ದತ್ತಾತ್ರೇಯ ಜಯಂತಿ : Tulu Times | ದತ್ತಾತ್ರೇಯರು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ತ್ರಿಮೂರ್ತಿಗಳ ಸಂಯುಕ್ತ ಅವತಾರ ಎಂದು ನಂಬಲಾಗುತ್ತದೆ. ಜ್ಞಾನ, ಯೋಗ, ತಪಸ್ಸು ಮತ್ತು ವೈರಾಗ್ಯಕ್ಕೆ ಪ್ರತೀಕರಿಸಿದ ದತ್ತಾತ್ರೇಯರು ದತ್ತ ಪರಂಪರೆಯ ಮೂಲ ಗುರು ಎಂದೂ ಪೂಜಿಸಲ್ಪಡುತ್ತಾರೆ. ದತ್ತಾತ್ರೇಯರು ಅತ್ರಿ ಋಷಿ ಮತ್ತು ಅನಸೂಯೆ ತಾಯಿಯವರ ಐಕ್ಯತೆಯಿಂದ ಜನಿಸಿದರು. ಅನಸೂಯೆ ಅವರ ಪತಿವ್ರತೆಯ ತೇಜಸ್ಸನ್ನು ಪರೀಕ್ಷಿಸಲು ತ್ರಿಮೂರ್ತಿಗಳು ಶಿಶು ರೂಪದಲ್ಲಿ ಬಂದಾಗ, ಅವರು ಎಲ್ಲರನ್ನೂ ಬಾಲಕರನ್ನಾಗಿ ಪರಿವರ್ತಿಸಿದ್ದಾರೆ ಎನ್ನುವ ಪ್ರಸಿದ್ಧ ಕಥೆಯಿದೆ. ಆ ಬಳಿಕ ತ್ರಿಮೂರ್ತಿಗಳು ಸಂತೋಷಗೊಂಡು ತ್ರಿಮೂರ್ತಿಗಳ ತೇಜಸ್ಸೇ ದತ್ತಾತ್ರೇಯರಾಗಿ ಅವತಾರ ಪಡೆದರೆಂಬ ಹಿನ್ನಲೆಯಿದೆ.
ಪ್ರತಿ ವರ್ಷ ದಿನಾಂಕ ಬದಲಾಗುತ್ತದಾದರೂ ಸಾಮಾನ್ಯವಾಗಿ ಡಿಸೆಂಬರ್–ಜನವರಿ ತಿಂಗಳೊಳಗೆ ದತ್ತಾತ್ರೇಯ ಜಯಂತಿ ಬರುತ್ತದೆ. ಆದರೆ, ಈ ವರ್ಷ ಡಿಸೆಂಬರ್ .04 (ಈ ದಿನ) ರಂದು ಆಚರಿಸಲಾಗುತ್ತಿದೆ.
ವೈದಿಕ ಕ್ಯಾಲೆಂಡರ್ ಪ್ರಕಾರ, ಮಾರ್ಗಶಿರ ಮಾಸದ ಹುಣ್ಣಿಮೆ ಡಿಸೆಂಬರ್ 4, ಬೆಳಗ್ಗೆ 8:37 ಪ್ರಾರಂಭವಾಗುತ್ತದೆ. ಡಿಸೆಂಬರ್ 5 ರಂದು ಮುಂಜಾನೆ 4:43ಕ್ಕೆ ಕೊನೆಗೊಳ್ಳುತ್ತದೆ. ಅದಕ್ಕಾಗಿಯೇ ಡಿಸೆಂಬರ್ 4 ಅನ್ನು ದತ್ತಾತ್ರೇಯರ ಜನ್ಮದಿನವೆಂದು ಆಚರಿಸಲಾಗುತ್ತದೆ. ಗೋಧೂಳಿ ಮುಹೂರ್ತ ಸಂಜೆ 5:58 ರಿಂದ ಸಂಜೆ 6:24 ರವರೆಗೆ ಮತ್ತು ಅಮೃತ ಕಾಲ ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 1:58 ರವರೆಗೆ ಇರಲಿದೆ.
ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಯಾವುದೇ ತಪ್ಪುಗಳಿಗೆ ಕ್ಷಮೆ ;
ದತ್ತಾತ್ರೇಯರ ಜನ್ಮದಿನದಂದು, ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ನಂತರ, ಉಪವಾಸ ಮಾಡಿ ಪೂಜೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಬೇಕು. ಸಂಜೆ, ಪೂಜಾ ಕೊಠಡಿಯಲ್ಲಿ ಕೆಂಪು ಬಟ್ಟೆಯನ್ನು ಹರಡಿ ಮತ್ತು ದತ್ತಾತ್ರೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ನಂತರ ಗಂಗಾ ನೀರಿನಿಂದ ವಿಗ್ರಹವನ್ನು ಸ್ನಾನ ಮಾಡಬೇಕು. ಮೊದಲು, ಬಿಳಿ ಶ್ರೀಗಂಧ ಮತ್ತು ಕುಂಕುಮದಿಂದ ದತ್ತಾತ್ರೇಯನಿಗೆ ಕೇಸರಿಯನ್ನು ಹಚ್ಚಿ. ನಂತರ ಹೂವುಗಳು ಮತ್ತು ಹೂವಿನ ಹಾರವನ್ನು ಅರ್ಪಿಸಿ. ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ. ಅಲ್ಲದೆ, ಈ ದಿನದಂದು ಉಪವಾಸ ಆಚರಿಸುವ ಭಕ್ತರು ಸ್ವಾಮಿಗೆ ತುಳಸಿ ಎಲೆಗಳು ಮತ್ತು ಪಂಚಾಮೃತಗಳನ್ನು ಅರ್ಪಿಸಬೇಕು. ಇದರ ನಂತರ, ಅಂತಿಮವಾಗಿ ಆರತಿ ಮಾಡಿ. ಪೂಜೆಯ ಸಮಯದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ಯಾವುದೇ ತಪ್ಪುಗಳಿಗೆ ಕ್ಷಮೆಯಾಚಿಸಬೇಕು. What is the speciality and background of Dattatreya Jayanti? – ತುಳು ಟೈಮ್ಸ್
ಇದನ್ನೂ ಓದಿ :ನಿಮ್ಮ ಬಗ್ಗೆ ನೆಗೆಟಿವ್ ಮಾತುಗಳನ್ನು ಕೇಳಿ ಬೇಸರ ಆಗೋಗಿದ್ಯಾ? ಟ್ರಿಕ್ಸ್ ಲೈಫ್ ಚೇಂಜ್ ಮಾಡುತ್ತೆ!
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/OSYN1bbCWKE?si=N8HV-1yysemC7NmS











