ಬ್ರೇಕಿಂಗ್ ನ್ಯೂಸ್
ಕರ್ನಾಟಕಧಾರ್ಮಿಕ

ಹನುಮ ಜಯಂತಿಯಂದು ಅಂಜನಿಪುತ್ರನ ಕೃಪೆಗೆ ಪಾತ್ರರಾಗೋದು ಹೇಗೆ..?

ಕರ್ನಾಟಕ: Tulu Times |ನಾಡಿನಾದ್ಯಂತ ಹನುಮ ಜಯಂತಿಯ ಸಂಭ್ರಮ ಮನೆಮಾಡಿದೆ. ಭಗವಾನ್‌ ಹನುಮಂತನ ಜನ್ಮದಿನದ ಸ್ಮರಣಾರ್ಥವಾಗಿ ಈ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.

ಹನುಮನ ಸ್ಮರಣೆಯಿಂದ, ಪೂಜೆಯಿಂದ ಮತ್ತು ದರ್ಶನದಿಂದ ಜೀವನಕ್ಕೆ ಮಹತ್ವದ ಲಾಭಗಳು ದೊರೆಯುತ್ತವೆ. ಅವುಗಳೆಂದರೆ ಶಕ್ತಿ, ಭಕ್ತಿ ಮತ್ತು ಯುಕ್ತಿ.  ಹನುಮ ಜಯಂತಿಯನ್ನು  ಡಿಸೆಂಬರ್ 3 ರಂದು ಹನುಮದ್ವೃತಂ ಇದೆ. ಹನುಮನ ಪೂಜೆ ಮತ್ತು ಪುನಸ್ಕಾರಗಳನ್ನು  ಮಂಗಳವಾರ ಮತ್ತು ಶನಿವಾರದಂದು ಮಾಡಲಾಗುತ್ತದೆ.  ಈ ದಿನ ಹನುಮನ ಪೂಜೆ, ನಿರ್ದಿಷ್ಟ ಮಂತ್ರ ಪಠಣ ಮತ್ತು ಉಪವಾಸದಿಂದ ಜೀವನದಲ್ಲಿ ಶಕ್ತಿ, ಭಕ್ತಿ, ಯುಕ್ತಿ ಹೆಚ್ಚುತ್ತದೆ. ದುಷ್ಟ ಶಕ್ತಿಗಳಿಂದ ರಕ್ಷಣೆ, ಆತ್ಮವಿಶ್ವಾಸ ವೃದ್ಧಿ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕತೆ ನೀಡಬಲ್ಲ ಅತ್ಯುತ್ತಮ ಆಹಾರ…!

ದೃಷ್ಟಿದೋಷ ನಿವಾರಕ ಆಂಜನೇಯ..!

ಹನುಮ ಜಯಂತಿಯ ದಿನದಂದು ಆಚರಣೆಗಳನ್ನು ಕೈಗೊಳ್ಳಬೇಕು. ಈ ಆಚರಣೆಗಳಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದೃಷ್ಟಿ ದೋಷಗಳು, ಮಾಟ ಮಂತ್ರಗಳು, ಅಥವಾ ಯಾವುದೇ ಕೆಟ್ಟ ಪ್ರಯೋಗಗಳು ಇದ್ದರೂ ದೂರವಾಗುತ್ತವೆ. ಇದಕ್ಕಾಗಿ ಓಂ ನಮೋ ಭಗವತೇ ಹನುಮಂತ, ಹರ ಹರ ಹನುಮಂತ, ಕೇಸರಿ ನಂದನಾಯ, ಅಂಜನೀ ಪುತ್ರಾಯ, ವಾಯು ಪುತ್ರಾಯ, ಶ್ರೀರಾಮ ಪ್ರಿಯಾಯ, ರುದ್ರಾತ್ಮಕಾಯ, ಸರ್ವ ದುಷ್ಟ ಗ್ರಹ ಪೀಡಾ ನಿವಾರಕಾಯ ಕುರು ಕುರು ಸ್ವಾಹಾ.‌ ಈ ಮಂತ್ರದಿಂದ ಎಲ್ಲಾ ದುಷ್ಟ ಗ್ರಹ ಪೀಡೆಗಳು ನಿವಾರಣೆಯಾಗುತ್ತವೆ.

ಅಂಜನಿಪುತ್ರನಿಗೆ ಇಷ್ಟವಾಗುವ ತಿನಿಸುಗಳೇನು..?

ಹನುಮ ಜಯಂತಿಯಂದು ಹೂವಿನ ಅಲಂಕಾರಗಳು, ಹನುಮನಿಗೆ ಅತ್ಯಂತ ಪ್ರಿಯವಾದ ಲಡ್ಡು ಪ್ರಸಾದ, ಮತ್ತು ಹಲ್ವಾ ಅರ್ಪಿಸಬಹುದು. ಉತ್ತಮ ಆರೋಗ್ಯಕ್ಕಾಗಿ ಹನುಮನಿಗೆ ಬಾಳೆಹಣ್ಣು ಅರ್ಪಿಸುವುದು ಶುಭಕರ. ಹನುಮ ಜಯಂತಿಯ ದಿನ ಉಪವಾಸ ವ್ರತ, ದಾನ ಧರ್ಮಗಳು ಮತ್ತು ಆಹಾರ ದಾನ ಮಾಡುವುದರಿಂದ ಭಕ್ತಿ, ನಿಸ್ವಾರ್ಥತೆ, ಸಮಾಜ ಸೇವೆಯ ಭಾವನೆ ಮತ್ತು ಶಕ್ತಿ ವೃದ್ಧಿಸುತ್ತವೆ. ಅಂಜನಿ ಮತ್ತು ಕೇಸರಿಯ ಪುತ್ರನಾದ ಹನುಮನನ್ನು ಸ್ಮರಿಸುತ್ತಾ, ಓಂ ಹಂ ಹನುಮತೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸುವುದು ಉತ್ತಮ.

Today is Hanuman Jayanti..how to be blessed by Anjaniputra..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page