ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಧಾರ್ಮಿಕ

ಕೃಷ್ಣನೂರಿನಲ್ಲಿ ಮೋದಿ ನೋಡಲು ಜನಸಾಗರ..ಕೃಷ್ಣನಂತೆ ಕಂಡ ಪ್ರಧಾನಿ..!

ಉಡುಪಿ: Tulu Times | ಇಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿ, ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಲಕ್ಷಾಂತರ ಜನ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಮಂಗಳೂರಿನ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿತ್ತು. ನವದೆಹಲಿಯಿಂದ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಮೋದಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಉಡುಪಿಯ ಹೆಲಿಪ್ಯಾಡ್’ಗೆ ಬಂದಿಳಿದರು.ನಂತರ ಅಲ್ಲಿಂದ ರೋಡ್ ಶೋ ಆರಂಭವಾಗಿದ್ದು, ದಾರಿಯುದ್ದಕ್ಕೂ ಲಕ್ಷಾಂತರ ಮಂದಿ ಹೂಮಳೆ ಸುರಿಸಿದ್ದಾರೆ. ಉಡುಪಿಯಿಂದ ಕೃಷ್ಣ ಮಠದವರೆಗೂ ಮೋದಿ ರೋಡ್ ಶೋದಲ್ಲಿ ಅಭಿಮಾನಿಗಳತ್ತ ಕೈ ಬೀಸಿ ಸಾಗಿದ್ದಾರೆ. ಈ ವೇಳೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ರೋಡ್ ಶೋ ಪ್ರಾರಂಭವಾಗಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನಿಂತು ಜೈಘೋಷ ಹಾಕಿ, ಹೂಮಳೆ ಸುರಿಸಿ, ನೆಚ್ಚಿನ ನಾಯಕನನ್ನು  ನೋಡಿ ಕಣ್ತುಂಬಿಕೊಂಡರು.

ತಲೆಯಲ್ಲಿ ನವಿಲುಗರಿ ಇಟ್ಟುಕೃಷ್ಣನಂತೆ ಕಂಡ ಮೋದಿ!

ಇನ್ನು ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ  ಮೋದಿ ಅವರು ನವ ಸಂಕಲ್ಪ ಮಾಡಿದ್ದು, ದೇಶದ ಅಭಿವೃದ್ಧಿಗೆ 9 ಸೂತ್ರಗಳನ್ನು ಒತ್ತಿ ಹೇಳಿದ್ದಾರೆ. ನೆರೆದಿದ್ದ ಜನರನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ, ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ, ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದರು. ಜಲ ಸಂರಕ್ಷಣೆ’, ನೀರಿಲ್ಲದೆ ಜೀವನ ಇಲ್ಲ, ಹಾಗಾಗಿ ಪ್ರತಿ ಹನಿ ನೀರನ್ನೂ ಉಳಿಸೋದು ನಮ್ಮ ಆದ್ಯತೆ ಆಗಬೇಕು. ಎರಡನೇದು ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ. ಮೂರನೇ ಸಂಕಲ್ಪ, ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ದೇಶ ಹಸಿರಾಗುತ್ತೆ ಎಂದರು. ರೈತರಿಗೆ ಕಿವಿಮಾತು ಹೇಳಿದ ಮೋದಿ, ನಾಲ್ಕನೇ ಸಂಕಲ್ಪವಾಗಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ ಎಂದರು.  5ನೇ ಸಂಕಲ್ಪ ‘ಸ್ವದೇಶಿ ವಸ್ತುಗಳ ಬಳಕೆ’ಗೆ ಒತ್ತು ಕೊಡಿ ಎಂದರು. ಇನ್ನು ಪ್ರಧಾನಿ ಮೋದಿ ತಲೆಗೆ ನವಿಲುಗರಿ ಇಟ್ಟುಕೊಂಡು ಸಾಕ್ಷ್ಯಾತ್‌ ಕೃಷ್ಣನಂತೆ ಕಂಡರು.

ಲಕ್ಷ ಕಂಠ ಗೀತಾವಾಚನ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಗೌರವಾನ್ವಿತ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಶಾಸಕರಾದ ಯಶಪಾಲ ಸುವರ್ಣ, ವಿ. ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಪ್ರಮುಖರು ಪಾಲ್ಗೊಂಡಿದ್ದರು.

Modi in Krishna’s village.. The Prime Minister looked like Krishna..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page