ಕೋಲಾರ : Tulu Times | ರಾಜ್ಯದ ರೈತರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ‘ಬೆಲೆ ಇದ್ದರೆ ಬೆಳೆ ಇಲ್ಲ’ ಎನ್ನುವಂತಾ ಪರಿಸ್ಥಿತಿಗೆ ಬಂದಿದ್ದಾರೆ. ಈ ಹಂತದಲ್ಲಿ ರೈತರಿಗೆ ವ್ಯಾಪಾರಿಗಳು ಕೂಡಾ ಮೋಸ ಮಾಡ್ತಾ ಇದ್ದಾರೆ. ಗೊಬ್ಬರ ಖರೀದಿಗೆ ಅಂತ ಪೇಟೆಗೆ ಹೋದರೆ ವ್ಯಾಪಾರಿಗಳು ಕೂಡಾ ರೈತರನ್ನು ಗೋಳಾಡಿಸ್ತಾ ಇದ್ದಾರೆ. ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಹೆಚ್ಚಿನ ದರವನ್ನು ರೈತರಿಂದ ಕಸಿದುಕೊಳ್ಳುವ ಪ್ರಯತ್ನವಾಗುತ್ತಿದೆ.
ಕೋಲಾರದ ಶಂಕರನಾರಾಯಣ ಶೆಟ್ಟಿ ಮತ್ತು ಸನ್ಸ್ ಗೊಬ್ಬರದ ಅಂಗಡಿ ಸೇರಿದಂತೆ ಹಲವಾರು ಕಡೆ ವ್ಯಾಪಾರಿಗಳು ಕಂಗಾಲಾದ ರೈತರಿಗೆ ಮತ್ತೂ ಮೋಸ ಮಾಡ್ತಾ, ನಿಗದಿ ಮಾಡಿದ ದರಕ್ಕಿಂತ ಹೆಚ್ಚಾಗಿ ಹಣ ಪಡೆದುಕೊಳ್ಳುವ ಕೆಲಸ ಆಗ್ತಾ ಇದೆ. ಕಾಂಪ್ಲಾಕ್ಸ್ ಸೇರಿ 45 ಕೆ.ಜಿ ಯೂರಿಯಾ ಮೂಟೆಗೆ 500 ರೂಪಾಯಿ ನಿಗದಿ. ಈ ಒಂದು ಅಂಗಡಿಯಲ್ಲಿ 266 ರೂ. ಬದಲಿಗೆ 500 ರೂಪಾಯಿಗೆ ಯೂರಿಯಾ ಮಾರಾಟವಾಗ್ತಾ ಇದೆ. ಅಲ್ಲದೇ, ಗೊಬ್ಬರ ಜೊತೆ ಇನ್ನೂ ಇತರ ಸಾಮಾಗ್ರಿಗಳನ್ನೂ ಕಡ್ಡಾಯವಾಗಿ ಖರೀದಿ ಮಾಡಬೇಕಾಗಿ ರೈತರ ಮೇಲೆ ಒತ್ತಡ, ಇಲ್ಲದಿದ್ದರೆ ರಸಗೊಬ್ಬರ ನೀಡಲ್ಲ ಎನ್ನುವ ಅಹವಾಲು. ಇದರಿಂದ ರೈತರು ಒದ್ದಾಡುವಂತ ಪರಿಸ್ಥಿತಿಯಾಗಿದೆ.
ಕೋಲಾರ ನಿಜವಾಗಿ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿ ಅಂತರ್ಜಲ ಮಟ್ಟ ಕೂಡಾ ಪಾತಾಳಕ್ಕೆ ಹೋಗಿದ್ದು, ರೈತ ಛಲ ಬಿಡದೆ ಬೆಳೆಯನ್ನು ಬೆಳೆಯುತ್ತಾ ಇದ್ದಾರೆ. ಇಡೀ ದೇಶಕ್ಕೇ ಮಾದರಿಯಾಗುವಂತೆ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟ ಇದ್ದರೂ ಈ ರೈತರ ಗೋಳು ಕೇಳೋದಿಕ್ಕೆ ಯಾರೂ ಇಲ್ವಾ ಎನ್ನುವ ಗೊಂದಲ ಶುರುವಾಗಿದೆ. ಕೆಲವೊಮ್ಮೆ ಬಂದ ಬೆಳೆಯನ್ನು ಕೊಡುವಾಗ ಸಿಗದ ದರ ಹಾಗೂ ಬೆಳೆಗೆ ಹೆಚ್ಚಾದ ದರ ಇರುವಾಗ ಆ ಬೆಳೆಯೇ ನಾಶವಾಗಿರುವಂತ ಪರಿಸ್ಥಿತಿಯಲ್ಲಿ ರೈತರು ಜೀವನ ಸಾಗಿಸ್ತಾ ಇದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ರೈತರು ನಿಗದಿ ಪಡಿಸಿದ ಬೆಲೆಗೇ ರಸಗೊಬ್ಬರಗಳನ್ನು ನೀಡ್ತಾ ಇದ್ದೇವೆ ಅಂತ ಹೇಳಿದ್ರೂ ಕೂಡ ವ್ಯಾಪಾರಸ್ಥರು ಮಾತ್ರ ರೈತರೊಂದಿಗೆ ಅಪ್ರಮಾಣಿಕತೆಯಿಂದ ವ್ಯವಹರಿಸ್ತಾ ಇದ್ದಾರೆ. ಇದು ಕೇವಲ ಕೋಲಾರದ ಕತೆಯಲ್ಲ. ನಮ್ಮ ಸುತ್ತಮುತ್ತಲೂ ಕೆಲವೊಂದು ಅಂಗಡಿಗಳಲ್ಲಿ ಸಾಮಾನ್ಯ ಜನರಿಗೆ ಇದೇ ಪರಿಸ್ಥಿತಿ ಎದುರಾಗುತ್ತವೆ. If there is a price, there is no crop: Traders are behind the fraud that farmers face – ತುಳು ಟೈಮ್ಸ್
ಇದನ್ನೂ ಓದಿ :ವಾಹನ ಚಾಲಕರಿಗೂ ಸ್ಮಾರ್ಟ್ ಕಾರ್ಡ್ : ಸಾರಿಗೆ ಇಲಾಖೆಯ ಹೊಸ ಫ್ಲಾನ್
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/3hCZb-Tbw3c?si=zWE8CjjLoF3gtJHE











