ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಿಸೆಂಬರ್ ತಿಂಗಳಲ್ಲಿ ಬಿಎಸ್ ಎನ್ ಎಲ್ ಗ್ರಾಹಕರಿಗೆ ಹೊಸ ಕೊಡುಗೆ…!

ಬಿಎಸ್ ಎನ್ ಎಲ್ : Tulu Times | ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ದೇಶದ ಅತ್ಯಂತ ಹಳೆಯ ಹಾಗೂ ವಿಶ್ವಾಸಾರ್ಹ ಸರ್ಕಾರಿ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾಗಿದೆ. 2000ರಲ್ಲಿ ಸ್ಥಾಪಿತವಾಗಿರುವ ಬಿಎಸ್ ಎನ್ ಎಲ್ ಭಾರತದಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ಸಮಾನವಾಗಿ ದೂರವಾಣಿ ಹಾಗೂ ಇಂಟರ್ನೆಟ್ ಸೇವೆಗಳು ತಲುಪಿಸುವ ಗುರಿಯನ್ನು ಹೊಂದಿದೆ.

ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ನೆಟ್ವರ್ಕ್ ವಿಸ್ತರಣೆ ಮಾಡುವಲ್ಲಿ ಬಿಎಸ್ ಎನ್ ಎಲ್ ಮಹತ್ವದ ಪಾತ್ರವಹಿಸಿದೆ. ಕಳೆದ ಕೆಲ ವರ್ಷಗಳಲ್ಲಿ ಬಿಎಸ್ ಎನ್ ಎಲ್ ತನ್ನ ಮೂಲಸೌಕರ್ಯವನ್ನು ಆಧುನೀಕರಿಸುತ್ತಿದ್ದು, 4G ಹಾಗೂ ಮುಂದಿನ ಹಂತದ 5G ಸೇವೆಗಳ ಅನುಷ್ಠಾನಕ್ಕೂ ಸಜ್ಜಾಗಿದೆ. ಡಿಜಿಟಲ್ ಇಂಡಿಯಾ ದೃಷ್ಟಿಯಡಿ ಫೈಬರ್ ನೆಟ್ವರ್ಕ್ ವಿಸ್ತರಣೆಗೂ ಹೆಚ್ಚಿನ ಒತ್ತಡ ನೀಡಲಾಗಿದೆ.

1 ರೂಪಾಯಿಗೆ ಹೊಸ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಖರೀದಿ ;

ಇದೀಗ ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಹೊಸ ಕೊಡುಗೆಯನ್ನು ನೀಡಲು ಮುಂದಾಗಿದ್ದು, ಬಿಎಸ್ಎನ್ಎಲ್ ಈ ಕೊಡುಗೆ ಡಿಸೆಂಬರ್ 1 ರಿಂದ ಡಿಸೆಂಬರ್ 31 ರವರೆಗೆ ದೇಶಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಮಾನ್ಯವಾಗಿರುತ್ತದೆ. ಬಳಕೆದಾರರು 1 ರೂಪಾಯಿಗೆ ಹೊಸ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಖರೀದಿಸುವ ಮೂಲಕ ಈ ಕೊಡುಗೆಯನ್ನು ಪಡೆಯಬಹುದು. ಈ ಕೊಡುಗೆ ಹೊಸ ಬಿಎಸ್ಎನ್ಎಲ್ ಬಳಕೆದಾರರಿಗೆ ಮಾತ್ರ ಎಂದು ಕಂಪನಿಯು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದೃಢಪಡಿಸಿದೆ. ಅಸ್ತಿತ್ವದಲ್ಲಿರುವ ಬಳಕೆದಾರರು ಈ 1 ರೂಪಾಯಿ ಕೊಡುಗೆಗೆ ಅರ್ಹರಾಗಿರುವುದಿಲ್ಲ.

ಭಾರತದಾದ್ಯಂತ ಅನಿಯಮಿತ ಕರೆ ಹಾಗೂ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನ ;
ರೂ. 1 ರ ರೀಚಾರ್ಜ್‌ನೊಂದಿಗೆ, ಬಳಕೆದಾರರು ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಮತ್ತು ಭಾರತದಾದ್ಯಂತ ಅನಿಯಮಿತ ಕರೆ ಹಾಗೂ ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಇದರೊಂದಿಗೆ, ಬಳಕೆದಾರರು ಈ ಪ್ಲಾನ್‌ನಲ್ಲಿ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ ಎಂದು ವರದಿಯಾಗಿದೆ. New offer for BSNL customers in December – ತುಳು ಟೈಮ್ಸ್

ಇದನ್ನೂ ಓದಿ :ಇಮ್ರಾನ್ ಖಾನ್ ಸಾವಿನ ವದಂತಿ; ಬೆಂಬಲಿಗರು ಬೃಹತ್ ಪ್ರತಿಭಟನೆಗೆ ಸಜ್ಜು!

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page