ್ಲಿ ಶಾಂತವಾಗಿದ್ದ ಡಿಕೆ ಶಿವಕುಮಾರ್ ಮತ್ತೆ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕೂಗು ರಾಜ್ಯದಲ್ಲಿ ಕೇಳಿಬಂದಿತ್ತು. ಇದಕ್ಕೆ ತಾರ್ಕಿಕ ಅಂತ್ಯವಾಗಿದೆ ಅನ್ನೋವಾಗ್ಲೇ ಡಿಕೆಶಿ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಗೊಂದಲದ ನಡುವೆ, ಶಾಸಕರ ಬೆಂಬಲದ ಬಲಪ್ರದರ್ಶನ ನಡೆಯುತ್ತಿದೆ ಎಂಬ ಆರೋಪಗಳನ್ನು ಡಿಸಿಎಂ ಶಿವಕುಮಾರ್ ತಳ್ಳಿಹಾಕಿದ್ದಾರೆ. ನಾನು ಯಾವುದೇ ಶಕ್ತಿ ಪ್ರದರ್ಶನ ಮಾಡ್ತಿಲ್ಲ. ನನಗೆ ಅದರ ಅಗತ್ಯನೂ ಇಲ್ಲ. ನನ್ನ ಹಿಂದೆ ಯಾರೂ ಬರಬೇಡಿ, ನನ್ನ ಪರವಾಗಿ ಯಾರೂ ಮಾತನಾಡಬೇಡಿ ಎಂದು ಹೇಳುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯ ಕುರಿತು ಯತೀಂದ್ರ ಅವರ ಪುನರಾವರ್ತಿತ ಹೇಳಿಕೆಗಳಿಗೆ ಉತ್ತರಿಸಿದ ಶಿವಕುಮಾರ್, ನನಗೆ ಆ ಬಗ್ಗೆ ಗೊತ್ತಿಲ್ಲ, ಮುಖ್ಯಮಂತ್ರಿಗಳೇ ಅದಕ್ಕೆ ಉತ್ತರ ಕೊಡುತ್ತಾರೆ ಎಂದಿದ್ದಾರೆ.
ಇನ್ನು ದೆಹಲಿ ಹೋಗ್ತಿರೋದು ಪ್ರತಿಭಟನೆಯ ಸಲುವಾಗಿ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಮತ ವಂಚನೆಯ ವಿರುದ್ಧದ ನಾಳಿನ ಪ್ರತಿಭಟನೆಯಲ್ಲಿ ಭಾಗವಹಿಸಲು ಇಂದು ದೆಹಲಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ.
Shivakumar said he will travel to Delhi on Saturday to join the nationwide protest against alleged large-scale voter fraud during the Lok Sabha elections. Tulu Times
ಇದನ್ನೂ ಓದಿ: ನಾಲ್ಕು ಚೀಲ ಕಸ ಎಸೆದ ವ್ಯಕ್ತಿಗಳು ಐದು ಸಾವಿರ ಕಳೆದುಕೊಂಡರು !
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











