Raju thalikote:ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ನಿಧನರಾಗಿದ್ದಾರೆ.ಹೃದಯಾಘಾತದಿಂದ ರಾಜು ತಾಳಿಕೋಟೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಿಜಯಪುರ ಜಿಲ್ಲೆಯ ತಾಳಿಕೋಟೆ ಇವರ ಊರು.
ರಂಗಭೂಮಿ ಕಲಾವಿದರು ಮಾತ್ರವಲ್ಲದೆ ನಾಟಕ ಕಂಪನಿಯನ್ನು ನಡೆಸಿಕೊಂಡು ಬರ್ತಿದ್ರು.ವಿಶಿಷ್ಟ ಶೈಲಿಯ ಅಭಿನಯಕ್ಕೆ ಹೆಸರಾಗಿದ್ರು.ಬಿಗ್ ಬಾಸ್ ಶೋ ನಲ್ಲಿ ಕೂಡ ರಾಜು ತಾಳಿಕೋಟೆ ಕಾಣಿಸ್ಕೊಂಡಿದ್ರು,ಹಲವಾರು ಸಿನಿಮಾಗಳಲ್ಲಿ ನಟಿಸಿ ಬೇಶ್ ಅನಿಸ್ಕೊಂಡಿದ್ರು.ವಿಶಿಷ್ಟ ಶೈಲಿ ಹಾಸ್ಯಕ್ಕೆ ರಾಜು ತಾಳಿಕೋಟೆ ಹೆಸರಾಗಿದ್ರು.
ರಾಜು ತಾಳಿಕೋಟೆ ಪುಟ್ಟ ಹಳ್ಳಿಯಿಂದ ಬಂದವ್ರು,ಬಿಜಾಪುರ ಜಿಲ್ಲೆಯಲ್ಲಿರುವ ಚಿಕ್ಕ ಸಿಂದಗಿಯ ನಿವಾಸಿ ರಾಜು ತಾಳಿಕೋಟೆ.ನಾಲ್ಕನೇ ತರಗತಿಯವರೆಗಷ್ಟೇ ಇವ್ರು ವಿದ್ಯಾಭ್ಯಾಸವನ್ನು ಮಾಡಿದ್ರು.ನಂತರದಲ್ಲಿ ಸಣ್ಣಪುಟ್ಟ ನಾಟಕಗಳನ್ನು ಮಾಡೋದಿಕ್ಕೆ ಶುರುಮಾಡಿದ್ರು ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಸಿನಿಮಾದಲ್ಲಿ ಮೊದಲು ರಾಜು ತಾಳಿಕೋಟೆ ಅಭಿನಯಿಸಿದ್ರು.ಆ ನಂತ್ರ ಪಂಚರಂಗಿ ಸಿನಿಮಾದಲ್ಲಿ ಅಭಿನಯಿಸಿದ್ರು ಮೈಲಾರಿ,ಪರಮಾತ್ಮ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ರು.ಬಿಗ್ ಬಾಸ್ ಸ್ಪರ್ಧಿಯಾಗಿಯೂ ಕನ್ನಡಿಗರಿಗೆ ಹತ್ತಿರವಾಗಿದ್ರು,ವಿಶಿಷ್ಟ ಬಗೆಯ ಹಾಸ್ಯಕ್ಕೆ ರಾಜು ತಾಳಿಕೋಟೆ ಫೇಮಸ್ಸಾಗಿದ್ರು.
ಇದನ್ನೂ ಓದಿ:Puttur: ಇಬ್ಬರು ಸಹೋದ್ಯೋಗಿ ಯುವತಿಯರು ನಾಪತ್ತೆ – ದೂರು ದಾಖಲು
……………………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











