ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಬಾಲ ನಟರನ್ನು ಕಡೆಗಣಿಸಲಾಯಿತೇ ?

ಕೇರಳ : Tulu Times | ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಕ್ಕಳ ಕೆಟಗರಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಕ್ಕೆ ನಟ ಪ್ರಕಾಶ್ ರಾಜ್ ವಿರುದ್ಧ ಬಾಲ ನಟಿ ದೇವ ನಂದಾ ಅವರು ಟೀಕಿಸಿದ್ದಾರೆ. ಈ ಬಾರಿ ಮಕ್ಕಳ ಚಲನಚಿತ್ರ ಮತ್ತು ಬಾಲ ನಟರ ವಿಭಾಗದಲ್ಲಿ ಯಾರೂ ಪ್ರಶಸ್ತಿ ಗೆದ್ದಿಲ್ಲ ಅಂತ ನಟ ಪ್ರಕಾಶ್ ರಾಜ್ ಸೋಮವಾರ ಘೋಷಿಸಿದ್ದರು.

ಒಂದೇ ಒಂದು ಚಿತ್ರ ಮಕ್ಕಳ ಚಲನಚಿತ್ರ ಎಂಬಂತೆ ಪ್ರಯತ್ನ ಕಂಡು ಬಂದಿಲ್ಲ ;

ಆರು ಚಲನಚಿತ್ರಗಳು ಅತ್ಯುತ್ತಮ ಮಕ್ಕಳ ಚಲನಚಿತ್ರ ವಿಭಾಗಕ್ಕೆ ಸಲ್ಲಿಕೆಯಾಗಿದ್ದರೂ, ಅವುಗಳಲ್ಲಿ ಯಾವುದೂ ಪ್ರಶಸ್ತಿ ಪಡೆಯಲು ಬೇಕಾದಂತಹ ಮಾನದಂಡಗಳನ್ನು ಪೂರೈಸಲಿಲ್ಲ ಎಂದು ತೀರ್ಪುಗಾರರು ನಿರ್ಧರಿಸಿದ್ದಾರೆ ಎಂದು ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಬಾಲ ನಟರಿಗೂ ಸಹ ಇದು ಅನ್ವಯಿಸುತ್ತದೆ ಎಂದು ಅವರು ಹೇಳಿದ್ದರು. ನಮಗೆ ಒಂದೇ ಒಂದು ಚಿತ್ರ ಮಕ್ಕಳ ಚಲನಚಿತ್ರ ಎಂಬಂತೆ ಪ್ರಯತ್ನ ಕಂಡು ಬಂದಿಲ್ಲ. ನಿರ್ದೇಶಕರು ಮತ್ತು ಬರಹಗಾರರು ಹಿರಿಯರು ಮತ್ತು ಯುವಕರು ಮಾತ್ರವಲ್ಲ, ಮಕ್ಕಳು ಸಮಾಜದ ಭಾಗ ಎಂಬುದನ್ನು ಅರಿತುಕೊಳ್ಳಬೇಕು, ಅಂತ ಅವರು ಹೇಳಿದರು.

ಇಲ್ಲಿ ಮಕ್ಕಳ ಹಕ್ಕುಗಳನ್ನು ಕಡೆಗಣಿಸಲಾಗಿದೆ ;

ಈ ಸಲುವಾಗಿ ಇಬ್ಬರು ಮಕ್ಕಳಿಗೆ ಪ್ರಶಸ್ತಿಗಳನ್ನು ನಿರಾಕರಿಸುವ ಮೂಲಕ ನೀವು ಮಕ್ಕಳ ಚಿತ್ರಗಳನ್ನು ನಿರ್ಮಿಸಿ ಅಂತ ಹೇಳಲು ಪ್ರಯತ್ನಿಸಬೇಡಿ. ನೀವು ಇಬ್ಬರು ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿದ್ದರೆ, ಅದು ಇತರ ಅನೇಕರಿಗೆ ಸ್ಫೂರ್ತಿಯಾಗುತ್ತಿತ್ತು, ಅಂತ ದೇವ ನಂದಾ ಅವರು ತಮ್ಮ ಇನ್ಸ್ ಸ್ಟಾಗ್ರಾಮ್ ಒಏಜ್ ನಲ್ಕಿ ಬರೆದಿದ್ದಾರೆ. ಮಕ್ಕಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕು ಮತ್ತು ಅವರು ಸಮಾಜದ ಭಾಗವಾಗಿದ್ದಾರೆ, ಆದರೆ ಇಲ್ಲಿ ಮಕ್ಕಳ ಹಕ್ಕುಗಳನ್ನು ಕಡೆಗಣಿಸಲಾಗಿದೆ ಅಂತ ತೀರ್ಪುಗಾರರ ಮಂಡಳಿಯ ಅಧ್ಯಕ್ಷರ ಬಗ್ಗೆ ನಾನು ನನ್ನ ಬಲವಾದ ಅಸಮಾಧಾನವನ್ನು ವ್ಯಕ್ತಪಡಿಸುತ್ತೇನೆ. ಸುಧಾರಣೆಗಳನ್ನು ತರಬೇಕಾದುದ್ದು ಹಕ್ಕುಗಳನ್ನು ನಿರಾಕರಿಸುವ ಮೂಲಕ ಅಲ್ಲ, ಸುಧಾರಣೆಗಳ ಜೊತೆಗೆ ಹಕ್ಕುಗಳನ್ನು ಸಹ ರಕ್ಷಿಸಬೇಕು, ಅಂತ ಅವರು ಹೇಳಿದ್ದಾರೆ.

Were child actors overlooked at the Kerala State Film Awards? – ತುಳು ಟೈಮ್ಸ್

ಇದನ್ನೂ ಓದಿ :ಒಬ್ಬ ವಿದ್ಯಾರ್ಥಿಯಿದ್ದರೂ ಸರ್ಕಾರಿ ಶಾಲೆ ನಡೆಯುತ್ತದೆ : ಸಚಿವ ಮಧು ಬಂಗಾರಪ್ಪ

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/dKrXuyqaIac?si=-7d-zODtzCF_BDjp

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page