ಉಡುಪಿ – ತುಳು ಟೈಮ್ಸ್: ಬಾಂಗ್ಲಾದೇಶದ 10 ಮಂದಿ ಅಕ್ರಮ ವಲಸಿಗರಿಗೆ ಸಿಜೆಎಂ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ ತಲಾ 10,000 ದಂಡ ವಿಧಿಸಿ ತೀರ್ಪು ನೀಡಿದೆ.
ಹಕೀಮ್ ಆಲಿ, ಇಸ್ಮಾಯಿಲ್ ಎಸ್.ಕೆ @ ಮಹಮದ್ ಇಸ್ಮಾಯಿಲ್ ಹಾಕ್, ಸುಜೋನ್ ಎಸ್.ಕೆ @ ಫಾರೂಕ್, ಕರೀಮ್ ಎಸ್.ಕೆ @ ಅಬ್ದುಲ್ ಕರೀಮ್, ರಾಜಿಕುಲ್ ಎಸ್.ಕೆ. ಮೊಹಮ್ಮದ್ ಸೋಜಿಬ್ @ ಎಮ್‌ಡಿ ಅಲ್ಲಾಂ ಆಲಿ, ಸಲಾಂ ಎಸ್.ಕೆ @ ಎಮ್‌ಡಿ ಅಬ್ದುಲ್ ಅಜೀಜ್, ಮೊಹಮ್ಮದ್ ಇಮಾಮ್ ಶೇಖ್, ಮೊಹಮ್ಮದ್ ಜಹಾಂಗಿರ್ ಆಲಂ ಮತ್ತು ರಿಮೂಲ್ @ ಅಬ್ದುಲ್ ರೆಹಮಾನ್ ಶಿಕ್ಷೆಗೊಳಗಾದ ಅಕ್ರಮ ಬಾಂಗ್ಲಾ ವಲಸೆಗಾರರು.
2024ರ ಅಕ್ಟೋಬರ್ 11 ರಂದು ಮಲ್ಪೆ ಪೊಲೀಸರು ರೌಂಡ್ಸ್ ನಲ್ಲಿದ್ದಾಗ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಅನುಮಾನಾಸ್ಪದವಾಗಿ ಲಗೇಜ್ ಸಮೇತ ತಿರುಗಾಡುತ್ತಿದ್ದರು. ಕೂಡಲೇ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಸುಳ್ಳು ಮಾಹಿತಿ ನೀಡಿ ವಂಚಿಸಿದ್ದು ತಿಳಿದುಬಂದಿತ್ತು.
ಇದನ್ನೂ ಓದಿ: ಪುತ್ತೂರು: ಗ್ರಾಂ. ಪಂ ಆಸ್ತಿ ಮಸೀದಿ ದಫನ ಭೂಮಿಗೆ ನೀಡಿದ ಆರೋಪ – ಗ್ರಾಮಸ್ಥರಿಂದ ಪ್ರತಿಭಟನೆ
10 ಮಂದಿ ಕೂಡ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪೊಲೀಸರು ಎಲ್ಲರ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಕುರಿತು ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ತಲಾ 2 ವರ್ಷಗಳ ಜೈಲು ಶಿಕ್ಷೆ, ತಲಾ 10,000 ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
In a major crackdown on illegal immigration, the Udupi principal senior civil judge and CJM court has sentenced 10 Bangladeshi nationals to two years’ imprisonment, along with a fine of Rs 10,000 each. – Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











