Puneeth ರಾಜ್ ಕುಮಾರ್ ನಿಧನ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿತ್ತು.ಪವರ್ ಸ್ಟಾರ್ ಸಿನಿಮಾಗಳನ್ನು ನೋಡಿ ಅರಾಧಿಸುತ್ತಿದ್ದ ಸಿನಿಪ್ರಿಯರಿಗೆ ನೆಚ್ಚಿನ ನಟ ಇಲ್ಲದೇ ಹೋದದ್ದು ತುಂಬಾನೆ ಬೇಸರ ತರಿಸಿದೆ.ಆದ್ರೆ ಇದೀಗ ಪುನೀತ್ ಮತ್ತೆ ಜೀವಂತವಾಗಿದ್ದಾರೆ.ಪುನೀತ್ ರನ್ನೂ ಬಿಗ್ ಸ್ಕ್ರೀನ್ ನಲ್ಲಿ ನೋಡಿ ಆನಂದಿಸಬಹುದು.
ಪಿ ಆರ್ ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾರಿಗಲ್ಲು ವೆಬ್ ಸೀರೀಸ್ ನಿರ್ಮಿಸ್ತಿದ್ದಾರೆ.ಈ ವೆಬ್ ಸೀರೀಸ್ ನಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸ್ಕೊಳ್ಳಲಿದ್ದಾರೆ.ಕದಂಬ ರಾಜವಂಶಸ್ಥರ ಕತೆ ಮಾರಿಗಲ್ಲು ವೆಬ್ ಸೀರೀಸ್ ನಲ್ಲಿ ಇರಲಿದೆ.ಕದಂಬ ವಂಶದ ಮಯೂರ ವರ್ಮನ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸ್ಕೊಳ್ತಿದ್ದಾರೆ.
ಅಂದಹಾಗೆ ಇದು ಸಾಧ್ಯವಾಗ್ತಿರೋದು ಎಐ ತಂತ್ರಜ್ಞಾನದ ಮೂಲಕ.ಎಐ ತಂತ್ರಜ್ಞಾನದಲ್ಲಿ ಪುನೀತ್ ರಾಜ್ ಕುಮಾರ್ ರನ್ನು ರಿ ಕ್ರಿಯೇಟ್ ಮಾಡಲಾಗಿದೆ.ಈಗಾಗಲೇ ನಟ ದನಂಜಯ ನಿರೂಪಣೆಯಲ್ಲಿ ಟೀಸರ್ ರಿಲೀಸಾಗಿದ್ದು ಪುನೀತರನ್ನು ಮಯೂರವರ್ಮನಾಗಿ ಕ್ರಿಯೇಟ್ ಮಾಡಿರೋ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.ಅಕ್ಟೋಬರ್ 31 ರಂದು ಜೀ5 ನಲ್ಲಿ ಮಾರಿಗಲ್ಲು ವೆಬ್ ಸೀರೀಸ್ ರಿಲೀಸಾಗಲಿದೆ.
2022 ರಲ್ಲಿ ಬಿಡುಗಡೆಯಾಗಿದ್ದ ಜೇಮ್ಸ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರವಾಗಿತ್ತು.ನಂತರದಲ್ಲಿ ಪರಿಸರ ಪ್ರಾಣಿಗಳ ಬಗ್ಗೆ ಮಾಡಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರ ರಿಲೀಸಾಗಿತ್ತು.ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಅಂತಾನೇ ಗಂಧದ ಗುಡಿಯನ್ನು ಪರಿಗಣಿಸುತ್ತಾರೆ. ನಂತರದಲ್ಲಿ ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿತ್ತು.
ಇದೀಗ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಪುನೀತ್ ರನ್ನೂ ಜೀವಂತವಾಗಿರಿಸುವ ಪ್ರಯತ್ನ ನಡೀತಿದೆ.ಮಾರಿಗಲ್ಲು ಟೀಸರ್ ನೋಡಿದಾಗ ಪುನೀತ್ ರಾಜ್ ಕುಮಾರ್ ಇನ್ನೂ ಜೀವಂತವಾಗಿದ್ದಾರೆ.ಎಂಬ ರೀತಿ ಭಾಸವಾಗುತ್ತಿದೆ.ಅಭಿಮಾನಿಗಳಿಗೆ ನೆಚ್ಚಿನ ನಟನನ್ನು ಈ ರೀತಿಯಲ್ಲಿ ನೋಡುವುದು ಮನಸ್ಸಿಗೆ ಸ್ವಲ್ಪ ಖುಷಿ ನೀಡಬಹುದು.ಮಾರಿಗಲ್ಲು ಟೀಸರ್ ನಲ್ಲಿ ಕದಂಬ ವಂಶದ ಮಯೂರವರ್ಮನ ಕತೆ ಇರಲಿದೆ.
ಕದಂಬ ವಂಶದ ಸ್ಥಾಪಕ ಮಯೂರವರ್ಮ.ಕರ್ನಾಟಕದ ಮೊದಲ ರಾಜವಂಶ ಕದಂಬ ರಾಜವಂಶ.ಮೂಲತ ಬ್ರಾಹ್ಮಣನಾದ ಮಯೂರವರ್ಮನ ಮೊದಲ ಹೆಸರು ಮಯೂರ ಶರ್ಮ.ವಿದ್ಯಾಭ್ಯಾಸಕ್ಕಾಗಿ ಪಲ್ಲವರ ರಾಜ್ಯಕ್ಕೆ ತೆರಳಿದ ಮಯೂರ ಶರ್ಮನಿಗೆ ಅಲ್ಲಿ ಅವಮಾನವಾಗುತ್ತದೆ.ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದುದರಿಂದ ಶಸ್ತ್ರವಿದ್ಯೆಯನ್ನು ಕಲಿತು ಕದಂಬ ರಾಜ್ಯವನ್ನು ಸ್ಥಾಪಿಸುತ್ತಾನೆ.ತಾಳಗುಂದ ಶಾಸನದಿಂದ ಕದಂಬರ ಕಂಪ್ಲೀಟ್ ಇತಿಹಾಸ ತಿಳಿದು ಬರುತ್ತದೆ.ಇಂತಹ ಇಂಟ್ರೆಸ್ಟಿಂಗ್ ಐತಿಹಾಸಿಕ ಕತೆ ವೆಬ್ ಸೀರೀಸ್ ಅಗಿ ಬರ್ತಿದ್ದು ಅದಕ್ಕೆ ಪುನೀತ್ ಸ್ಪರ್ಶ ಇರೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:Kantara chapter1:ವಿವಾದದಿಂದ ಚಿತ್ರಕ್ಕೆ ಕೋಟಿ ಕೋಟಿ ಲಾಭ!
……………………………………………………………………………………………………………………………..
ವೀಡಿಯೋ ಸುದ್ದಿಗಳನ್ನು ವೀಕ್ಷಣೆ ಮಾಡಲು ನಮ್ಮ ಯೂಟ್ಯೂಬ್ ಲಿಂಕ್ ಓಪನ್ ಮಾಡಿ Subscribe ಮಾಡಿ;https://www.youtube.com/@tulutimess











