ಧರ್ಮಸ್ಥಳ : Tulu Times | ಧರ್ಮಸ್ಥಳ ವಿರುದ್ಧ ಷಡ್ಯಂತ್ರದಲ್ಲಿ 6 ಆರೋಪಿಗಳು ಶಾಮೀಲಾಗಿದ್ದಾರೆ ಎಂದು ಎಸ್‌ಐಟಿ ಪ್ರಾಥಮಿಕ ವರದಿಯಲ್ಲಿ ದೃಢವಾಗಿದೆ.
ಬೆಳ್ತಂಗಡಿಯ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದ್ದು, 3,923 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಒಟ್ಟು 6 ಜನರ ವಿರುದ್ಧ ಷಡ್ಯಂತ್ರ ಆರೋಪ ಸಾಬೀತಾಗಿದೆ. ಇಂದು ಸದನದಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರಸ್ತಾಪ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿತೇಂದ್ರ ಕುಮಾರ್ ದಯಾಮ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದರು. ಚಿನ್ನಯ, ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಟಿ.ಜಯಂತ, ವಿಠಲ್ ಗೌಡ ಹಾಗೂ ಸುಜಾತ ಭಟ್ ವಿರುದ್ಧ ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಕೆ ಆಗಿತ್ತು. ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿರುವ ಪ್ರಕಾರ ಪ್ರಕರಣದ ಕುರಿತು ಏನೆಲ್ಲ ಆಯ್ತು ಅನ್ನುವುದು, ಮೂಳೆಗಳು ಹಾಗೂ ಇತರೆ ಭಾಗಗಳು ಸಿಕ್ಕಿದ್ದವು.
ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸರಿಂದ ಮಾರ್ಗಸೂಚಿಗಳೇನು..?
ಎಸ್ಐ ಟಿ ಪ್ರಾಥಮಿಕ ವರದಿಯಲ್ಲಿ, ಚಿನ್ನಯ್ಯ ತಲೆ ಬುರುಡೆಯನ್ನು ತಂದು ಕೊಟ್ಟಿದ್ದು ಯಾರು ? ಷಡ್ಯಂತರ ಮಾಡಲು ಪ್ರೇರಣೆ ಕೊಟ್ಟಿರುವುದು ಯಾರು ? ತಲೆ ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತರ ನಡೆದಿದೆ? ಎಲ್ಲಾ ಷಡ್ಯಂತ್ರಕ್ಕೆ ಹಣವನ್ನು ಫಡಿಂಗ್ ಯಾರು ಎಲ್ಲಿಂದ ಮಾಡಿದರು? ಎನ್ನುವುದು 3923 ಪುಟಗಳ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಣದ ಆಮಿಷಕ್ಕೆ ಚಿನ್ನಯ್ಯ ಸುಳ್ಳು ಹೇಳಿ, ಹಣ ಪಡೆದು ಬುರುಡೆ ಕಥೆ ಕಟ್ಟಿ, ಚಿನ್ನಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಸಹ ಮಾಡಿದ್ದರು ಎಂದು SIT ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ. ಧರ್ಮಸ್ಥಳದ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಚೆನ್ನಯ್ಯ, ಮಹೇಶ ತಿಮ್ಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠ್ಠಲ ಗೌಡ ಟಿ ಜಯಂತ, ಹಾಗೂ ಸುಜಾತ ಭಟ್ ಅಪರಾಧ ಕೃತ್ಯದಲ್ಲಿ ಆರು ಆರೋಪಿಗಳು ಶಾಮೀಲಾಗಿರುವುದು ದೃಢಪಟ್ಟಿದೆ.ಇನ್ನು ಈ ಆರೋಪಗಳ ವಿರುದ್ಧ ಧರ್ಮಸ್ಥಳದ ಭಕ್ತರು ಮತ್ತು ವಿವಿಧ ಸಂಘಟನೆಗಳು ವೀರೇಂದ್ರ ಹೆಗ್ಗಡೆ ಮತ್ತು ದೇವಸ್ಥಾನದ ಆಡಳಿತ ಮಂಡಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ಮತ್ತು ಸಭೆಗಳನ್ನು ನಡೆಸಿದರು.
6 accused involved in conspiracy against Dharmasthala- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











